ಕಡಂಗ ಮೇ 15 NEWS DESK : ಮನ್ಶ ಉಲ್ ಉಲೂಂ ಕಡಂಗ ಮದ್ರಸ ವಿದ್ಯಾರ್ಥಿಗಳಿಗೆ ಯೂಸುಫ್ ಮುಸ್ಲಿಯಾರ್ ಕುಟುಂಬದ ವತಿಯಿಂದ ಉಚಿತ ಮದ್ರಸ ಪಠ್ಯ ಪುಸ್ತಕ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಲ್ಲ್ ಖತೀಬ್ ರಫೀಖ್ ಲತೀಫಿ, ಸದರ್ ಮುಅಲ್ಲಿಂ ಸುಹೈಬ್ ಫೈಝಿ, ಯೂಸುಫ್ ಮುಸ್ಲಿಯಾರ್, ಜಮಾಅತ್ ಕಾರ್ಯದರ್ಶಿ ಅಬ್ದುರ್ರಹ್ಮಾನ್, ಸಮಿತಿ ಸದಸ್ಯರಾದ ರಝಾಖ್ ಸಹ ಅಧ್ಯಾಪಕರುಗಳಾದ ಹನೀಫ್ ಮುಸ್ಲಿಯಾರ್, ಮಮ್ಮಿ ಉಸ್ತಾದ್, ನಾಸರ್ ಫೈಝಿ ಹಾಗೂ ಅಹ್ಮದ್ ಹಾಜರಿದ್ದರು.
ವರದಿ : ನೌಫಲ್








