Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಕುಶಾಲನಗರ ಚತುಷ್ಪಥ ಹೆದ್ದಾರಿಗೆ ಆರಂಭಿಕ ತೊಡಕು
ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ

ಕುಶಾಲನಗರ ಚತುಷ್ಪಥ ಹೆದ್ದಾರಿಗೆ ಆರಂಭಿಕ ತೊಡಕು

ಮೇ 20, 20243 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮೈಸೂರು ಮೇ 20 NEWS DESK : ಶ್ರೀರಂಗಪಟ್ಟಣ- ಕುಶಾಲನಗರ ಚತುಷ್ಪಥ ಹೆದ್ದಾರಿಗೆ ಭೂಮಿ ನೀಡುವ ರೈತರಿಗೆ ಎಕರೆಗೆ ಕನಿಷ್ಟ 40 ಲಕ್ಷ ನೀಡಬೇಕು ಮತ್ತು  ಕುಟುಂಬದ ಒರ್ವರಿಗೆ  ಉದ್ಯೋಗ ಕಲ್ಪಿಸಲು ಆಗ್ರಹಿಸಿ  ಗ್ರಾಮಸ್ಥರು  ಸರ್ವೆ ಕಾರ್ಯಕ್ಕೆ ತಡೆ ಒಡ್ಡಿರುವ ಘಟನೆ ಹುಣಸೂರು ಸಮೀಪದ ಅಗ್ರಹಾರ ಗ್ರಾಮದಲ್ಲಿ ಶುಕ್ರವಾರ  ನಡೆದಿದೆ. ತಾಲೂಕಿನ ಗಾವಡಗೆರೆ ಹೋಬಳಿಯ ಅಗ್ರಹಾರಕ್ಕೆ ಸರ್ವೆ ನಡೆಸಲು ತೆರಳಿದ್ದ ಅಧಿಕಾರಿಗಳನ್ನು ತಡೆದ ರೈತರು ಅವರನ್ನು ವಾಪಸ್ ಕಳುಹಿಸಿದ್ದು, ಹೆದ್ದಾರಿ ನಿರ್ಮಾಣ ಕಾರ್ಯಕ್ಕೆ ತೊಡಕಾಗಿದೆ. ಈ ಹೆದ್ದಾರಿ ನಿರ್ಮಾಣ ಕಾರ್ಯಕ್ಕೆ ಕೇಂದ್ರ ಸರಕಾರ ಈಗಾಗಲೆ 3,500 ಕೋಟಿ ರೂಪಾಯಿಗಳನ್ನು  ಬಿಡುಗಡೆಗೊಳಿಸಿದ್ದು, ಖಾಸಗಿ ಜಮೀನು ಸ್ವಾಧೀನ ಪ್ರಕ್ರಿಯೆ ಆರಂಭವಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದು ಗುತ್ತಿಗೆದಾರರು ಕಾಮಗಾರಿ ಆರಂಭಿಸಲು  ಈಗಾಗಲೇ ಸಾಮಗ್ರಿ ದಾಸ್ತಾನು ಮಾಡಿದ್ದಾರೆ. ಹುಣಸೂರು , ಪಿರಿಯಾಪಟ್ಟಣ ತಾಲ್ಲೂಕಿನ ಬಹುತೇಕ ರೈತರು ಭೂಮಿಯನ್ನು ಬಿಟ್ಟುಕೊಟ್ಟು ಸೂಕ್ತ ಪರಿಹಾರವನ್ನೂ ಪಡೆದುಕೊಂಡಿದ್ದಾರೆ. ಇನ್ನು ಕೆಲವಡೆಗಳಲ್ಲಿ ಭೂಸ್ವಾಧೀನ ಆಗಬೇಕಾಗಿದ್ದು ಈ ಉದ್ದೇಶಿತ 4130 ಕೋಟಿ ರೂಪಾಯಿಗಳ 92 ಕಿಲೋಮೀಟರ್‌ ಉದ್ದದ ಹೆದ್ದಾರಿಯ ಕಾಮಗಾರಿ  2026 ರ ಡಿಸೆಂಬರ್‌ ವೇಳೆಗೆ ಪೂರ್ಣಗೊಳ್ಳಲಿದೆ.  