Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಅಮ್ಮತ್ತಿ ಕೊಡವ ಸಮಾಜದಿಂದ ಶಾಸಕ ಎ.ಎಸ್.ಪೊನ್ನಣ್ಣರಿಗೆ ಸನ್ಮಾನ*
  • *ಕೆದಮುಳ್ಳೂರು : ಏ.3 ಮತ್ತು 4 ರಂದು ಶ್ರೀ ಚಾಮುಂಡಿ ದೇವಿಯ ತೆರೆ ಮಹೋತ್ಸವ*
  • *ಶ್ರದ್ಧಾಭಕ್ತಿಯಿಂದ ಜರುಗಿದ ಕೆದಮುಳ್ಳೂರು ಶ್ರೀ ಭಗವತಿ ದೇವರ ವಾರ್ಷಿಕೋತ್ಸವ*
  • *ಕುಡಿಯುವ ನೀರಿನ ಅಭಾವ : ಪೊನ್ನಂಪೇಟೆಯಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು*
  • *ಎಮ್ಮೆಮಾಡು ಪ್ರಕರಣ : ಸಾಮಾಜಿಕ ಜಾಲತಾಣದ ಮೇಲೆ ನಿಗಾ ವಹಿಸಿರುವ ಕೊಡಗು ಪೊಲೀಸ್*
  • *ಸೋಮವಾರಪೇಟೆ : ಮಹಿಳಾ ಸಂಘಗಳು ಮಹಿಳೆಯರ ಅಭಿವೃದ್ಧಿಗೆ ಸಹಕಾರಿ : ಸಾಹಿತಿ ಶ.ಗ.ನಯನತಾರ*
  • *ಕೊಡಗು : ದೈವಕ್ಕೆ ಅಪಮಾನ ಆರೋಪ : ಸೂಕ್ತ ಕ್ರಮಕ್ಕೆ ಒತ್ತಾಯ*
  • *ಭಗವಾನ್ ಮಹಾವೀರರ ಜೀವನ ಮತ್ತು ಬೋಧನೆಗಳು ಸಾರ್ವಕಾಲಿಕ : ವಾಣಿ ಪುಷ್ಪರಾಜ್*
  • *ಕೂಡಿಗೆ ಸೈನಿಕ ಶಾಲೆಗೆ ನಿರ್ದೇಶಕರ ಭೇಟಿ*
  • *”ಮುಕ್ಕಾಟಿರ ಕ್ರಿಕೆಟ್ ನಮ್ಮೆ” ಏ.3 ರಿಂದ ಆರಂಭ : 289 ತಂಡಗಳ ನಡುವೆ ಹಣಾಹಣಿ : ಮೇ 1 ರಂದು ಅಂತಿಮ ಪಂದ್ಯ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಅಪ್ಪಂಗಳ ಸಂಶೋಧನಾ ಸಂಸ್ಥೆಯಲ್ಲಿ ಮನುಶ್ರೀ – ಕಾವೇರಿ ಏಲಕ್ಕಿ ತಳಿಗಳ ಅಭಿವೃದ್ಧಿ : ಪ್ರಧಾನ ಮಂತ್ರಿಗಳಿಂದ ಬಿಡುಗಡೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಅಪ್ಪಂಗಳ ಸಂಶೋಧನಾ ಸಂಸ್ಥೆಯಲ್ಲಿ ಮನುಶ್ರೀ – ಕಾವೇರಿ ಏಲಕ್ಕಿ ತಳಿಗಳ ಅಭಿವೃದ್ಧಿ : ಪ್ರಧಾನ ಮಂತ್ರಿಗಳಿಂದ ಬಿಡುಗಡೆ*

