Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಯಶಸ್ವೀ ಕಾರ್ಯಾಚರಣೆ : ಅರಣ್ಯಕ್ಕೆ ಮರಳಿದ ಕಾಡಾನೆ ಹಿಂಡು*
  • *ಚೇನಂಡ ಐನ್ ಮನೆಗೆ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ : ಕೊಡವ ಹಾಕಿ ಉತ್ಸವಕ್ಕೆ ಅಗತ್ಯ ಸಹಕಾರದ ಭರವಸೆ*
  • *ವಿರಾಜಪೇಟೆಯಲ್ಲಿ ಜಾಗೃತಿಗಾಗಿ ಪೊಲೀಸರ ಪಥ ಸಂಚಲನ*
  • *ಹಿಂದೂ ಜನ ಜಾಗೃತಿ ಸಭೆ : ನಾಪೋಕ್ಲುವಿನಲ್ಲಿ ಶಾಂತಿ ಸಭೆ*
  • *ಏ.2 ರಿಂದ ಕಾರ್ಕಳ ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್ ನಲ್ಲಿ ಚಿಲಿಪಿಲಿ ಮಕ್ಕಳ ವಿಶೇಷ ಶಿಬಿರ*
  • *ಭಾಗಮಂಡಲ : ಕಾಡಂಚಿನ ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣೆ*
  • *ಏ.02 ರಂದು ಸಾಮೂಹಿಕ ಸತ್ಯನಾರಾಯಣ ಪೂಜೆ*
  • *ರೈತರ ಮಕ್ಕಳಿಂದ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ*
  • *ಸಾರ್ವಜನಿಕರ ಗಮನಕ್ಕೆ*
  • *ನಿವೃತ್ತಿ ಹೊಂದಿದ ಪೊಲೀಸ್ ಅಧಿಕಾರಿಗಳಿಗೆ ಬೀಳ್ಕೊಡುಗೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಸುಂಟಿಕೊಪ್ಪ : ಮಹಿಳೆಯ ಬೆಂಬಲಕ್ಕೆ ಪುರುಷ ಸಮಾಜವಿದೆ ಎನ್ನುವ ಅರ್ಥವನ್ನು ರಕ್ಷಾಬಂಧನ ನೀಡುತ್ತದೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಸುಂಟಿಕೊಪ್ಪ : ಮಹಿಳೆಯ ಬೆಂಬಲಕ್ಕೆ ಪುರುಷ ಸಮಾಜವಿದೆ ಎನ್ನುವ ಅರ್ಥವನ್ನು ರಕ್ಷಾಬಂಧನ ನೀಡುತ್ತದೆ*