ಅಗ್ರಹಾರ ಗ್ರಾಮದಲ್ಲಿ ಹೆದ್ದಾರಿಯು ಸುಮಾರು 4.9 ಕಿಲೋಮೀಟರ್‌ ಗಳಷ್ಟು ಉದ್ದಕ್ಕೆ ಹಾದು ಹೋಗಲಿದ್ದು  60 ಮೀಟರ್‌ ಅಗಲದವರೆಗೆ  ಭೂಸ್ವಾಧೀನ ಮಾಡಿಕೊಳ್ಳಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ನಿಗಮ ಉದ್ದೇಶಿಸಿದೆ.  ಹೆದ್ದಾರಿ ನಿಗಮವು ಪರಿಹಾರ ನೀಡುವಾಗ  ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ದಾಖಲಾಗಿರುವ ಜಮೀನಿನ ಮಾರಾಟ ಮೌಲ್ಯ ಕ್ಕೆ ಅಷ್ಟೇ ಮೊತ್ತದ ಹಣವನ್ನು ಸೇರಿಸಿ ನಂತರ ಅದಕ್ಕೆ  ಶೇಕಡಾ 30 ರಷ್ಟು ಸೋಲೇಟಿಯಂ (Solatium) ನಷ್ಟ ಪರಿಹಾರವನ್ನೂ ಸೇರಿಸಿ ದರ ನಿಗದಿ ಮಾಡುತ್ತದೆ. ಅಂದರೆ ಇದು ಸರ್ಕಾರ ನಿಗದಿಪಡಿಸಿರುವ ಮೌಲ್ಯಕ್ಕಿಂತ  ಸುಮಾರು ಮೂರು ಪಟ್ಟು ಹೆಚ್ಚಾಗುತ್ತದೆ. ಈಗ ಸರ್ಕಾರ ಇಲ್ಲಿ ಎಕರೆಯೊಂದಕ್ಕೆ ಸುಮಾರು 18 ಲಕ್ಷ ರೂಪಾಯಿಗಳ ವರೆಗೆ ದರ ನಿಗದಿ ಮಾಡಿದೆ. ಆದರೆ ಕೆಲ ಮದ್ಯವರ್ತಿಗಳು ಸೇರಿಕೊಂಡು  ನಿಮಗೆ ಇನ್ನೂ ದುಪ್ಪಟ್ಟು ದರ ಸಿಗಬೇಕು  ಎಂದು ರೈತರಿಗೆ ಆಮಿಷವೊಡ್ಡಿ ಪ್ರಚೋದನೆ ನೀಡಿ ಪ್ರತಿಭಟನೆಗೆ ಇಳಿಸಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಹೀಗಾಗಿ ರೈತರು 40 ಲಕ್ಷ ರೂಪಾಯಿ ಪರಿಹಾರಕ್ಕೆ ಒತ್ತಾಯಿಸಿ ಸರ್ಕಾರಿ ಕಾರ್ಯಕ್ಕೆ ತಡೆ ಒಡ್ಡಿದ್ದಾರೆ.  