ಆಗಷ್ಟ್ 12, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಆ.12 NEWS DESK : ಮಡಿಕೇರಿ ತಾಲೂಕಿನ ಅಪ್ಪಂಗಳದ ಭಾರತೀಯ ಸಂಬಾರ ಬೆಳೆಗಳ ಸಂಶೋಧನೆ ಸಂಸ್ಥೆಯ ಪ್ರಾದೇಶಿಕ ಕೇಂದ್ರವು ಬರ ಸಹಿಷ್ಣುತೆಯ ವಿಶಿಷ್ಟ ಲಕ್ಷಣಗಳನ್ನು ಹೊಂದಿರುವ ‘ಐ.ಐ.ಎಸ್.ಆರ್. ಮನುಶ್ರೀ’ ಮತ್ತು ‘ಐ.ಐ.ಎಸ್.ಆರ್. ಕಾವೇರಿ’ ಎಂಬ ಎರಡು ಏಲಕ್ಕಿ ತಳಿಗಳನ್ನು ಅಭಿವೃದ್ಧಿಪಡಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 109 ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ತಳಿಗಳನ್ನು ರೈತ ಸಮುದಾಯಕ್ಕೆ ಸಮರ್ಪಿಸುತ್ತಿದ್ದಾರೆ. ಇದರಲ್ಲಿ ಐ. ಸಿ. ಎ. ಆರ್. -ಐ. ಐ. ಎಸ್. ಆರ್., ಪ್ರಾದೇಶಿಕ ಕೇಂದ್ರ, ಅಪ್ಪಂಗಳ ಅಭಿವೃದ್ಧಿಪಡಿಸಿರುವ ಎರಡು ಏಲಕ್ಕಿ ತಳಿಗಳು ಇರುವುದಾಗಿ ಸಂಶೋಧನಾ ಕೇಂದ್ರದ ಪ್ರಕಟಣೆ ತಿಳಿಸಿದೆ. ನೂತನವಾಗಿ ಅಭಿವೃದ್ಧಿ ಪಡಿಸಿರುವ ಈ ಎರಡು ತಳಿಗಳು ಇತ್ತೀಚೆಗೆ ಬೆಳೆ ಗುಣಮಟ್ಟ, ಅಧಿಸೂಚನೆ ಮತ್ತು ತೋಟಗಾರಿಕಾ ಬೆಳೆಗಳಿಗೆ ತಳಿಗಳ ಬಿಡುಗಡೆಯ ಕೇಂದ್ರ ಉಪ ಸಮಿತಿಯಿಂದ ಅಗತ್ಯವಾದ ನಿಯಂತ್ರಣ ಅನುಮೋದನೆಯನ್ನು ಪಡೆದು ಕೊಂಡಿದೆ.
ಹೊಸ ತಳಿಯ ಇಳುವರಿ ಸಾಮರ್ಥ್ಯ : ಐಐಎಸ್‍ಆರ್-ಮನುಶ್ರೀ ಮತ್ತು ಐಐಎಸ್‍ಆರ್ ಕಾವೇರಿ ತಳಿಗಳನ್ನು ಅಪ್ಪಂಗಳದ ಐಸಿಎಆರ್-ಐಐಎಸ್‍ಆರ್ ಪ್ರಾದೇಶಿಕ ಕೇಂದ್ರದ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಎಸ್.ಜೆ.ಅಂಕೇಗೌಡ ಮತ್ತು ಅವರ ತಂಡ ಅಭಿವೃದ್ಧಿಪಡಿಸಿದೆ. ಎರಡು ತಳಿಗಳು ಮಲಬಾರ್ ಪ್ರಭೇದಕ್ಕೆ ಸೇರಿದ್ದು ಕೊತ್ತುಗಳು ನೆಲದ ಮೇಲೆ ಹರಡಿಕೊಂಡಿರುತ್ತವೆ ಹಾಗೂ ಬರ ಸಹಿಷ್ಣುತೆಯ ವಿಶಿಷ್ಟ ಲಕ್ಷಣವನ್ನು ಹೊಂದಿವೆ. ಐಐಎಸ್‍ಆರ್ ಮನುಶ್ರೀ ತಳಿಯು ಸ್ಥಿರ ಇಳುವರಿಯನ್ನು ನೀಡುತ್ತದೆ ಮತ್ತು ಒಂದು ಹೆಕ್ಟೇರ್‍ಗೆ 550 ರಿಂದ 360 ಸರಾಸರಿ ಒಣ ಇಳುವರಿಯನ್ನು ನೀಡುತ್ತದೆ. ಈ ತಳಿಯು ಕರ್ನಾಟಕ ಮತ್ತು ಕೇರಳದ ಏಲಕ್ಕಿ ಬೆಳೆಯುವ ಪ್ರದೇಶಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಐಐಎಸ್‍ಆರ್‍ರ್ ಕಾವೇರಿ ತಳಿಯು ಹೆಚ್ಚು ಸಾಂದ್ರವಾಗಿ ಕಾಯಿಗಳನ್ನು ಬಿಡುವ ತಳಿಯಾಗಿದ್ದು, ಈ ತಳಿಯು ಪ್ರತಿ ಹೆಕ್ಟೇರ್‍ಗೆ ಸರಾಸರಿ 482 ರಿಂದ 308ಕೆಜಿ ಒಣ ಇಳುವರಿಯನ್ನು ನೀಡುತ್ತದೆ. ಈ ತಳಿಯು ಕರ್ನಾಟಕದಲ್ಲಿ ಬೆಳೆಯಲು ಸೂಕ್ತವಾಗಿದೆಯೆಂದು ತಿಳಿಸಲಾಗಿದೆ. ಮಣ್ಣಿನ ತೇವಾಂಶವು ಏಲಕ್ಕಿ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಅತೀ ಮುಖ್ಯವಾಗಿದೆ ಹಾಗೂ ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಏಲಕ್ಕಿ ಬೆಳೆಯುವ ಪ್ರದೇಶಗಳನ್ನು ಹೊರತುಪಡಿಸಿ ಬೇರೆ ಪ್ರದೇಶಗಳ ಯುವ ಕೃಷಿಕರು ಏಲಕ್ಕಿಯನ್ನು ಬೆಳೆಯಲು ಆಸಕ್ತಿ ಹೊಂದಿದ್ದಾರೆ. ಈ ಪ್ರದೇಶಗಳಲ್ಲಿ ಬೇಸಿಗೆಯ ತಿಂಗಳುಗಳಲ್ಲಿ ಬೆಳೆ ತೇವಾಂಶದ ಒತ್ತಡವನ್ನು ಅನುಭವಿಸುತ್ತದೆ. ಅಂತಹ ಪ್ರದೇಶಗಳಲ್ಲಿಯೂ ಸಹ ಈ ತಳಿಗಳನ್ನು ಬೆಳೆಯುವ ಪ್ರಯತ್ನ ಮಾಡಬಹುದು. ಇಂದಿನ ಮಾರುಕಟ್ಟೆಯಲ್ಲಿ ಆಕರ್ಷಕ ಹಸಿರು ಬಣ್ಣ ಮತ್ತು ದಪ್ಪ ಕಾಯಿಗಳನ್ನು ಹೊಂದಿರುವ ಏಲಕ್ಕಿಗೆ ಹೆಚ್ಚಿನ ಆದ್ಯತೆ ಮತ್ತು ದರ ಸಿಗುತ್ತದೆ. ಆದ್ದರಿಂದ ಹೆಚ್ಚಿನ ಶೇಕಡಾವಾರು ದಪ್ಪ ಕಾಯಿಗಳನ್ನು ಹೊಂದಿರುವ ಐಐಎಸ್‍ಆರ್ ಕಾವೇರಿ ತಳಿಯು ಪ್ರೀಮಿಯಂ ಬೆಲೆಯನ್ನು ಪಡೆಯುತ್ತದೆಂದು ಸಂಶೋಧನಾ ಕೇಂದ್ರದ ಪ್ರಕಟಣೆಯಲ್ಲಿ ತಿಳಿಸಿದೆ.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಅಮ್ಮತ್ತಿ ಕೊಡವ ಸಮಾಜದಿಂದ ಶಾಸಕ ಎ.ಎಸ್.ಪೊನ್ನಣ್ಣರಿಗೆ ಸನ್ಮಾನ*