ಆಗಷ್ಟ್ 21, 20241 Min ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಸುಂಟಿಕೊಪ್ಪ NEWS DESK ಆ.21 : ನಾರಾಯಣ ಗುರು ಬಿಲ್ಲವ ಸೇವಾ ಸಂಘ ಮತ್ತು ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘದ ವತಿಯಿಂದ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಾರಾಯಣ ಗುರುಗಳ 170ನೇ ಜಯಂತಿ ಹಾಗೂ ರಕ್ಷಾಬಂಧನ ಕಾರ್ಯಕ್ರಮ ನಡೆಯಿತು. ಕನ್ನಡ ಭಾರತಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸತೀಶ್ ಅವರು ಮಾತನಾಡಿ ಒಂದೇ ಕುಲ, ಮನುಜರೆಲ್ಲ ಒಂದೇ ಎಂದು ಪ್ರತಿಪಾದಿಸಿದ ನಾರಾಯಣ ಗುರುಗಳ ಜೀವನವನ್ನು ನಾವೆಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಜಾತಿಯತೆ ಪ್ರಬಲವಾಗಿದ್ದ ಕಾಲಘಟ್ಟದಲ್ಲಿ ದೇವಾಲಯಗಳನ್ನು ನಿರ್ಮಿಸಿ ಶೋಷಿತ ವರ್ಗಕ್ಕೆ ದೇವಾಲಯಗಳ ಪ್ರವೇಶಕ್ಕೆ ನಾರಾಯಣ ಗುರುಗಳು ಅವಕಾಶ ಮಾಡಿಕೊಟ್ಟಿರುವುದು ಸಾಧನೆಯ ಒಂದು ಪ್ರತೀಕವಾಗಿದೆ ಎಂದು ಬಣ್ಣಿಸಿದರು. ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘದ ಸದಸ್ಯರಾದ ವೀಣಾ ಮಾತನಾಡಿ, ಸಹೋದರಿಯ ರಕ್ಷಣೆಯನ್ನು ಪ್ರತಿಯೊಬ್ಬ ಸಹೋದರನು ಮಾಡಿದ್ದಲ್ಲಿ ರಾಮರಾಜ್ಯದ ಕಲ್ಪನೆ ನನಸಾಗಲಿದೆ ಎಂದರು. ಮಹಿಳೆಯರಿಗೆ ಸಮಸ್ಯೆಗಳು ಉಂಟಾದಲ್ಲಿ ಎಲ್ಲರೂ ತಮ್ಮ ಮನೆಯ ಸಮಸ್ಯೆ ಎಂದು ಭಾವಿಸಿ, ಬಗೆಹರಿಸಲು ಸಿದ್ದರಿರಬೇಕು. ಹಾಗಾದಾಗ ಮಾತ್ರ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕಲು ಸಾಧ್ಯ. ಪ್ರತಿ ಮಹಿಳೆಯ ಬೆಂಬಲಕ್ಕೆ ಪುರುಷ ಸಮಾಜ ಇದೆ ಎನ್ನುವ ಅರ್ಥವನ್ನು ರಕ್ಷಾಬಂಧನ ನೀಡುತ್ತದೆ ಎಂದರು. ಕಾರ್ಯಕ್ರಮಕ್ಕೂ ಮೊದಲು ನಾರಾಯಣ ಗುರುಗಳ ಭಾವಚಿತ್ರಕ್ಕೆ ನಾರಾಯಣಗುರು ಬಿಲ್ಲವ ಸೇವಾ ಸಂಘದ ಸಲಹಾ ಸಮಿತಿಯ ಸದಸ್ಯರಾದ ಬಿ.ಬಿ.ಮೋನಪ್ಪ ಪೂಜಾರಿ ಅವರು ಪೂಜೆ ಸಲ್ಲಿಸಿದರು. ನಂತರ ನೆರೆದಿದ್ದ ಬಿಲ್ಲವ ಸಮಾಜದ ಸದಸ್ಯರು ಪುಷ್ಪಾರ್ಚನೆಯನ್ನು ಮಾಡುವ ಮೂಲಕ ನಾರಾಯಣ ಗುರುಗಳಿಗೆ ಗೌರವ ಸಲ್ಲಿಸಿದರು. ಸದಸ್ಯರುಗಳು ರಾಖಿ ಕಟ್ಟುವ ಮೂಲಕ ರಕ್ಷಾಬಂಧನ ಆಚರಿಸಿದರು. ಸಂಘದ ಅಧ್ಯಕ್ಷ ಬಿ.ಎಂ.ಮಣಿ ಮುಖೇಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ದೇಯಿ ಬೈದೇತಿ ಮಹಿಳಾ ಸಂಘದ ಅಧ್ಯಕ್ಷರಾದ ಮಧು ನಾಗಪ್ಪ, ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಪ್ಪ ಕೋಟ್ಯಾನ್, ಸಲಹಾ ಸಮಿತಿ ಸದಸ್ಯ ಡಾ.ಯಶೋಧರ ಪೂಜಾರಿ, ಕೆ.ಪಿ.ಜಗನ್ನಾಥ್, ಬಿ.ಬಿ.ಜಿನ್ನಪ್ಪ ಪೂಜಾರಿ, ರಮೇಶ್ ಪೂಜಾರಿ, ರಮೇಶ್ ಕೊಡಗರಹಳ್ಳಿ, ಅಂಜಲಿ ಯಶೋಧರ ಪೂಜಾರಿ, ಮಹಿಮಾ ಸತ್ಯ, ಪೂರ್ಣಿಮಾ ರವಿ, ಬೇಬಿ, ಮೀನಾಕ್ಷಿ, ಅಶೋಕ್, ಮಿಲನ್, ಹರೀಶ್ ಸೋಮವಾರಪೇಟೆ ಸೇರಿದಂತೆ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಯಶಸ್ವೀ ಕಾರ್ಯಾಚರಣೆ : ಅರಣ್ಯಕ್ಕೆ ಮರಳಿದ ಕಾಡಾನೆ ಹಿಂಡು*

