Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಡಿಕೇರಿಯಲ್ಲಿ ಮಾಚ್೯ 28 ರಂದು ಶ್ರೀ ರಾಮೋತ್ಸವ – ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಆಹ್ವಾನ*
  • *ರಾಷ್ಟ್ರೀಯ ಮಹಿಳಾ ಕಲಾಶಿಬಿರಕ್ಕೆ ಚಾಲನೆ : ಚಿತ್ರಕಲಾ ಗ್ಯಾಲರಿ ಆರಂಭಿಸಲು ಪರಶುರಾಮ ಸಂಪತ್ ಕುಮಾರ್ ಕರೆ*
  • *ಏ.5 ರಿಂದ ಮೇ 2 ರವರೆಗೆ ಚೇನಂಡ ಕಪ್ ಹಾಕಿ ಉತ್ಸವ : 4 ಮೈದಾನಗಳಲ್ಲಿ ಪಂದ್ಯಾವಳಿ : ಹೆಸರು ನೋಂದಣಿಗೆ ಮಾ.20 ಕೊನೆ ದಿನ*
  • *ಏಪ್ರಿಲ್ ನಿಂದಲೇ ಪೂರ್ವಾನ್ವಯವಾಗಲಿದೆ ಹೊಸ ವಿದ್ಯುತ್ ದರ: ಯಾರಿಗೆ ಲಾಭ? ಯಾರಿಗೆ ನಷ್ಟ? ಇಲ್ಲಿದೆ ಕಂಪ್ಲೀಟ್ ಚಾರ್ಟ್*
  • *ನಿಮ್ಮ ಏರಿಯಾದಲ್ಲಿ ನೀರಿಲ್ಲವೇ?: ಕೂಡಲೇ ಈ ಕೆಲಸ ಮಾಡಿ! ಮನೆ ಬಾಗಿಲಿಗೇ ಬರಲಿದೆ ಕಾವೇರಿ ನೀರು; ಹೇಗೆ ಗೊತ್ತಾ?*
  • *ಸೆಟ್ಟೇರಿತು ‘ನನ್ನ ಸೈಕಲ್ ಸವಾರಿ’*
  • *ರಾಜ್ಯ ಬಜೆಟ್ ಕೊಡಗಿನ ಅಭಿವೃದ್ಧಿಗೆ ಪೂರಕವಾಗಿರಲಿ : ಬಿಜೆಪಿ ಒತ್ತಾಯ*
  • *ಬೈಲುಕುಪ್ಪೆಯಲ್ಲಿ ವಿಶ್ವದ ಅತಿ ದೊಡ್ಡ ಚಿತ್ರ ಪರದೆ ಅನಾವರಣ*
  • *ಸಾಧಿಸಲು ಹಳ್ಳಿ ನಗರ ಮುಖ್ಯವಲ್ಲ, ಬದಲಿಗೆ ಸಾಧಿಸಲು ವಾತವರಣ ಸೃಷ್ಟಿ ಮಾಡುವುದು ಮುಖ್ಯವಾಗಬೇಕು: ಪೂಜಾ ಸಜೇಶ್: ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಭಿರಕ್ಕೆ ಚಾಲನೆ: ಸೇವಾರ್ಥ ಮನೋಭಾವದಿಂದ ರಾಷ್ಟೃ ನಿರ್ಮಾಣ ಮಾಡುವತ್ತ ಗಮನ ಹರಿಸುವಂತಾಗಬೇಕು:ಗಣ್ಯರ ಅಭಿಮತ*
  • *ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಗಮನಹರಿಸಿ: ಡಾ.ಮಂತರ್ ಗೌಡ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಜೀವವಿಮೆಯಲ್ಲಿ ಮಹತ್ವದ ಮೈಲಿಗಲ್ಲು : ಇಂಡಿಯಾ ಪೋಸ್ಟ್‌ ನಿಂದ ಕೇವಲ 755  ರೂ.ಗಳಿಗೆ 15 ಲಕ್ಷ ರೂ. ವಿಮಾ ಸೌಲಭ್ಯ*
ಇತ್ತೀಚಿನ ಸುದ್ದಿಗಳು ಭಾರತ ವಿಶೇಷ