ಮಾರ್ಚ್ 30, 2026

*ಕೆದಮುಳ್ಳೂರು : ಏ.3 ಮತ್ತು 4 ರಂದು ಶ್ರೀ ಚಾಮುಂಡಿ ದೇವಿಯ ತೆರೆ ಮಹೋತ್ಸವ*

ಮಾರ್ಚ್ 30, 2026

*ಶ್ರದ್ಧಾಭಕ್ತಿಯಿಂದ ಜರುಗಿದ ಕೆದಮುಳ್ಳೂರು ಶ್ರೀ ಭಗವತಿ ದೇವರ ವಾರ್ಷಿಕೋತ್ಸವ*

ಮಾರ್ಚ್ 30, 2026

*ಕೆದಮುಳ್ಳೂರು : ಏ.3 ಮತ್ತು 4 ರಂದು ಶ್ರೀ ಚಾಮುಂಡಿ ದೇವಿಯ ತೆರೆ ಮಹೋತ್ಸವ*

ಮಾರ್ಚ್ 30, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ ಮಾ.30 NEWS DESK : ವಿರಾಜಪೇಟೆ ಸಮೀಪದ ಕೆದಮುಳ್ಳುರು ಗ್ರಾಮದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಶ್ರೀ ಚಾಮುಂಡಿ ದೇವಿಯ…

*ಶ್ರದ್ಧಾಭಕ್ತಿಯಿಂದ ಜರುಗಿದ ಕೆದಮುಳ್ಳೂರು ಶ್ರೀ ಭಗವತಿ ದೇವರ ವಾರ್ಷಿಕೋತ್ಸವ*

ಮಾರ್ಚ್ 30, 2026

*ಕುಡಿಯುವ ನೀರಿನ ಅಭಾವ : ಪೊನ್ನಂಪೇಟೆಯಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು*

ಮಾರ್ಚ್ 30, 2026

*ಎಮ್ಮೆಮಾಡು ಪ್ರಕರಣ : ಸಾಮಾಜಿಕ ಜಾಲತಾಣದ ಮೇಲೆ ನಿಗಾ ವಹಿಸಿರುವ ಕೊಡಗು ಪೊಲೀಸ್*

ಮಾರ್ಚ್ 30, 2026

*ಸೋಮವಾರಪೇಟೆ : ಮಹಿಳಾ ಸಂಘಗಳು ಮಹಿಳೆಯರ ಅಭಿವೃದ್ಧಿಗೆ ಸಹಕಾರಿ : ಸಾಹಿತಿ ಶ.ಗ.ನಯನತಾರ*

ಮಾರ್ಚ್ 30, 2026

*ಕೊಡಗು : ದೈವಕ್ಕೆ ಅಪಮಾನ ಆರೋಪ : ಸೂಕ್ತ ಕ್ರಮಕ್ಕೆ ಒತ್ತಾಯ*

ಮಾರ್ಚ್ 30, 2026

*ಭಗವಾನ್ ಮಹಾವೀರರ ಜೀವನ ಮತ್ತು ಬೋಧನೆಗಳು ಸಾರ್ವಕಾಲಿಕ : ವಾಣಿ ಪುಷ್ಪರಾಜ್*

ಮಾರ್ಚ್ 30, 2026

*ಕೂಡಿಗೆ ಸೈನಿಕ ಶಾಲೆಗೆ ನಿರ್ದೇಶಕರ ಭೇಟಿ*

ಮಾರ್ಚ್ 30, 2026

*”ಮುಕ್ಕಾಟಿರ ಕ್ರಿಕೆಟ್ ನಮ್ಮೆ” ಏ.3 ರಿಂದ ಆರಂಭ : 289 ತಂಡಗಳ ನಡುವೆ ಹಣಾಹಣಿ : ಮೇ 1 ರಂದು ಅಂತಿಮ ಪಂದ್ಯ*

ಮಾರ್ಚ್ 30, 2026

*ಏ.18 ಮತ್ತು 19 ರಂದು ಮಡಿಕೇರಿಯಲ್ಲಿ ರಾಜ್ಯ ಮಟ್ಟದ “ಮೊಗೇರ ಕ್ರೀಡಾಕೂಟ”*

ಮಾರ್ಚ್ 30, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.