Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • ಕೊಡಗು ಜಿಲ್ಲಾ ಪೊಲೀಸ್ ಕಚೇರಿಗೆ ಡಾ. ಎಂ.ಬಿ.ಬೋರಲಿಂಗಯ್ಯ ಅವರು ಭೇಟಿ : ಅಧಿಕಾರಿಗಳೊಂದಿಗೆ ಸಮಾಲೋಚನೆ*
  • *ಮಡಿಕೇರಿ : ಮಾ.27 ರಂದು ನಗರಸಭೆ ಕೌನ್ಸಿಲ್‍ನ ಸಾಮಾನ್ಯ ಸಭೆ*
  • *ಕಾಫಿ ತೋಟದಲ್ಲಿ ಹುಲಿ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಆತಂಕ*
  • *ಜ್ಞಾನ ಕಾವೇರಿ ಆವರಣದಲ್ಲಿ ಯುವ ಆಪತ್ ಮಿತ್ರ ತರಬೇತಿ ಶಿಬಿರ*
  • *ದೇವಟ್ ಪರಂಬುವಿನಲ್ಲಿ ಪುಷ್ಪ ನಮನ ಸಲ್ಲಿಸಿದ ಸಿಎನ್‌ಸಿ : ವಿವಿಧ ಹಕ್ಕೊತ್ತಾಯಗಳ ಮಂಡನೆ*
  • *ಚೇರಂಬಾಣೆಯಲ್ಲಿ ಹೆಚ್‍ಪಿವಿ ಲಸಿಕೆ ವಿತರಣೆ*
  • *ಸುಂಟಿಕೊಪ್ಪ : ಹೊಲಿಗೆ ತರಬೇತಿದಾರರಿಗೆ ಪ್ರಮಾಣಪತ್ರ ವಿತರಣೆ*
  • *ಡಾ.ಬಾಬು ಜಗಜೀವನ್ ರಾಂ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಅರ್ಥಪೂರ್ಣವಾಗಿ ಆಚರಣೆಗೆ ನಿರ್ಧಾರ*
  • *ಕೊಡಗು ವಿದ್ಯಾಲಯದಲ್ಲಿ ಏಪ್ರಿಲ್ 1 ರಿಂದ ಸಮಾಗಮ ಬೇಸಿಗೆ ಶಿಬಿರ ಮಕ್ಕಳ ರಜೆಯಲ್ಲಿ ಜ್ಞಾನಾನಂದ- ಪ್ರತಿಭೆ ಬೆಳಕಿಗೆ ತರಲು ಸಹಕಾರಿಯಾಗಲಿರುವ ಬೇಸಿಗೆ ಶಿಬಿರ*
  • *ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸರ್ಕಾರಿ ಶುಶ್ರೂಷಾ ಕಾಲೇಜು ಮಡಿಕೇರಿಯಲ್ಲಿ ನರ್ಸಿಂಗ್ ವಿದ್ಯಾರ್ಥಿಗಳ ದೀಪ ಬೆಳಗುವಿಕೆ ಮತ್ತು ಪ್ರತಿಜ್ಞಾ ವಿಧಿ ಕಾರ್ಯಕ್ರಮ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಬ್ಯೂಟೀಷಿಯನ್ ಮತ್ತು ಬ್ರೈಡಲ್ ಮೇಕಪ್ ತರಬೇತಿ ಶಿಬಿರ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಬ್ಯೂಟೀಷಿಯನ್ ಮತ್ತು ಬ್ರೈಡಲ್ ಮೇಕಪ್ ತರಬೇತಿ ಶಿಬಿರ*

ಮೇ 25, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಮೇ 25 NEWS DESK :  ಸ್ವ ಉದ್ಯೋಗಗಳಲ್ಲಿ ಮಹಿಳೆಯರು ಆಸಕ್ತಿಯಿಂದ ತೊಡಗಿಸಿಕೊಳ್ಳುವ ಮೂಲಕ ಆರ್ಥಿಕ ಸ್ವಾವಲಂಬಿಗಳಾಗಿ ಶಾಂತಿ ನೆಮ್ಮದಿಯ ಬದುಕನ್ನು ಕಾಣುವಂತಾಗಬೇಕೆನ್ನುವ ಆಶಯವನ್ನು ನಬಾರ್ಡ್ ಜಿಲ್ಲಾ ಅಧಿಕಾರಿ ರಮೇಶ್ ಬಾಬು ವ್ಯಕ್ತಪಡಿಸಿದರು.

