Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕೊಡಗು ಗೌಡ ಸಮಾಜಗಳ ಒಕ್ಕೂಟದಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ*
  • *ಕಡಂಗ ಪ್ರಾಥಮಿಕ ಶಾಲೆಯಲ್ಲಿ ಮಿಸ್ಟಿ ಹಿಲ್ಸ್ ನಿಂದ ಹಿರಿಯ ನಾಗರಿಕರಿಗೆ ಗೌರವ ; ಗುರುಹಿರಿಯರನ್ನು ಗೌರವಿಸುವುದು ಆದ್ಯತೆಯಾಗಲಿ – ಡಾ.ಶುಭಾ ಕೆ.ಜಿ.*
  • *ಕಗ್ಗೋಡ್ಲು ಶಾಲೆಯಲ್ಲಿ ಮಿಸ್ಟಿ ಹಿಲ್ಸ್ ನಿಂದ ಹಿರಿಯ ನಾಗರಿಕರಿಗೆ ಗೌರವಾಪ೯ಣೆ*
  • *ಮದೆಯಲ್ಲಿ ಮಿಸ್ಟಿ ಹಿಲ್ಸ್ ನಿಂದ ಹಿರಿಯರಿಗೆ ಗೌರವ ನಮನ*
  • *ಮಾಜಿ ಸಚಿವ ಎಂ.ಸಿ.ನಾಣಯ್ಯ ಮನೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಭೇಟಿ*
  • *ಕೊಡಗು ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ*
  • *ನೇಪಾಳದಲ್ಲಿ ಚಿನ್ನದ ಪದಕ ಗೆದ್ದ ಸೋಮವಾರಪೇಟೆ ಶಾಲೆಯ ವಿದ್ಯಾರ್ಥಿ ಮೊಹಮ್ಮದ್ ಹಫೀಸ್*
  • **ಆ.30ರಂದು ಕುಶಾಲನಗರದಲ್ಲಿ ಅದ್ದೂರಿ ಫ್ಯಾಷನ್ ಸಂಭ್ರಮ ‘ಕೂರ್ಗ್ ಫ್ಯಾಷನ್ ರನ್ ವೇ 2026’**
  • *25 ವರ್ಗಾವಣೆ, ಒಂದೇ ಖಡಕ್ ನಿಲುವು: ತುಕಾರಾಮ್ ಮುಂಢೆ ಅವರ ಸಂಪೂರ್ಣ ಕಥೆ*
  • *ಕಡಗದಾಳು ಸಕಾ೯ರಿ ಪ್ರೌಡಶಾಲೆಯಲ್ಲಿ ಮಿಸ್ಟಿ ಹಿಲ್ಸ್ ನಿಂದ ಹಿರಿಯ ಜೀವಿಗಳಿಗೆ ನಮನ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಬಸವನಹಳ್ಳಿ ಮೊರಾರ್ಜಿ ವಸತಿ ಶಾಲೆಗೆ ಗ್ರೀನ್ ಅವಾರ್ಡ್ ಪ್ರಶಸ್ತಿ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಬಸವನಹಳ್ಳಿ ಮೊರಾರ್ಜಿ ವಸತಿ ಶಾಲೆಗೆ ಗ್ರೀನ್ ಅವಾರ್ಡ್ ಪ್ರಶಸ್ತಿ*

