Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಏ.12 ರಂದು ವಸತಿ ಶಾಲೆ ಸಾಮಾನ್ಯ ಪ್ರವೇಶ ಪರೀಕ್ಷೆ*
  • *ಏ.10 ರಂದು ತಲಕಾವೇರಿ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ*
  • *ಏ.8 ರಂದು ಲೋಕಾಯುಕ್ತರಿಂದ ದೂರು ಅರ್ಜಿ ಸ್ವೀಕಾರ*
  • *ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್‍ನಲ್ಲಿ ಕ್ರಿಯೇಟಿವ್ ಚಿಲಿಪಿಲಿ ಬೇಸಿಗೆ ಶಿಬಿರ ಉದ್ಘಾಟನೆ*
  • *ವಿರಾಜಪೇಟೆ : ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ಒದಗಿಸಲು ಸಿ.ಪಿ.ಐ.ಎಂ ಪಕ್ಷ ಆಗ್ರಹ
  • *ಗದ್ದೆಹಳ್ಳದಲ್ಲಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ : ಶಿಕ್ಷಕರನ್ನು ಗೌರವಿಸಲು ಪಿ.ಆರ್.ಸುನಿಲ್‍ಕುಮಾರ್ ಕರೆ*
  • *ಛಾಯಾಗ್ರಹಣದ ದರ ಶೇ.10ರಷ್ಟು ಹೆಚ್ಚಳ : ಡಿ.ಸಿ.ರವೀಂದ್ರ*
  • *ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದಲ್ಲಿ ಪ್ರಾರ್ಥನಾ ಕೂಟ : ವಿಶೇಷ ಬಲಿಪೂಜೆ*
  • *ಡಾ.ಬಿ.ಆರ್.ಅಂಬೇಡ್ಕರ್ ಬದುಕು ಮತ್ತು ಬರಹ ಕುರಿತು ರಾಜ್ಯ ಮಟ್ಟದ ಮುಕ್ತ ರಸಪ್ರಶ್ನೆ ಸ್ಪರ್ಧೆ*
  • *ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯದ “ಸಂಘ” ಕ್ಷೇತ್ರದ ಮಾದರಿಯಲ್ಲೇ ಆದಿಮಸಂಜಾತ ಕೊಡವ ಸಮುದಾಯಕ್ಕೆ ಭಾರತದ ಸಂಸತ್ತು ಮತ್ತು ಕರ್ನಾಟಕ ವಿಧಾನಸಭೆ ಎರಡರಲ್ಲೂ ಪ್ರತ್ಯೇಕ ಪ್ರಾತಿನಿಧ್ಯವನ್ನು ನೀಡಲು ಆಗ್ರಹ : ಸಿಎನ್‌ಸಿಯಿಂದ ಸತ್ಯಾಗ್ರಹ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮಡಿಕೇರಿ ನಗರಸಭೆ ವಿರುದ್ಧ ಹೋರಾಟ : ಎಸ್‌ಡಿಪಿಐ ಎಚ್ಚರಿಕೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮಡಿಕೇರಿ ನಗರಸಭೆ ವಿರುದ್ಧ ಹೋರಾಟ : ಎಸ್‌ಡಿಪಿಐ ಎಚ್ಚರಿಕೆ*