ನಗರದ ಬಸಪ್ಪ ಶಿಶು ವಿಹಾರ ಸಭಾಂಗಣದಲ್ಲಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ನಬಾರ್ಡ್) ಮತ್ತು ಮಹಿಳೋದಯ ಮಹಿಳಾ ಒಕ್ಕೂಟ(ಓಡಿಪಿ)ದ ಸಂಯಕ್ತಾಶ್ರಯದಲ್ಲಿ ಮಡಿಕೇರಿ ಮತ್ತು ಕುಶಾಲನಗರದ ಅರವತ್ತು ಮಹಿಳೆಯರಿಗೆ ಆಯೋಜಿಸಲಾಗಿದ್ದ ‘ಬ್ಯೂಟೀಷಿಯನ್ ಮತ್ತು ಬ್ರೈಡಲ್ ಮೇಕಪ್ ತರಬೇತಿ ಶಿಬಿರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಬಾರ್ಡ್ ಸಂಸ್ಥೆಯು ರಾಷ್ಟ್ರದ ಮಹಿಳೆಯರು ಮತ್ತು ರೈತರ ಅಭಿವೃದ್ಧಿಗೋಸ್ಕರ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಕೊಡಗು ಜಿಲ್ಲೆಗೆ ಸೀಮಿತವಾಗಿ ಮಹಿಳೆಯರಿಗೆ ವಿವಿಧ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಈಗ ನಡೆಸಲಾಗುತ್ತಿರುವ ಬ್ಯೂಟೀಷಿಯನ್ ಮತ್ತು ಬ್ರೈಡಲ್ ಮೇಕಪ್ ತರಬೇತಿ ಪಡೆದ ಮಹಿಳೆಯರು ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಂಡು ಸ್ವ ಉದ್ಯೋಗವನ್ನು ಪ್ರಾರಂಭಿಸುವುದರ ಮೂಲಕ ತಮ್ಮ ಕಾಲ ಮೇಲೆ ತಾವು ನಿಲ್ಲಲು ಮುಂದಾಗಬೇಕೆಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಮೈಸೂರು ಓಡಿಪಿ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ಅಲೆಕ್ಸ್ ಪ್ರಶಾಂತ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಬ್ಯೂಟೀಷಿಯನ್ ಮತ್ತು ಬ್ರೈಡಲ್ ಮೇಕಪ್‍ಗೆ ಸಾಕಷ್ಟು ಬೇಡಿಕೆ ಇದೆ. ಇಲ್ಲಿ ತರಬೇತಿ ಪಡೆದ ನಂತರ ನಿರಂತರವಾದ ಪ್ರಯತ್ನದಿಂದ ಅನುಭವವನ್ನು ಪಡೆದು, ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಸ್ವ ಉದ್ಯೋಗದಲ್ಲಿ ಮಹಿಳೆಯರು ತಮ್ಮನ್ನು ತೊಗಿಸಿಕೊಳ್ಳಬೇಕು. ಆ ಮೂಲಕ ಸ್ವಾವಲಂಬಿ ಜೀವನ ನಡೆಸಲು ಮುಂದಾಗಬೇಕು. ನಿಮ್ಮ ಇಂತಹ ಪ್ರಯತ್ನ ಇತರರಿಗೂ ಪ್ರೇರಣಾದಾಯಕವಾಗಬೇಕೆಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಧನರಾಜ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸೌಂದರ್ಯ ಸಂಬಂಧಿ ವಿಚಾರಗಳಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ.ಈ ಹಿನ್ನೆಲೆಯಲ್ಲಿ ಬ್ಯೂಟೀಷಿಯನ್ ಮತ್ತು ಬ್ರೈಡಲ್ ಮೇಕಪ್ ತರಬೇತಿ ಪಡೆದ ನಂತರ ಮಹಿಳೆÉಯರು ಮನೆಯಲ್ಲೆ ಕೂರದೆ, ಸ್ವ ಉದ್ಯೋಗವನ್ನು ಆರಂಭಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗುವ ನಿಟ್ಟಿನಲ್ಲಿ ಹೆಜ್ಜೆಗಳನ್ನಿರಿಸಬೇಕು ಎಂದರು.

ಮುಖ್ಯ ಅತಿಥಿ ಗಂಗಾಧರ್ ನಾಯಕ್ ಮಾತನಾಡಿ, ಬ್ಯೂಟೀಷಿಯನ್ ಮತ್ತು ಬ್ರೈಡಲ್ ಮೇಕಪ್ ತರಬೇತಿ ಪಡೆದವರು ಬ್ಯಾಂಕ್‍ನಿಂದ ದೊರಕುವ ಸೌಲಭ್ಯಗಳನ್ನು ಪಡೆದು ಸ್ವಂತ ಉದ್ದಿಮೆ ಆರಂಭಿಸುವಂತೆ ಕಿವಿ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೈಸೂರು ಓಡಿಪಿ ಸಂಯೋಜಕರುಗಳಾದ ಮೋಲಿ ಪೊಡ್ತಾದೋ, ಲಲಿತಾ, ಜಿಲ್ಲಾ ವಲಯ ಸಂಯೋಜಕರಾದ ಜಾಯ್ಸ್ ಮಿನೇಜಸ್, ಮೈಸೂರು ಓಡಿಪಿಯ ಮೆಲ್ವಿನ್, ಕಾರ್ಯಕರ್ತೆ ವಿಜಯ ನಾರಾಯಣ, ಮಮತಾ, ತರಬೇತುದಾರರಾದ ರಾಣಿ ಡಿಸೋಜ ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