ಆಗಷ್ಟ್ 11, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಕುಶಾಲನಗರ NEWS DESK ಆ.11 : ಕುಶಾಲನಗರ ತಾಲ್ಲೂಕಿನ ಬಸವನಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಗ್ರೀನ್ ಅಂಡ್ ಗ್ರೀನ್ ಎಂಬ ಅಂತರರಾಷ್ಟ್ರೀಯಾ ಸಂಸ್ಥೆಯು ಕೊಡಮಾಡುವ ಗ್ರೀನ್ ಅವಾರ್ಡ್ ಪ್ರಶಸ್ತಿಗೆ ಭಾಜನವಾಗಿದೆ.
ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿಯ ಗಿರಿಜನರ ಹಾಡಿಗೆ ಹೊಂದಿಕೊಂಡಂತೆ ಇರುವ ಸುಮಾರು 10 ಎಕರೆ ವಿಶಾಲ ಪ್ರದೇಶದಲ್ಲಿ ಕಳೆದ ಎರಡೂವರೆ ದಶಕಗಳ ಹಿಂದೆ ಆರಂಭವಾದ ಈ ವಸತಿ ಶಾಲೆಯಲ್ಲಿ ಗ್ರಾಮೀಣ ಪ್ರದೇಶಗಳ 250 ಮಂದಿ ಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾ ಬಂದಿದ್ದು ಇಲ್ಲಿಯವರೆಗೆ ಹತ್ತಾರು ಸಾವಿರ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಉಜ್ವಲವಾದ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ಶಾಲೆಯಲ್ಲಿನ ವಿಶಾಲ ಪ್ರದೇಶವನ್ನು ಹಸಿರು ಪರಿಸರವಾಗಿ ರೂಪಿಸುವ ಪಣ ತೊಟ್ಟ ಶಾಲಾ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಶಾಲಾ ಪರಿಸರದಲ್ಲಿ ನೂರಾರು ಸಂಖ್ಯೆಯ ಪರಿಸರ ಸ್ನೇಹಿ ಗಿಡಗಳನ್ನು ನೆಟ್ಟು ಪೋಷಿಸಿ ಮರಗಳನ್ನಾಗಿಸಿರುವುದು ಹಾಗೂ ಶಾಲೆಯ ಸ್ವಚ್ಛತೆ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಕಲಿಕೆ, ಪ್ರಾಂಶುಪಾಲರು ಹಾಗೂ ಬೋಧಕರಲ್ಲಿ ಅತ್ಯುತ್ತಮ ಹೊಂದಾಣಿಕೆ ಸೇರಿದಂತೆ ವಿವಿಧ ಆಯಾಮಗಳನ್ನು ಪರಿಶೋಧಿಸಿ ಶಾಲೆಗೆ ಗ್ರೀನ್ ಅಂಡ್ ಗ್ರೀನ್ ಅವಾರ್ಡ್ ನೀಡಲಾಗುತ್ತಿದೆ ಎಂದು ಗ್ರೀನ್ ಅಂಡ್ ಗ್ರೀನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಚ್ಚಿದಾನಂದ ಜಮದಗ್ನಿ ತಿಳಿಸಿದರು. ಇದೇ ಸಂದರ್ಭ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೂ ಮುನ್ನಾ ಗ್ರೀನ್ ಅಂಡ್ ಗ್ರೀನ್ ಸಂಸ್ಥೆ ಹಾಗೂ ಶಾಲೆಯ ವತಿಯಿಂದ ಶಾಲಾ ಪರಿಸರದಲ್ಲಿ ಮತ್ತೆ 150 ಗಿಡಗಳನ್ನು ನೆಡಲಾಯಿತು. ನಂತರ ಶಾಲಾ ವಿದ್ಯಾರ್ಥಿಗಳೊಂದಿಗೆ ಸಚ್ಚಿದಾನಂದ ಜಮದಗ್ನಿ ಗಿಡ ಮರಗಳು ಹಾಗೂ ಪರಿಸರ ಕುರಿತಾಗಿ ಸಂವಾದ ನಡೆಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆ ಎಸ್.ಎಸ್.ಶ್ರೀದೇವಿ, ಗ್ರೀನ್ ಅಂಡ್ ಗ್ರೀನ್ ಸಂಸ್ಥೆಯು ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು ಇದರ ಮುಖ್ಯಸ್ಥರು ವಿಶ್ವಸಂಸ್ಥೆಯ ಸದಸ್ಯರೂ ಆಗಿದ್ದಾರೆ. ಇಂತಹ ಸಂಸ್ಥೆ ನಮ್ಮ ಶಾಲೆಯ ಬಗ್ಗೆ ಮಾಹಿತಿ ಪಡೆದು ಖುದ್ದಾಗಿ ಬಂದು ಎಲ್ಲವನ್ನು ಅವಲೋಕಿಸಿ ಇಂತಹ ಪ್ರಶಸ್ತಿ ನೀಡಿರುವುದು ನಮಗೆ ಹೆಮ್ಮೆ ತಂದಿದೆ. ಹಾಗೆಯೇ ಇನ್ನಷ್ಟು ಪರಿಸರ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸಲು ಸಹಾಯಕವಾಗಿದೆ. ಸಂಸ್ಥೆಗೆ ಸಿಕ್ಕಿರುವ ಬಹುಮಾನದ ಹಿಂದೆ ಹಿಂದಿನ ಪ್ರಾಂಶುಪಾಲರಾದ ಕೆ.ವಿ.ಸುರೇಶ್ ಹಾಗೂ ಚಂದ್ರಶೇಖರರೆಡ್ಡಿ ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕರ ಶ್ರಮವನ್ನು ಸ್ಮರಿಸಲಾಗುತ್ತಿದೆ ಎಂದು ಶ್ರೀದೇವಿ ಹೇಳಿದರು. ಕಾರ್ಯಕ್ರಮದಲ್ಲಿ ಗ್ರೀನ್ ಅಂಡ್ ಗ್ರೀನ್ ಸಂಸ್ಥೆಯ ರಾಜ್ಯ ಸಂಯೋಜಕರಾದ ಕೆ.ಆರ್.ರಮೇಶ್, ಪುಟ್ಟರಾಜು, ಜಗದೀಶ್ ಇದ್ದರು. ಉಪನ್ಯಾಸಕ ಶಿವಕುಮಾರ್ ಸ್ವಾಗತಿಸಿದರು. ಶಿಕ್ಷಕ ಗಿರೀಶ್ ವಂದಿಸಿದರು. ರಮೇಶ್ ನಿರೂಪಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕೊಡಗು ಗೌಡ ಸಮಾಜಗಳ ಒಕ್ಕೂಟದಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ*