*ಜೀವವಿಮೆಯಲ್ಲಿ ಮಹತ್ವದ ಮೈಲಿಗಲ್ಲು : ಇಂಡಿಯಾ ಪೋಸ್ಟ್‌ ನಿಂದ ಕೇವಲ 755  ರೂ.ಗಳಿಗೆ 15 ಲಕ್ಷ ರೂ. ವಿಮಾ ಸೌಲಭ್ಯ*

ಜುಲೈ 28, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ನವದೆಹಲಿ NEWS DESK ಜು.28 : (ಕೋವರ್‌ ಕೊಲ್ಲಿ ಇಂದ್ರೇಶ್‌) ದೇಶದ ಜೀವವಿಮಾ ಮಾರುಕಟ್ಟೆ ದಿನೇ ದಿನೇ ವಿಸ್ತರಿಸುತ್ತಾ ಸಾಗಿದ್ದು  ಒಂದೆಡೆ ಖಾಸಗೀ ಕಂಪೆನಿಗಳು ಆರೋಗ್ಯ ವಿಮೆಗೆ ದುಬಾರಿ ದರ ವಿಧಿಸುತಿದ್ದರೆ ಸರ್ಕಾರಿ ಸಂಸ್ಥೆ  ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ (IPPB)   ಬಡವರ ಕೈಗೆಟುಕುವ ವಿಮೆಯೊಂದನ್ನು  ಕಳೆದ ತಿಂಗಳು  ಬಿಡುಗಡೆ ಮಾಡಿದೆ.   ಇಷ್ಟೊಂದು ಅಗ್ಗದ ದರದಲ್ಲಿ ಜೀವವಿಮೆ ಒದಗಿಸುತ್ತಿರುವುದು  ಬಹುಶಃ  ವಿಶ್ವದಲ್ಲೇ ಮೊದಲು ಆಗಿದೆ. ಇಂದಿಗೂ ಜೀವವಿಮೆ ಪಡೆಯಲು ಬಡ ವರ್ಗದ ಜನ ಹಿಂದೇಟು ಹಾಕುತ್ತಿರುವುದು ದುಬಾರಿ ಆಗಿರುವ ಪ್ರೀಮಿಯಂ ದರದ ಕಾರಣದಿಂದಾಗಿ ಮಾತ್ರ.   ಆದರೆ ಇಧಿಗ  ಇಷ್ಟು ಅಗ್ಗದ ದರದಲ್ಲಿ ಜೀವವಿಮೆ ಒದಗಿಸುತ್ತಿರುವುದು  ಎಲ್ಲರಿಗೂ ವಿಮಾ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ. ಈಗ  ನೀವು ವರ್ಷಕ್ಕೆ  ಕೇವಲ 755 ರೂ. ಪಾವತಿಸಿ ಪಾಲಿಸಿ ಪಡೆದುಕೊಂಡು, ಅಪಘಾತಕ್ಕೀಡಾಗಿ  ಮೃತಪಟ್ಟರೇ ನಾಮಿನಿಯಾದ ಕುಟುಂಬದ ಸದಸ್ಯನಿಗೆ 15 ಲಕ್ಷ ರೂ. ಪಾವತಿಸುತ್ತಾರೆ. ಇನ್ನೂ ವಿಮೆ ತೆಗೆದುಕೊಂಡವರು ಮೃತಪಟ್ಟಾಗ ಮಾತ್ರವಲ್ಲದೇ, ಶಾಶ್ವತ ಅಂಗವೈಕಲ್ಯಕ್ಕೆ ಒಳಾಗದರೂ 15 ಲಕ್ಷ ರೂ. ಪಾವತಿಸಲಾಗುತ್ತಿದೆ. ಪಾಲಿಸಿದಾರರು ಮರಣ ಹೊಂದಿದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಿರಲು ಒಂದು ಲಕ್ಷ ರೂಪಾಯಿ ಮತ್ತು ಮದುವೆಗೆ ಇನ್ನೊಂದು ಲಕ್ಷ ರೂಪಾಯಿಗಳನ್ನು ಪಾವತಿಸಲಾಗುತ್ತದೆ. ಪಾಲಿಸಿದಾರ ಬದುಕಿದ್ದರೆ ವೈದ್ಯಕೀಯ ವೆಚ್ಚಕ್ಕಾಗಿ ಒಂದು ಲಕ್ಷ ರೂಪಾಯಿ ಪಾವತಿಸಲಾಗುತ್ತದೆ. ಆಸ್ಪತ್ರೆಯಲ್ಲಿ ಸಾಮಾನ್ಯ ಚಿಕಿತ್ಸೆಗೆ ಒಳಗಾದರೆ ದಿನಕ್ಕೆ 1000 ರೂಪಾಯಿ, ಐಸಿಯುನಲ್ಲಿ ದಾಖಲಾದರೆ ದಿನಕ್ಕೆ 2000 ರೂಪಾಯಿ ನೀಡಲಾಗುತ್ತದೆ. ಕೈ ಕಾಲು ಮುರಿದರೆ 25 ಸಾವಿರ ರೂ.ವರೆಗೆ ಪರಿಹಾರ ನೀಡಲಾಗುತ್ತದೆ. ವಾರ್ಷಿಕ 399 ರೂ ಪಾವತಿಸಿ ಪಾಲಿಸಿ ಪಡೆದರೆ ವ್ಯಕ್ತಿ ಅಪಘಾತದಲ್ಲಿ  ಮರಣ ಹೊಂದಿದರೆ 10 ಲಕ್ಷ ರೂ. ವರೆಗೆ ವಿಮೆ ಪಡೆಯಬಹುದು. ಶಾಶ್ವತ ಅಂಗವೈಕಲ್ಯ, ಕೈಕಾಲು, ಬ್ರೈನ್ ಸ್ಟ್ರೋಕ್ಗೆ ಒಳಗಾದರೆ 10 ಲಕ್ಷ ರೂ. ಪಾವತಿಸಲಾಗುತ್ತದೆ. ಲಿಸಿದಾರರಿಗೆ ಅಪಘಾತ ಸಂಭವಿಸಿ ಆಸ್ಪತ್ರೆಗೆ ದಾಖಲಾದರೆ ಒಳರೋಗಿ ವಿಭಾಗದಡಿ 60 ಸಾವಿರ ರೂ.