ಕೊಡಗು ಜಿಲ್ಲಾ ಪೊಲೀಸ್ ಕಚೇರಿಗೆ ಡಾ. ಎಂ.ಬಿ.ಬೋರಲಿಂಗಯ್ಯ ಅವರು ಭೇಟಿ : ಅಧಿಕಾರಿಗಳೊಂದಿಗೆ ಸಮಾಲೋಚನೆ*

ಮಾರ್ಚ್ 25, 2026

*ಮಡಿಕೇರಿ : ಮಾ.27 ರಂದು ನಗರಸಭೆ ಕೌನ್ಸಿಲ್‍ನ ಸಾಮಾನ್ಯ ಸಭೆ*

ಮಾರ್ಚ್ 25, 2026

*ಕಾಫಿ ತೋಟದಲ್ಲಿ ಹುಲಿ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಆತಂಕ*

ಮಾರ್ಚ್ 25, 2026

*ಮಡಿಕೇರಿ : ಮಾ.27 ರಂದು ನಗರಸಭೆ ಕೌನ್ಸಿಲ್‍ನ ಸಾಮಾನ್ಯ ಸಭೆ*

ಮಾರ್ಚ್ 25, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಮಾ.25 NEWS DESK : ನಗರಸಭೆ ಕೌನ್ಸಿಲ್‍ನ ಸಾಮಾನ್ಯ ಸಭೆಯು ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್…

*ಕಾಫಿ ತೋಟದಲ್ಲಿ ಹುಲಿ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಆತಂಕ*

ಮಾರ್ಚ್ 25, 2026

*ಜ್ಞಾನ ಕಾವೇರಿ ಆವರಣದಲ್ಲಿ ಯುವ ಆಪತ್ ಮಿತ್ರ ತರಬೇತಿ ಶಿಬಿರ*

ಮಾರ್ಚ್ 25, 2026

*ದೇವಟ್ ಪರಂಬುವಿನಲ್ಲಿ ಪುಷ್ಪ ನಮನ ಸಲ್ಲಿಸಿದ ಸಿಎನ್‌ಸಿ : ವಿವಿಧ ಹಕ್ಕೊತ್ತಾಯಗಳ ಮಂಡನೆ*

ಮಾರ್ಚ್ 25, 2026

*ಚೇರಂಬಾಣೆಯಲ್ಲಿ ಹೆಚ್‍ಪಿವಿ ಲಸಿಕೆ ವಿತರಣೆ*

ಮಾರ್ಚ್ 25, 2026

*ಸುಂಟಿಕೊಪ್ಪ : ಹೊಲಿಗೆ ತರಬೇತಿದಾರರಿಗೆ ಪ್ರಮಾಣಪತ್ರ ವಿತರಣೆ*

ಮಾರ್ಚ್ 25, 2026

*ಡಾ.ಬಾಬು ಜಗಜೀವನ್ ರಾಂ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಅರ್ಥಪೂರ್ಣವಾಗಿ ಆಚರಣೆಗೆ ನಿರ್ಧಾರ*

ಮಾರ್ಚ್ 25, 2026

*ಕೊಡಗು ವಿದ್ಯಾಲಯದಲ್ಲಿ ಏಪ್ರಿಲ್ 1 ರಿಂದ ಸಮಾಗಮ ಬೇಸಿಗೆ ಶಿಬಿರ ಮಕ್ಕಳ ರಜೆಯಲ್ಲಿ ಜ್ಞಾನಾನಂದ- ಪ್ರತಿಭೆ ಬೆಳಕಿಗೆ ತರಲು ಸಹಕಾರಿಯಾಗಲಿರುವ ಬೇಸಿಗೆ ಶಿಬಿರ*

ಮಾರ್ಚ್ 25, 2026

*ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸರ್ಕಾರಿ ಶುಶ್ರೂಷಾ ಕಾಲೇಜು ಮಡಿಕೇರಿಯಲ್ಲಿ ನರ್ಸಿಂಗ್ ವಿದ್ಯಾರ್ಥಿಗಳ ದೀಪ ಬೆಳಗುವಿಕೆ ಮತ್ತು ಪ್ರತಿಜ್ಞಾ ವಿಧಿ ಕಾರ್ಯಕ್ರಮ*

ಮಾರ್ಚ್ 25, 2026

*ಶಿಕ್ಷಣಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಉದಯ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಒತ್ತಾಯ*

ಮಾರ್ಚ್ 25, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.