ಆಗಷ್ಟ್ 22, 2026

*ಕಡಂಗ ಪ್ರಾಥಮಿಕ ಶಾಲೆಯಲ್ಲಿ ಮಿಸ್ಟಿ ಹಿಲ್ಸ್ ನಿಂದ ಹಿರಿಯ ನಾಗರಿಕರಿಗೆ ಗೌರವ ; ಗುರುಹಿರಿಯರನ್ನು ಗೌರವಿಸುವುದು ಆದ್ಯತೆಯಾಗಲಿ – ಡಾ.ಶುಭಾ ಕೆ.ಜಿ.*

ಆಗಷ್ಟ್ 22, 2026

*ಕಗ್ಗೋಡ್ಲು ಶಾಲೆಯಲ್ಲಿ ಮಿಸ್ಟಿ ಹಿಲ್ಸ್ ನಿಂದ ಹಿರಿಯ ನಾಗರಿಕರಿಗೆ ಗೌರವಾಪ೯ಣೆ*

ಆಗಷ್ಟ್ 22, 2026

*ಕಡಂಗ ಪ್ರಾಥಮಿಕ ಶಾಲೆಯಲ್ಲಿ ಮಿಸ್ಟಿ ಹಿಲ್ಸ್ ನಿಂದ ಹಿರಿಯ ನಾಗರಿಕರಿಗೆ ಗೌರವ ; ಗುರುಹಿರಿಯರನ್ನು ಗೌರವಿಸುವುದು ಆದ್ಯತೆಯಾಗಲಿ – ಡಾ.ಶುಭಾ ಕೆ.ಜಿ.*

ಆಗಷ್ಟ್ 22, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಆ.22- ಕಡಂಗ.ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ   ವಿಶ್ವ ಹಿರಿಯರ ದಿನಾಚರಣೆ ಅಂಗವಾಗಿ ಮಡಿಕೇರಿ ರೋಟರಿ…

*ಕಗ್ಗೋಡ್ಲು ಶಾಲೆಯಲ್ಲಿ ಮಿಸ್ಟಿ ಹಿಲ್ಸ್ ನಿಂದ ಹಿರಿಯ ನಾಗರಿಕರಿಗೆ ಗೌರವಾಪ೯ಣೆ*

ಆಗಷ್ಟ್ 22, 2026

*ಮದೆಯಲ್ಲಿ ಮಿಸ್ಟಿ ಹಿಲ್ಸ್ ನಿಂದ ಹಿರಿಯರಿಗೆ ಗೌರವ ನಮನ*

ಆಗಷ್ಟ್ 22, 2026

*ಮಾಜಿ ಸಚಿವ ಎಂ.ಸಿ.ನಾಣಯ್ಯ ಮನೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಭೇಟಿ*

ಆಗಷ್ಟ್ 22, 2026

*ಕೊಡಗು ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ*

ಆಗಷ್ಟ್ 22, 2026

*ನೇಪಾಳದಲ್ಲಿ ಚಿನ್ನದ ಪದಕ ಗೆದ್ದ ಸೋಮವಾರಪೇಟೆ ಶಾಲೆಯ ವಿದ್ಯಾರ್ಥಿ ಮೊಹಮ್ಮದ್ ಹಫೀಸ್*

ಆಗಷ್ಟ್ 22, 2026

**ಆ.30ರಂದು ಕುಶಾಲನಗರದಲ್ಲಿ ಅದ್ದೂರಿ ಫ್ಯಾಷನ್ ಸಂಭ್ರಮ ‘ಕೂರ್ಗ್ ಫ್ಯಾಷನ್ ರನ್ ವೇ 2026’**

ಆಗಷ್ಟ್ 22, 2026

*25 ವರ್ಗಾವಣೆ, ಒಂದೇ ಖಡಕ್ ನಿಲುವು: ತುಕಾರಾಮ್ ಮುಂಢೆ ಅವರ ಸಂಪೂರ್ಣ ಕಥೆ*

ಆಗಷ್ಟ್ 22, 2026

*ಕಡಗದಾಳು ಸಕಾ೯ರಿ ಪ್ರೌಡಶಾಲೆಯಲ್ಲಿ ಮಿಸ್ಟಿ ಹಿಲ್ಸ್ ನಿಂದ ಹಿರಿಯ ಜೀವಿಗಳಿಗೆ ನಮನ*

ಆಗಷ್ಟ್ 22, 2026

*ಜಿಲ್ಲೆಯಾದ್ಯಂತ ಜಾಬ್ ಕಾರ್ಡ್ ಮೇಳ ಆರಂಭ* 

ಆಗಷ್ಟ್ 22, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.