
ಮಡಿಕೇರಿ ಜೂ.11 NEWS DESK : ದಾರುಲ್ ಉಲೂಮ್ ಹೈಯರ್ ಸೆಕೆಂಡರಿ ಮದರಸಾದ ಎಸ್.ಕೆ.ಎಸ್.ಬಿ.ವಿ ವಾರ್ಷಿಕ ಮಹಾ ಸಭೆಯು ವ್ಯವಸ್ಥಾಪಕ ಉನೈಸ್ ಫೈಝಿ ಅದ್ಯಕ್ಷತೆಯಲ್ಲಿ ನಡೆಯಿತು.
ಪ್ರಾಂಶುಪಾಲ ಎಂ.ತಮ್ಲೀಖ್ ದಾರಿಮಿ ಸಭೆಯನ್ನು ಉದ್ಘಾಟಿಸಿ ಮಹೋನ್ನತ ಉಲಮಾರು ರಚಿಸಿದ ವಿದ್ಯಾರ್ಥಿ ಸಂಘದ ಶಕ್ತಿಯನ್ನು ಬಲಪಡಿಸಲು ಕರೆ ನೀಡಿದರು.
ಪ್ರಮುಖರಾದ ರಾಝಿಕ್ ರೆಹ್ಮಾನಿ ಸ್ವಾಗತಿಸಿದರು.
ಸಭೆಯ ನಂತರ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಚೇರ್‌ಮೆನ್ ಆಗಿ ಮುಹಮ್ಮದ್ ರಾಝಿಕ್ ರಹ್ಮಾನಿ, ಸಂಚಾಲಕರಾಗಿ ಶಕೀರ್ ಪೈಝಿ, ಸಂಯೋಜಕರಾಗಿ ನಫೀರ್ ಮುಸ್ಲಿಯಾರ್, ಅಧ್ಯಕ್ಷರಾಗಿ ಎಂ.ಎಸ್.ಶಾಹಿದ್, ಕಾರ್ಯದರ್ಶಿಯಾಗಿ ಅಮಾನ್ ಶಾನಿದ್ ನೇಮಕಗೊಂಡರು.
ಕೋಶಾಧಿಕಾರಿಯಾಗಿ ಅರ್ಶದ್, ಕಾರ್ಯನಿರತ ಕಾರ್ಯದರ್ಶಿಯಾಗಿ ಜಾಫರ್, ಉಪಾಧ್ಯಕ್ಷರುಗಳಾಗಿ ತೌಫೀಖ್, ಅಶ್ವಾಕ್, ನಿಯಾಸ್,
ಸಹ ಕಾರ್ಯದರ್ಶಿಗಳಾಗಿ ಮುಹಮ್ಮದ್ ಕೈಫ್, ಕೆ.ಎನ್.ನಿಹಾಲ್, ಅಬ್ದುಲ್ ಅಹದ್ ನೇಮಕಗೊಂಡರು.
ಅದಬ್ ಸಂಯೋಜಕರಾಗಿ ಹಾಶಿರ್ ಮುಸ್ತಫಾ, ಟೆಕ್ ಸಂಯೋಜಕರಾಗಿ ಸವಾದ್ ಸಮದ್, ಅಲಿಫ್ ಸಂಯೋಜಕರಾಗಿ ಎಂ.ಯು.ರಿಹಾನ್, ಕಿದ್ಮ ಕ್ಯಾಪ್ಟನ್ ಬಿ.ಯು.ಸ್ವಫ್ವಾನ್ ಸೇರಿದಂತೆ ಹಲವು ಸದಸ್ಯರನ್ನು ನೇಮಕ ಮಾಡಲಾಯಿತು.