ಆಗಷ್ಟ್ 20, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ NEWS DESK  ಆ.20 : ನಗರದ ಅಭಿವೃದ್ಧಿಯನ್ನು ಮರೆತಿರುವ ಮತ್ತು ಸಾರ್ವಜನಿಕರ ಕಡತಗಳನ್ನು ವಿಲೇವಾರಿ ಮಾಡದೆ ತೊಂದರೆ ನೀಡುತ್ತಿರುವ ನಗರಸಭೆ ವಿರುದ್ಧ ತೀವ್ರ ರೀತಿಯ ಹೋರಾಟ ರೂಪಿಸುವುದಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಪ್ರಮುಖರು ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರಸಭೆಯ ಎಸ್‌ಡಿಪಿಐ ಸದಸ್ಯರಾದ ಅಮಿನ್ ಮೊಹಿಸಿನ್ ಹಾಗೂ ಮನ್ಸೂರ್ ಆಲಿ ಪೌರಾಯುಕ್ತರ ನಿರ್ಲಕ್ಷö್ಯ ಮತ್ತು ಈ ಹಿಂದಿನ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರ ಅಸಮರ್ಥ ಆಡಳಿತದಿಂದಾಗಿ ನಗರಸಭೆ ಸಮಸ್ಯೆಗಳಲ್ಲಿ ಸಿಲುಕಿಕೊಂಡಿದೆ ಎಂದು ಟೀಕಿಸಿದರು. ಮಡಿಕೇರಿ ನಗರಸಭೆಯ ಮೊದಲನೇ ಅವಧಿ ಪೂರ್ಣಗೊಳಿಸಿ ಮುಂದಿನ ಅವಧಿಗೆ ಅಧಿಕಾರ ಹಿಡಿಯಲು ಆಡಳಿತ ಪಕ್ಷ ಬಿಜೆಪಿ ರಾಜಕೀಯ ಕಸರತ್ತು ನಡೆಸುತ್ತಿದೆ. ನಗರ ಎಂದೂ ಕಂಡರಿಯದ ಹೀನಾಯ ಆಡಳಿತಕ್ಕೆ ಹಿಂದಿನ ಆಡಳಿತ ಮಂಡಳಿ ಸಾಕ್ಷಿಯಾಗಿತ್ತು. ಬಿ.ಜೆ.ಪಿಯ ಸ್ವಾರ್ಥ, ದ್ವೇಷ ಹಾಗೂ ಬಣ ರಾಜಕೀಯದಿಂದಾಗಿ ನಗರಸಭೆ ಅಭಿವೃದ್ಧಿ ಶೂನ್ಯವಾಗಿದೆ. ಅನಿತ ಪೂವಯ್ಯ ಅವರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಯಾವುದೇ ವಿಶೇಷ ಅನುದಾನವನ್ನು ನಗರಸಭೆಗೆ ತರಲು ಸಾಧ್ಯವಾಗಿಲ್ಲ.
ಮಡಿಕೇರಿಯ ನಾಗರೀಕರು ಸಮಸ್ಯೆಗಳ ಪರಿಹಾರ ಮತ್ತು ಕಡತಗಳ ವಿಲೇವಾರಿಗಾಗಿ ನಗರಸಭೆಗೆ ತಿಂಗಳಾನುಗಟ್ಟಲೆ ಅಲೆದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಕಳೆದ 20 ದಿನಗಳಿಂದ ಸರ್ವರ್ ಸಮಸ್ಯೆಯ ನೆಪ ಹೇಳುತ್ತಾ ಕಾಲಹರಣ ಮಾಡಲಾಗುತ್ತಿದೆ. ಪಕ್ಕದ ಯಾವುದೇ ತಾಲ್ಲೂಕು, ಜಿಲ್ಲೆಗಳಲ್ಲಿ ಇಲ್ಲದ ಸಮಸ್ಯೆ ಮಡಿಕೇರಿ ನಗರಸಭೆಯಲ್ಲಿ ಕಂಡು ಬಂದಿದೆ.
ಖಾತೆ ವರ್ಗಾವಣೆಗೆ ಸಂಬಂಧಿಸಿದ ನೂರೆಂಟು ಕಡತಗಳು ನಗರಸಭೆಯಲ್ಲಿ ವರ್ಷಾನುಗಟ್ಟಲೆ ಬಾಕಿ ಉಳಿಸಿಕೊಂಡಿರುವುದರ ಹಿಂದೆ ಲಾಭದಾಯಕ ದುರುದ್ದೇಶ ಎದ್ದು ಕಾಣುತ್ತಿದೆ. ಉಡುಗೊರೆ ಪತ್ರ, ಬಿಡುಗಡೆ ಪತ್ರ, ವಿಭಜನಾ ಪತ್ರದ ಯಾವುದೇ ಖಾತೆಗಳನ್ನು ಮಾಡದೆ ಸಾರ್ವಜನಿಕರಿಗೆ ತೊಂದರೆ ನೀಡಲಾಗುತ್ತಿದೆ ಎಂದು ಸದಸ್ಯರು ಆರೋಪಿಸಿದರು.