ಶುಕ್ರವಾರ ಸರ್ವೆಗೆ ತಡೆ ಒಡ್ಡಿದ  ನಂತರ ಸ್ಥಳಕ್ಕೆ ತೆರಳಿದ  ಹುಣಸೂರು ತಹಸೀಲ್ದಾರ್‌ ಡಾ ನಯನಾ, ಬಿಳಿಕೆರೆ ಇನ್ಸ್‌ಪೆಕ್ಟರ್‌ ಲೋಲಾಕ್ಷಿ , ಕರ್ನಾಟಕ ರಾಜ್ಯ  ಭೂ ಸ್ವಾಧೀನ ಅಧಿಕಾರಿ ಡಾ.ವೆಂಕಟರಾಜು ಅವರು ರೈತರ ಮನವೊಲಿಸಿ ಸರ್ವೆಗೆ ಮುಂದಾದರೂ ರೈತರು ಡಿಸಿ ಬರಬೇಕೆಂದು ಬಿಗಿ ಪಟ್ಟು ಹಿಡಿದರು. ನಂತರ ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಅವರೊಂದಿಗೆ ಕರೆ ಮಾಡಿಸಿ ಮಾತನಾಡಿದಾಗ ಜಿಲ್ಲಾಧಿಕಾರಿಗಳು ಚುನಾವಣೆ ಮುಗಿದ ನಂತರ ರೈತರೊಂದಿಗೆ ಸಭೆ ನಡೆಸಿ ಸರ್ಕಾರೀ ಮಾನದಂಡಗಳ ಪ್ರಕಾರ ಪರಿಹಾರ ನಿಗದಿ ಪಡಿಸುವುದಾಗಿ ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಭೂಸ್ವಾಧೀನ ಅಧಿಕಾರಿ ಡಾ ವೆಂಕಟ ರಾಜು ಅವರು  ಈಗ ಸರ್ವೆ ಮಾಡಲು ಅವಕಾಶ ಕೊಡಿ , ಏಕೆಂದರೆ ಕೆಲಸ ಆರಂಭಗೊಳ್ಳಬೇಕಿದೆ, ಉದ್ದೇಶಿತ ರಸ್ತೆಯ ಒಂದು ಅಡಿ ವ್ಯಾಸ  20 ಅಡಿ ಆಳದವರೆಗೂ ಮಣ್ಣನ್ನು ತೆಗೆದು ಪರೀಕ್ಷೆಗೆ ಕಳಿಸಬೇಕಿದೆ. ಭೂಮಿಯಲ್ಲಿ ಕಾಮಗಾರಿ ಆರಂಭಕ್ಕೂ ಮೊದಲೇ ಜಿಲ್ಲಾಧಿಕಾರಿಗಳು ನಿಗದಿಪಡಿಸುವ ಪರಿಹಾರವನ್ನು ಪಡೆದುಕೊಳ್ಳಿ ಎಂದು ವಿನಂತಿಸಿದರೂ ಮಣ್ಣು ತೆಗೆಯಲೂ ಬಿಡಲಿಲ್ಲ ಎಂದು ಹೇಳಿದರು. 92 ಕಿಮೀ ಉದ್ದದ ಈ ಹೆದ್ದಾರಿಯು ಸಂಸದ ಪ್ರತಾಪ್‌ ಸಿಂಹ ಅವರ ಆಸಕ್ತಿಯಿಂದಾಗಿ  ರಾಷ್ಟ್ರೀಯ ಹೆದ್ದಾರಿ ನಿಗಮವು (National highway authority of India) ಕೆಲಸವನ್ನು ಕೈಗೆತ್ತಿಕೊಂಡಿದೆ.
ಈ ನಾಲ್ಕು ಪಥದ ರಸ್ತೆಯ ಜೊತೆ ಸರ್ವೀಸ್ ರಸ್ತೆಗಳು  ಇರಲಿವೆ. ಈ ಯೋಜನೆಗೆ ಒಟ್ಟು 1,351.67 ಎಕರೆ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ 691.89 ಎಕರೆ ಸ್ವಾಧೀನ ಪ್ರಕ್ರಿಯೆ ಮುಗಿದಿದ್ದು, 477 ಕೋಟಿ ಪರಿಹಾರವನ್ನು ಈಗಾಗಲೇ ನೀಡಲಾಗಿದೆ. ಒಟ್ಟು ಎರಡು ಪ್ಯಾಕೇಜ್‌ಗಳಲ್ಲಿ ಈ ಕಾಮಗಾರಿ ನಡೆಯುವ ನಿರೀಕ್ಷೆ ಇದ್ದು  ಶ್ರೀರಂಗಪಟ್ಟಣ-ಹುಣಸೂರು, ಹುಣಸೂರು-ಕುಶಾಲನಗರ ಎಂದು ಕಾಮಗಾರಿಯನ್ನು ಎರಡು ಪ್ಯಾಕೇಜ್ ಮಾಡಲಾಗುತ್ತದೆ. ಮೊದಲ ಹಂತದ ಶ್ರೀರಂಗಪಟ್ಟಣ-ಹುಣಸೂರು ಕಾಮಗಾರಿ ಮೊದಲು ಆರಂಭವಾಗಲಿದೆ. ಮೈಸೂರು-ಮಡಿಕೇರಿ ಮಾರ್ಗದಲ್ಲಿ ವಾಹನ ದಟ್ಟಣೆ ಹೆಚ್ಚಿರುವ  ಹಿನ್ನೆಲೆಯಲ್ಲಿ ನೂತನ  ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗುತ್ತದೆ.  ಈ ಹೆದ್ದಾರಿ ಯೋಜನೆಯಲ್ಲಿ ಪಿರಿಯಾಪಟ್ಟಣ ಮತ್ತು ಕುಶಾಲನಗರ ಭಾಗದಲ್ಲಿ 135 ಎಕರೆ ಅರಣ್ಯ ಭೂಮಿ ಇದ್ದು  ಇಲ್ಲಿ ಕಾಮಗಾರಿಯನ್ನು ಕೈಗೊಳ್ಳಲು ಕಳೆದ  ಜನವರಿ 29ರಂದು ಅನುಮತಿಯೂ ಸಿಕ್ಕಿದೆ. ಯೋಜನಾ ವೆಚ್ಚ 4,130 ಕೋಟಿ ರೂಪಾಯಿ ಆಗಿದ್ದು  ಇದರಲ್ಲಿ ಭೂ ಸ್ವಾಧೀನ ಪರಿಹಾರಕ್ಕೆ 1,100 ಕೋಟಿ ರೂ. ನೀಡಲಾಗುತ್ತದೆ.  ಈ ಹೆದ್ದಾರಿ  ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಪಾಲಹಳ್ಳಿಯಿಂದ ಆರಂಭಗೊಳ್ಳಲಿದ್ದು  ಕೊಡಗು ಜಿಲ್ಲೆಯಲ್ಲಿ 2.3 ಕಿ. ಮೀ., ಮೈಸೂರು ಜಿಲ್ಲೆಯಲ್ಲಿ 75.9 ಕಿ. ಮೀ. ಮತ್ತು ಮಂಡ್ಯದಲ್ಲಿ 14 ಕಿ. ಮೀ.  ಹಾದು ಹೋಗಲಿದೆ.  ಈ ಹೆದ್ದಾರಿ  ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ ವೇ ಗೆ ಸಂಪರ್ಕಗೊಳ್ಳಲಿದ್ದು ಪೂರ್ಣಗೊಂಢ ನಂತರ ಮಡಿಕೇರಿಯಿಂದ ಕೆಂಗೇರಿಯನ್ನು  ಮೂರು  ಘಂಟೆಗಳಲ್ಲಿ ತಲುಪಬಹುದಾಗಿದೆ.  (ವರದಿ : ಕೋವರ್‌ ಕೊಲ್ಲಿ ಇಂದ್ರೇಶ್‌ ) 

