Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ರೋಟರಿ ಮಡಿಕೇರಿಯಿಂದ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ : ದೇಶ ಸೇವೆಯ ಬಗ್ಗೆ ಯುವ ಸಮೂಹದಲ್ಲಿ ಜಾಗೃತಿ ಮೂಡಿಸಲು ನಿವೃತ್ತ ಕರ್ನಲ್ ಸಿ.ಎಂ.ತಿಮ್ಮಣ್ಣ ಕರೆ*
  • *ರೋಟರಿ ವುಡ್ಸ್ ನಿಂದ ಹಿರಿಯ ನಾಗರಿಕರ ದಿನಾಚರಣೆ : ನಾವೂ ಒಂದು ದಿನ ಹಿರಿಯ ನಾಗರಿಕರಾಗಲಿದ್ದೇವೆ ಎಂಬ ಸತ್ಯವನ್ನು ಅರಿತುಕೊಳ್ಳಿ : ಸುಬ್ರಾಯ ಸಂಪಾಜೆ*
  • *ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ*
  • *ವಿಶೇಷ ಆರೋಗ್ಯ ಕಾರ್ಯಕ್ರಮ : ಯುವಜನರಲ್ಲಿ ಎಚ್‌ಐವಿ ತಡೆಗೆ ಅರಿವು ಅಗತ್ಯ: ಡಾ. ಸನತ್ ಕುಮಾರ್*
  • *ಪೊನ್ನಂಪೇಟೆಯಲ್ಲಿ ಡಿ.ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆ*
  • *ಕೋಟೆ ಆವರಣಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಭೇಟಿ :  ಅಭಿವೃದ್ಧಿ ಕಾಮಗಾರಿಗಳ ಕುರಿತು ಪರಿಶೀಲನೆ : ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಕ್ರಮ*
  • *ಕೊಡಗು ಜಿಲ್ಲಾಡಳಿತದಿಂದ ಸದ್ಭಾವನಾ ದಿನಾಚರಣೆ*
  • *ಡಿ.ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆ : ದೂರದೃಷ್ಟಿಯ ನಾಯಕ ಡಿ.ದೇವರಾಜ ಅರಸು : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*
  • *ಸುಂಟಿಕೊಪ್ಪ ಡಿಸಿಸಿ ಬ್ಯಾಂಕ್ ಶಾಖೆಗೆ ರೂ.1.29 ಕೋಟಿ ಲಾಭ*
  • *ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಗೆ ವಿಶೇಷ ಸಮವಸ್ತ್ರ ವಿತರಣೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೆಸರು ಗದ್ದೆಯಲ್ಲಿ ಮಿಂದೆದ್ದ ಎಸ್ಎಂಎಸ್ ಶಾಲೆಯ ವಿದ್ಯಾರ್ಥಿಗಳು*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೆಸರು ಗದ್ದೆಯಲ್ಲಿ ಮಿಂದೆದ್ದ ಎಸ್ಎಂಎಸ್ ಶಾಲೆಯ ವಿದ್ಯಾರ್ಥಿಗಳು*