ವರೆಗೆ ಕ್ಲೇಮ್ ಮಾಡುವ ಅವಕಾಶವಿದೆ. ಅದೇ ರೀತಿ ಹೊರರೋಗಿ ಕೋಟಾದಡಿ 30 ಸಾವಿರ ರೂ. ಕ್ಲೈಮ್ ಮಾಡಬಹುದು. ಚಿಕಿತ್ಸೆಯ ಸಮಯದಲ್ಲಿ ದಿನಕ್ಕೆ 1000 ರೂಪಾಯಿಗಳನ್ನು ನಗದು ರೂಪದಲ್ಲಿ ನೀಡಲಾಗುತ್ತದೆ. ಇದನ್ನು 10 ದಿನಗಳವರೆಗೆ ನೀಡಲಾಗುತ್ತದೆ. ಇಬ್ಬರು ಮಕ್ಕಳಿಗೆ ಶಾಲಾ ಶುಲ್ಕದ 10 ಪ್ರತಿಶತ ಅಥವಾ ಒಂದು ಲಕ್ಷ ರೂ ವರೆಗೆ ನಗದು ಆಯ್ಕೆ ಮಾಡಬಹುದು. ಅಷ್ಟೇ ಅಲ್ಲ, ಅಪಘಾತಕ್ಕೀಡಾದ ಪಾಲಿಸಿದಾರನ ಸಾರಿಗೆ ವೆಚ್ಚಕ್ಕಾಗಿ 25 ಸಾವಿರ ರೂ ನೀಡಲಾಗುತ್ತದೆ. ಪಾಲಿಸಿದಾರ ಒಂದು ವೇಳೆ ಮೃತಪಟ್ಟರೆ ಅಂತ್ಯಸಂಸ್ಕಾರಕ್ಕೆ ಇನ್ನೂ 5 ಸಾವಿರ ನೀಡಲಾಗುತ್ತದೆ.  299 ರೂಪಾಯಿಗಳ ಪ್ರೀಮಿಯಂ ಅನ್ನು ಆಯ್ಕೆ ಮಾಡಿಕೊಂಡರೆ ಅಪಘಾತದಲ್ಲಿ ಮರಣಹೊಂದಿದರೆ, ಅಂಗವಿಕಲರಾಗಿದ್ದರೆ ಅಥವಾ ಪಾರ್ಶ್ವವಾಯುವಿಗೆ ಒಳಗಾಗಿದ್ದರೆ ಮೇಲಿನ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು. ಇದರಲ್ಲಿ ಇತರ ಹೆಚ್ಚುವರಿ ಪ್ರಯೋಜನಗಳು ಇರುವುದಿಲ್ಲ. ಈ ಪಾಲಿಸಿಯನ್ನು 18 ರಿಂದ 65 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಮೇಲಿನ ಮೂರು ಪಾಲಿಸಿಗಳನ್ನು ತೆಗೆದುಕೊಳ್ಳಬಹುದು. ನಿಮ್ಮ ಸಮೀಪದ ಎಲ್ಲಾ ಅಂಚೆ ಕಚೇರಿಗಳಲ್ಲಿ ಈ ಪಾಲಿಸಿ ಲಭ್ಯವಿದೆ.  ಪೋಸ್ಟ್‌ ಆಫೀಸ್‌ ಗೆ ನೀವು ಕಾಲಿಡದೇ ವರುಷಗಳೇ ಆಗಿರಬಹುದಲ್ಲವೇ ? ಆದರೆ ಈ ಪಾಲಿಸಿಯು ನಿಮ್ಮನ್ನು ಕೂಡಲೇ ಪೋಸ್ಟ್‌ ಆಫೀಸಿಗೆ ತೆರಳುವಂತೆ ಮಾಡುವುದರಲ್ಲಿ ಸಂದೇಹವೇ ಇಲ್ಲ.  ಈ ಪಾಲಿಸಿ ಪಡೆಯುವಲ್ಲಿ ಇನ್ನೊಂದು ಅನುಕೂಲವೆಂದರೆ  ಅಲ್ಲಿ ನಿಮ್ಮನ್ನು ಯಾವುದೇ ದಾಖಲಾತಿ  ಜೆರಾಕ್ಸ್‌ ಪ್ರತಿ , ಫೋಟೋ ಏನೂ ಕೇಳುವುದಿಲ್ಲ.  ನಿಮ್ಮ ಆಧಾರ್‌ ಸಂಖ್ಯೆ ನಿಮಗೆ ತಿಳಿದಿದ್ದರೆ, ಹೆಬ್ಬೆರಳ ಅಚ್ಚು ಪಡೆದು  ಕೇವಲ 10 ನಿಮಿಷದಲ್ಲೇ ಪಾಲಿಸಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ 155299 ಸಂಖ್ಯೆಗೆ  ಕರೆ ಮಾಡಿ.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮಡಿಕೇರಿಯಲ್ಲಿ ಮಾಚ್೯ 28 ರಂದು ಶ್ರೀ ರಾಮೋತ್ಸವ – ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಆಹ್ವಾನ*