ಆಯುಕ್ತರ ಸಾರ್ವಜನಿಕ ಸೇವೆಯ ಇಚ್ಛಾಸಕ್ತಿಯ ಕೊರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನವರಿ ತಿಂಗಳಿನಲ್ಲಿ ನಗರಸಭೆಯ ವಿಶೇಷ ಸಭೆ ನಡೆಸಿ 23 ಸದಸ್ಯರು ಒಮ್ಮತದ ನಿರ್ಣಯ ಕೈಗೊಂಡು ಪೌರಾಯುಕ್ತ ವಿಜಯ್ ಅವರ ವರ್ಗಾವಣೆಗೆ ಒತ್ತಾಯಿಸಲಾಗಿತ್ತು. ನಿರ್ಣಯವಾಗಿ ಏಳು ತಿಂಗಳಾದರೂ ನಗರಸಭೆಯ ನಿರ್ಧಾರಕ್ಕೆ ವಿರುದ್ಧವಾಗಿ ಮಡಿಕೇರಿ ಶಾಸಕರು ಇವರನ್ನು ಉಳಿಸಿಕೊಂಡಿರುವ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದರು. ಬೀದಿ ದೀಪದ ನಿರ್ವಹಣೆ ಸಮರ್ಪಕವಾಗಿಲ್ಲದೆ ಮಡಿಕೇರಿ ನಗರ ಕತ್ತಲೆಯಲ್ಲಿ ಮುಳುಗುತ್ತಿದೆ. ನಗರದ ರಸ್ತೆಗಳು ಸಂಪೂರ್ಣವಾಗಿ ಹೊಂಡ ಗುಂಡಿಗಳಾಗಿವೆ. ನಗರೋತ್ಥಾನದ 4ನೇ ಹಂತದ ಕಾಮಗಾರಿ ಸಂಪೂರ್ಣ ನೆನೆಗುದಿಗೆ ಬಿದ್ದಿದೆ. ಕಳೆದ ಅವಧಿಯ 5 ಕೋಟಿ ರೂ. ಬಳಕೆಯಾಗದೆ ಸರ್ಕಾರಕ್ಕೆ ವಾಪಾಸ್ಸಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಡಿಕೇರಿಯ ಹೈಟೆಕ್ ಮಾರುಕಟ್ಟೆ ಶೋಚನೀಯ ಪರಿಸ್ಥಿತಿಯಲ್ಲಿದೆ. ಕುರಿ-ಕೋಳಿ ಮಳಿಗೆ ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿವೆ. ಶೆಡ್ ನಿರ್ಮಿಸಿ ಸ್ಥಳಾಂತರಿಸುವ ನಿರ್ಣಯ ಕೈಗೊಂಡಿದ್ದರೂ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ಶ್ವಾನಗಳ ಸಂಖ್ಯೆ ಹೆಚ್ಚಾಗಿದ್ದು, ಪಾದಾಚಾರಿಗಳು ಆತಂಕದಿಂದಲೇ ನಡೆದಾಡಬೇಕಾಗಿದೆ ಎಂದರು. ನಗರದಲ್ಲಿ ನಿವೇಶನ ರಹಿತ ಬಡವರು ಹೆಚ್ಚಿನ ಸಂಖ್ಯೆಯಲ್ಲಿದ್ದು, 1800 ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿದೆ. ತಕ್ಷಣ ಜಾಗ ಗುರುತಿಸಿ ನಿವೇಶನ ಹಂಚಬೇಕು ಎಂದು ಒತ್ತಾಯಿಸಿದರು. ನಗರದ ಎಲ್ಲಾ ಸಮಸ್ಯೆಗಳನ್ನು ಆಡಳಿತಾಧಿಕಾರಿಗಳು ಒಂದು ವಾರದೊಳಗೆ ಬಗೆಹರಿಸದೆ ಇದ್ದಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ನಗರಸಭೆಯ ಎಸ್‌ಡಿಪಿಐ ಸದಸ್ಯರುಗಳಾದ ಬಷೀರ್ ಅಹಮ್ಮದ್, ನೀಮಾ ಹರ್ಷದ್ ಹಾಗೂ ಮೇರಿ ವೇಗಸ್ ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಏ.12 ರಂದು ವಸತಿ ಶಾಲೆ ಸಾಮಾನ್ಯ ಪ್ರವೇಶ ಪರೀಕ್ಷೆ*