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

ಮಡಿಕೇರಿಯಲ್ಲಿ ಮಕ್ಕಳ ದಸರಾ ಸಂಭ್ರಮ : ವಿದ್ಯಾರ್ಥಿಗಳ ಪ್ರತಿಭೆಗೆ ಪೋಷಕರ ಪ್ರೋತ್ಸಾಹ ಅಗತ್ಯ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್

ಅಕ್ಟೋಬರ್ 16, 2026

ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ : ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ

ಅಕ್ಟೋಬರ್ 16, 2026

ಶಿರಂಗಾಲದಲ್ಲಿ ಎಸ್.ವಿ. ನಂಜುಂಡಪ್ಪ ಅವರಿಗೆ ನುಡಿನಮನ; ನಿಸ್ವಾರ್ಥ ಸಾಮಾಜಿಕ ಸೇವೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಸಮಾಜ ಮನ್ನಣೆ ನೀಡಲಿ: ಅರಮೇರಿ ಸ್ವಾಮೀಜಿ

ಅಕ್ಟೋಬರ್ 16, 2026

ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ : ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ

ಅಕ್ಟೋಬರ್ 16, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಅ.16 NEWS DESK : ತಲಕಾವೇರಿಯಲ್ಲಿ ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸಿದ್ಧತೆಗಳು…

ಶಿರಂಗಾಲದಲ್ಲಿ ಎಸ್.ವಿ. ನಂಜುಂಡಪ್ಪ ಅವರಿಗೆ ನುಡಿನಮನ; ನಿಸ್ವಾರ್ಥ ಸಾಮಾಜಿಕ ಸೇವೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಸಮಾಜ ಮನ್ನಣೆ ನೀಡಲಿ: ಅರಮೇರಿ ಸ್ವಾಮೀಜಿ

ಅಕ್ಟೋಬರ್ 16, 2026

ರೋಟರಿ ಮಿಸ್ಟಿ ಹಿಲ್ಸ್‌ನ 13ನೇ ವರ್ಷದ ಮಕ್ಕಳ ದಸರಾ ಯಶಸ್ವಿ; ಮಂಟಪ ನಿರ್ಮಾಣ ಸ್ಪರ್ಧೆಯಲ್ಲಿ ಟೀಮ್ ಅಗ್ನಿಗೆ ಪ್ರಥಮ ಬಹುಮಾನ; ಸತತ ಮೂರು ವರ್ಷಗಳ ಹ್ಯಾಟ್ರಿಕ್ ಸಾಧನೆ

ಅಕ್ಟೋಬರ್ 16, 2026

ಅ.17 ರಂದು ಕೊಡಗು ಜಿಲ್ಲೆಯಲ್ಲಿ ಕಾವೇರಿ ತುಲಾ ಸಂಕ್ರಮಣದ ರಜೆ

ಅಕ್ಟೋಬರ್ 16, 2026

ಅ.17ಕ್ಕೆ ಕೊಡಗು ಜಿಲ್ಲೆಯಲ್ಲಿ ತುಲಾ ಸಂಕ್ರಮಣದ ರಜೆ

ಅಕ್ಟೋಬರ್ 16, 2026

ಕಡಗದಾಳಿನಲ್ಲಿ ಎನ್‌ಎಸ್‌ಎಸ್ ಶಿಬಿರದ ಸಮಾರೋಪ : ಸಮಾಜದ ಅಭಿವೃದ್ಧಿಗೆ ವಿದ್ಯಾರ್ಥಿಗಳು ಕೊಡುಗೆ ನೀಡಲಿ : ಮೇಜರ್ ಪ್ರೊ. ರಾಘವ ಬಿ.

ಅಕ್ಟೋಬರ್ 15, 2026

ಅ.17 ರಂದು ಉಸ್ತುವಾರಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಕೊಡಗಿಗೆ ಭೇಟಿ

ಅಕ್ಟೋಬರ್ 15, 2026

ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5860 ಪ್ರಕರಣಗಳು ಇತ್ಯರ್ಥ

ಅಕ್ಟೋಬರ್ 15, 2026

ಅ.16 ರಂದು ಮಕ್ಕಳ ದಸರಾ ಸಂಭ್ರಮ: ಮಕ್ಕಳಿಂದ ವೈವಿದ್ಯಮಯ ಸ್ಪರ್ಧೆಗಳು

ಅಕ್ಟೋಬರ್ 15, 2026

ಗೋಣಿಕೊಪ್ಪಲು : ಅ.16 ರಂದು ವಿದ್ಯುತ್ ವ್ಯತ್ಯಯ

ಅಕ್ಟೋಬರ್ 15, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.