ಮಾರ್ಚ್ 5, 2026

*ರಾಷ್ಟ್ರೀಯ ಮಹಿಳಾ ಕಲಾಶಿಬಿರಕ್ಕೆ ಚಾಲನೆ : ಚಿತ್ರಕಲಾ ಗ್ಯಾಲರಿ ಆರಂಭಿಸಲು ಪರಶುರಾಮ ಸಂಪತ್ ಕುಮಾರ್ ಕರೆ*

ಮಾರ್ಚ್ 5, 2026

*ಏ.5 ರಿಂದ ಮೇ 2 ರವರೆಗೆ ಚೇನಂಡ ಕಪ್ ಹಾಕಿ ಉತ್ಸವ : 4 ಮೈದಾನಗಳಲ್ಲಿ ಪಂದ್ಯಾವಳಿ : ಹೆಸರು ನೋಂದಣಿಗೆ ಮಾ.20 ಕೊನೆ ದಿನ*

ಮಾರ್ಚ್ 5, 2026

*ರಾಷ್ಟ್ರೀಯ ಮಹಿಳಾ ಕಲಾಶಿಬಿರಕ್ಕೆ ಚಾಲನೆ : ಚಿತ್ರಕಲಾ ಗ್ಯಾಲರಿ ಆರಂಭಿಸಲು ಪರಶುರಾಮ ಸಂಪತ್ ಕುಮಾರ್ ಕರೆ*