ಏಪ್ರಿಲ್ 2, 2026

*ಏ.10 ರಂದು ತಲಕಾವೇರಿ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ*

ಏಪ್ರಿಲ್ 2, 2026

*ಏ.8 ರಂದು ಲೋಕಾಯುಕ್ತರಿಂದ ದೂರು ಅರ್ಜಿ ಸ್ವೀಕಾರ*

ಏಪ್ರಿಲ್ 2, 2026

*ಏ.10 ರಂದು ತಲಕಾವೇರಿ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ*

ಏಪ್ರಿಲ್ 2, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಏ.2 NEWS DESK : ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿರುವ ಶ್ರೀ ತಲಕಾವೇರಿ ದೇವಾಲಯದಲ್ಲಿ ಶ್ರೀ ಉಚ್ಚಿಲ ನೀಲೇಶ್ವರ ಪದ್ಮನಾಭ…

*ಏ.8 ರಂದು ಲೋಕಾಯುಕ್ತರಿಂದ ದೂರು ಅರ್ಜಿ ಸ್ವೀಕಾರ*

ಏಪ್ರಿಲ್ 2, 2026

*ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್‍ನಲ್ಲಿ ಕ್ರಿಯೇಟಿವ್ ಚಿಲಿಪಿಲಿ ಬೇಸಿಗೆ ಶಿಬಿರ ಉದ್ಘಾಟನೆ*

ಏಪ್ರಿಲ್ 2, 2026

*ವಿರಾಜಪೇಟೆ : ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ಒದಗಿಸಲು ಸಿ.ಪಿ.ಐ.ಎಂ ಪಕ್ಷ ಆಗ್ರಹ

ಏಪ್ರಿಲ್ 2, 2026

*ಗದ್ದೆಹಳ್ಳದಲ್ಲಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ : ಶಿಕ್ಷಕರನ್ನು ಗೌರವಿಸಲು ಪಿ.ಆರ್.ಸುನಿಲ್‍ಕುಮಾರ್ ಕರೆ*

ಏಪ್ರಿಲ್ 2, 2026

*ಛಾಯಾಗ್ರಹಣದ ದರ ಶೇ.10ರಷ್ಟು ಹೆಚ್ಚಳ : ಡಿ.ಸಿ.ರವೀಂದ್ರ*

ಏಪ್ರಿಲ್ 2, 2026

*ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದಲ್ಲಿ ಪ್ರಾರ್ಥನಾ ಕೂಟ : ವಿಶೇಷ ಬಲಿಪೂಜೆ*

ಏಪ್ರಿಲ್ 2, 2026

*ಡಾ.ಬಿ.ಆರ್.ಅಂಬೇಡ್ಕರ್ ಬದುಕು ಮತ್ತು ಬರಹ ಕುರಿತು ರಾಜ್ಯ ಮಟ್ಟದ ಮುಕ್ತ ರಸಪ್ರಶ್ನೆ ಸ್ಪರ್ಧೆ*

ಏಪ್ರಿಲ್ 2, 2026

*ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯದ “ಸಂಘ” ಕ್ಷೇತ್ರದ ಮಾದರಿಯಲ್ಲೇ ಆದಿಮಸಂಜಾತ ಕೊಡವ ಸಮುದಾಯಕ್ಕೆ ಭಾರತದ ಸಂಸತ್ತು ಮತ್ತು ಕರ್ನಾಟಕ ವಿಧಾನಸಭೆ ಎರಡರಲ್ಲೂ ಪ್ರತ್ಯೇಕ ಪ್ರಾತಿನಿಧ್ಯವನ್ನು ನೀಡಲು ಆಗ್ರಹ : ಸಿಎನ್‌ಸಿಯಿಂದ ಸತ್ಯಾಗ್ರಹ*

ಏಪ್ರಿಲ್ 2, 2026

*ನಾಪೋಕ್ಲುವಿನಲ್ಲಿ ಹಿಂದೂ ಜನಜಾಗೃತಿ ಜಾಥ*

ಏಪ್ರಿಲ್ 2, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.