ಆಗಷ್ಟ್ 16, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ವಿರಾಜಪೇಟೆ ಆ.16 NEWS DESK : ಶ್ರೀ ಅರಮೇರಿಯ ಎಸ್ಎಂಎಸ್ ವಿದ್ಯಾಪೀಠದ ವಿದ್ಯಾರ್ಥಿಗಳ ಕೆಸರುಗದ್ದೆ ಕ್ರೀಡಾಕೂಟ ಸಂಭ್ರಮದಿಂದ ನಡೆಯಿತು. ಕಳಂಚೇರಿ ಮಠದ ಗದ್ದೆಯಲ್ಲಿ ವಾಡಿಕೆಯಂತೆ ಈ ಬಾರಿಯೂ ಕೂಡ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಮಕ್ಕಳು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು. ಪ್ರಗತಿಪರ ರೈತ, ಉದ್ಯಮಿ ಉದಿಯಂಡ ಚಂಗಪ್ಪಕ್ರೀಡೋತ್ಸವಕ್ಕೆ ಚಾಲನೆ ನೀಡಿದರು. ಕೃ ಷಿ ಭೂಮಿಯೊಡನೆ ತಮಗಿರುವ ಸಂಬಂಧ, ಕೃಷಿಯಿಂದ ರೈತ ಎದುರಿಸುವ ಸವಾಲುಗಳನ್ನು ವಿವರಿಸಿದ ಅವರು, ಅನ್ನದ ಒಂದೊಂದು ಅಗುಳು ಕೂಡ ಎಷ್ಟೊಂದು ಮುಖ್ಯವಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ವಿದ್ಯಾರ್ಥಿಗಳಿಗೆ ಕ್ರೀಡೆ ಯಂತಹ ಸಹಪಠ್ಯದಲ್ಲಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಿರುವುದನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಕಳಂಚೇರಿ ಮಠದ ಪೀಠಾಧಿಪತಿ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಗಳು ಹೆಸರುಗದ್ದೆ ಕ್ರೀಡಾಕೂಟ ಕೇವಲ ಮನಸ್ಸಿನ ಮನರಂಜನೆಗಾಗಿ ಮಾತ್ರವಲ್ಲ, ಮಣ್ಣಿನಿಂದ ಹೇಗೆ ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕೆಂಬುದನ್ನು ಇಂದಿನ ಮಕ್ಕಳು ಆಲೋಚನೆ ಮಾಡಬೇಕಿದೆ ಎಂದರು. ವಿದ್ಯಾರ್ಥಿಗಳು ಮಣ್ಣಿನ ಮೇಲೆ ಪ್ರೀತಿಯನ್ನು ಬೆಳೆಸಿಕೊಂಡರೆ ಕೆಸರುಗದ್ದೆಯಂತಹ ಕ್ರೀಡೋತ್ಸವಕ್ಕೆ ಮೌಲ್ಯ ಬರುತ್ತದೆ. ಕೆಸರುಗದ್ದೆಯ ಮಣ್ಣಿನ ಸುಗಂಧದ ಸೊಗಡು ಬೇರೆ ಯಾವುದರಿಂದಲೂ ನಮಗೆ ಸಿಗಲು ಸಾಧ್ಯವಿಲ್ಲ. ಕೃಷಿಗೆ ಪೂರಕವಾದ ಗೋವುಗಳ ಮೇಲು ವಿದ್ಯಾರ್ಥಿಗಳು ಪ್ರೀತಿಯನ್ನು ಬೆಳೆಸಿಕೊಳ್ಳಬೇಕಿದೆ. ಯಾವುದೇ ಹುದ್ದೆ ಮಾಡಿದರು ಪ್ರತಿಯೊಬ್ಬರು ಮಣ್ಣಿನೊಡನೆ ಸಂಪರ್ಕ ಇಟ್ಟುಕೊಂಡಿರಬೇಕು. ಇತ್ತೀಚಿಗೆ ಭತ್ತದ ಕೃಷಿಯಿಂದ ಹೆಚ್ಚಿನ ಆದಾಯ ಇಲ್ಲದಿದ್ದರೂ ಕೃಷಿ ಸಂಸ್ಕೃತಿ ಕಣ್ಮರೆಯಾಗಬಾರದೆಂಬ ಕಾಳಜಿಯಿಂದ ಗದ್ದೆಯನ್ನು ನೆಡುವ ಕಾರ್ಯ ಮುಂದುವರೆಯುತ್ತಾ ಬಂದಿದೆ. ಮಕ್ಕಳು ಆಡಿ ಕುಣಿದು ಕುಪ್ಪಳಿಸಿದ ಗದ್ದೆಯು ಸಂತೋಷದಿಂದ ಹೆಚ್ಚಿನ ಇಳುವರಿ ಕೊಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಎಸ್ಎಮ್ಎಸ್ ವಿದ್ಯಾಪೀಠದ ಪ್ರಾಂಚುಪಾಲರಾದ ಕುಸುಮ್ ಟಿಟೊ ಮಾತನಾಡಿ, ಸಾಂಪ್ರದಾಯಿಕ ಕೃಷಿ ಪದ್ಧತಿ ನಶಿಸುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿ, 300 ವರ್ಷದ ಇತಿಹಾಸ ಇರುವ ಶ್ರೀ ಮಠದ ವಿದ್ಯಾಸಂಸ್ಥೆಯು ಕಳೆದ 16 ವರ್ಷಗಳಿಂದ ಕೆಸರು ಗದ್ದೆ ಕ್ರೀಡಾಕೂಟವನ್ನು ಆಯೋಜಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಭತ್ತದ ಗದ್ದೆಯು ನೈಜ ಅನುಭವವನ್ನು ನೀಡುತ್ತದೆ ಎಂದರು. ವಿದ್ಯಾರ್ಥಿಗಳಿಗಾಗಿ ವಾಲಿಬಾಲ್, ಥ್ರೋಬಾಲ್, ಹಗ್ಗ ಜಗ್ಗಾಟ ಮತ್ತು ಓಟದ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಮಕ್ಕಳು ಮನಸ್ಸೋ ಇಚ್ಛೆ ಆಡಿ ಕೆಸರಿನಲ್ಲಿ ಮಿಂದೆದ್ದರು. ವಿದ್ಯಾರ್ಥಿಗಳಿಂದ ಕೆಸರಿನಲ್ಲಿ ರೋಚಕ ನೃತ್ಯ ಪ್ರದರ್ಶನಗೊಂಡು ಕ್ರೀಡೆಗೆ ಸಾಂಸ್ಕೃತಿಕ ಮೆರುಗನ್ನು ನೀಡಿತು. ಇದೇ ವೇಳೆ ಶಾಲಾ ಸಿಬ್ಬಂದಿಗಳು ಭಾಗಿಗಳಾಗಿ ಕ್ರೀಡಾಕೂಟದ ಯಶಸ್ಸಿಗೆ ಭಾಜನರಾದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ರೋಟರಿ ಮಡಿಕೇರಿಯಿಂದ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ : ದೇಶ ಸೇವೆಯ ಬಗ್ಗೆ ಯುವ ಸಮೂಹದಲ್ಲಿ ಜಾಗೃತಿ ಮೂಡಿಸಲು ನಿವೃತ್ತ ಕರ್ನಲ್ ಸಿ.ಎಂ.ತಿಮ್ಮಣ್ಣ ಕರೆ*