ಮಾರ್ಚ್ 5, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಮಾ.05:-ರಾಷ್ಟ್ರೀಯ ಮಹಿಳಾ ಕಲಾಶಿಬಿರಕ್ಕೆ ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಅಧ್ಯಕ್ಷರಾದ ಪರಶುರಾಮ್ ಸಂಪತ್ ಕುಮಾರ್ ಹಾಗೂ…

*ಏ.5 ರಿಂದ ಮೇ 2 ರವರೆಗೆ ಚೇನಂಡ ಕಪ್ ಹಾಕಿ ಉತ್ಸವ : 4 ಮೈದಾನಗಳಲ್ಲಿ ಪಂದ್ಯಾವಳಿ : ಹೆಸರು ನೋಂದಣಿಗೆ ಮಾ.20 ಕೊನೆ ದಿನ*

ಮಾರ್ಚ್ 5, 2026

*ಏಪ್ರಿಲ್ ನಿಂದಲೇ ಪೂರ್ವಾನ್ವಯವಾಗಲಿದೆ ಹೊಸ ವಿದ್ಯುತ್ ದರ: ಯಾರಿಗೆ ಲಾಭ? ಯಾರಿಗೆ ನಷ್ಟ? ಇಲ್ಲಿದೆ ಕಂಪ್ಲೀಟ್ ಚಾರ್ಟ್*

ಮಾರ್ಚ್ 5, 2026

*ನಿಮ್ಮ ಏರಿಯಾದಲ್ಲಿ ನೀರಿಲ್ಲವೇ?: ಕೂಡಲೇ ಈ ಕೆಲಸ ಮಾಡಿ! ಮನೆ ಬಾಗಿಲಿಗೇ ಬರಲಿದೆ ಕಾವೇರಿ ನೀರು; ಹೇಗೆ ಗೊತ್ತಾ?*

ಮಾರ್ಚ್ 5, 2026

*ಸೆಟ್ಟೇರಿತು ‘ನನ್ನ ಸೈಕಲ್ ಸವಾರಿ’*

ಮಾರ್ಚ್ 5, 2026

*ರಾಜ್ಯ ಬಜೆಟ್ ಕೊಡಗಿನ ಅಭಿವೃದ್ಧಿಗೆ ಪೂರಕವಾಗಿರಲಿ : ಬಿಜೆಪಿ ಒತ್ತಾಯ*

ಮಾರ್ಚ್ 5, 2026

*ಬೈಲುಕುಪ್ಪೆಯಲ್ಲಿ ವಿಶ್ವದ ಅತಿ ದೊಡ್ಡ ಚಿತ್ರ ಪರದೆ ಅನಾವರಣ*

ಮಾರ್ಚ್ 4, 2026

*ಸಾಧಿಸಲು ಹಳ್ಳಿ ನಗರ ಮುಖ್ಯವಲ್ಲ, ಬದಲಿಗೆ ಸಾಧಿಸಲು ವಾತವರಣ ಸೃಷ್ಟಿ ಮಾಡುವುದು ಮುಖ್ಯವಾಗಬೇಕು: ಪೂಜಾ ಸಜೇಶ್: ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಭಿರಕ್ಕೆ ಚಾಲನೆ: ಸೇವಾರ್ಥ ಮನೋಭಾವದಿಂದ ರಾಷ್ಟೃ ನಿರ್ಮಾಣ ಮಾಡುವತ್ತ ಗಮನ ಹರಿಸುವಂತಾಗಬೇಕು:ಗಣ್ಯರ ಅಭಿಮತ*

ಮಾರ್ಚ್ 4, 2026

*ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಗಮನಹರಿಸಿ: ಡಾ.ಮಂತರ್ ಗೌಡ*

ಮಾರ್ಚ್ 4, 2026

*ಶಕ್ತಿ ಗೋಪಾಲಕೃಷ್ಣ ರಸ್ತೆ ನಾಮಫಲಕ ಉದ್ಘಾಟನೆ*

ಮಾರ್ಚ್ 4, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.