ಆಗಷ್ಟ್ 21, 2026

*ರೋಟರಿ ವುಡ್ಸ್ ನಿಂದ ಹಿರಿಯ ನಾಗರಿಕರ ದಿನಾಚರಣೆ : ನಾವೂ ಒಂದು ದಿನ ಹಿರಿಯ ನಾಗರಿಕರಾಗಲಿದ್ದೇವೆ ಎಂಬ ಸತ್ಯವನ್ನು ಅರಿತುಕೊಳ್ಳಿ : ಸುಬ್ರಾಯ ಸಂಪಾಜೆ*

ಆಗಷ್ಟ್ 21, 2026

*ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ*

ಆಗಷ್ಟ್ 20, 2026

*ರೋಟರಿ ವುಡ್ಸ್ ನಿಂದ ಹಿರಿಯ ನಾಗರಿಕರ ದಿನಾಚರಣೆ : ನಾವೂ ಒಂದು ದಿನ ಹಿರಿಯ ನಾಗರಿಕರಾಗಲಿದ್ದೇವೆ ಎಂಬ ಸತ್ಯವನ್ನು ಅರಿತುಕೊಳ್ಳಿ : ಸುಬ್ರಾಯ ಸಂಪಾಜೆ*

ಆಗಷ್ಟ್ 21, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಆ.21 : ರೋಟರಿ ಮಡಿಕೇರಿ ವುಡ್ಸ್, ಮಡಿಕೇರಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ…

*ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ*

ಆಗಷ್ಟ್ 20, 2026

*ವಿಶೇಷ ಆರೋಗ್ಯ ಕಾರ್ಯಕ್ರಮ : ಯುವಜನರಲ್ಲಿ ಎಚ್‌ಐವಿ ತಡೆಗೆ ಅರಿವು ಅಗತ್ಯ: ಡಾ. ಸನತ್ ಕುಮಾರ್*

ಆಗಷ್ಟ್ 20, 2026

*ಪೊನ್ನಂಪೇಟೆಯಲ್ಲಿ ಡಿ.ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆ*

ಆಗಷ್ಟ್ 20, 2026

*ಕೋಟೆ ಆವರಣಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಭೇಟಿ :  ಅಭಿವೃದ್ಧಿ ಕಾಮಗಾರಿಗಳ ಕುರಿತು ಪರಿಶೀಲನೆ : ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಕ್ರಮ*

ಆಗಷ್ಟ್ 20, 2026

*ಕೊಡಗು ಜಿಲ್ಲಾಡಳಿತದಿಂದ ಸದ್ಭಾವನಾ ದಿನಾಚರಣೆ*

ಆಗಷ್ಟ್ 20, 2026

*ಡಿ.ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆ : ದೂರದೃಷ್ಟಿಯ ನಾಯಕ ಡಿ.ದೇವರಾಜ ಅರಸು : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*

ಆಗಷ್ಟ್ 20, 2026

*ಸುಂಟಿಕೊಪ್ಪ ಡಿಸಿಸಿ ಬ್ಯಾಂಕ್ ಶಾಖೆಗೆ ರೂ.1.29 ಕೋಟಿ ಲಾಭ*

ಆಗಷ್ಟ್ 20, 2026

*ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಗೆ ವಿಶೇಷ ಸಮವಸ್ತ್ರ ವಿತರಣೆ*

ಆಗಷ್ಟ್ 20, 2026

*ಕುಶಾಲನಗರದಲ್ಲಿ ಆ.23ರಂದು ಗ್ಲೋಬಲ್ ಆರ್ಯವೈಶ್ಯ ಸಮಾವೇಶದ ಸಂಕಲ್ಪ ಯಾತ್ರೆ*

ಆಗಷ್ಟ್ 20, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.