ಮಾರ್ಚ್ 31, 2026

*ಚೇನಂಡ ಐನ್ ಮನೆಗೆ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ : ಕೊಡವ ಹಾಕಿ ಉತ್ಸವಕ್ಕೆ ಅಗತ್ಯ ಸಹಕಾರದ ಭರವಸೆ*

ಮಾರ್ಚ್ 31, 2026

*ವಿರಾಜಪೇಟೆಯಲ್ಲಿ ಜಾಗೃತಿಗಾಗಿ ಪೊಲೀಸರ ಪಥ ಸಂಚಲನ*

ಮಾರ್ಚ್ 31, 2026

*ಚೇನಂಡ ಐನ್ ಮನೆಗೆ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ : ಕೊಡವ ಹಾಕಿ ಉತ್ಸವಕ್ಕೆ ಅಗತ್ಯ ಸಹಕಾರದ ಭರವಸೆ*

ಮಾರ್ಚ್ 31, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಮಾ.31 NEWS DESK : ಚೇನಂಡ ಐನ್ ಮನೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ…

*ವಿರಾಜಪೇಟೆಯಲ್ಲಿ ಜಾಗೃತಿಗಾಗಿ ಪೊಲೀಸರ ಪಥ ಸಂಚಲನ*

ಮಾರ್ಚ್ 31, 2026

*ಹಿಂದೂ ಜನ ಜಾಗೃತಿ ಸಭೆ : ನಾಪೋಕ್ಲುವಿನಲ್ಲಿ ಶಾಂತಿ ಸಭೆ*

ಮಾರ್ಚ್ 31, 2026

*ಏ.2 ರಿಂದ ಕಾರ್ಕಳ ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್ ನಲ್ಲಿ ಚಿಲಿಪಿಲಿ ಮಕ್ಕಳ ವಿಶೇಷ ಶಿಬಿರ*

ಮಾರ್ಚ್ 31, 2026

*ಭಾಗಮಂಡಲ : ಕಾಡಂಚಿನ ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣೆ*

ಮಾರ್ಚ್ 31, 2026

*ಏ.02 ರಂದು ಸಾಮೂಹಿಕ ಸತ್ಯನಾರಾಯಣ ಪೂಜೆ*

ಮಾರ್ಚ್ 31, 2026

*ರೈತರ ಮಕ್ಕಳಿಂದ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ*

ಮಾರ್ಚ್ 31, 2026

*ಸಾರ್ವಜನಿಕರ ಗಮನಕ್ಕೆ*

ಮಾರ್ಚ್ 31, 2026

*ನಿವೃತ್ತಿ ಹೊಂದಿದ ಪೊಲೀಸ್ ಅಧಿಕಾರಿಗಳಿಗೆ ಬೀಳ್ಕೊಡುಗೆ*

ಮಾರ್ಚ್ 31, 2026

*ವಿರಾಜಪೇಟೆಯ ಕೊಡವ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ*

ಮಾರ್ಚ್ 31, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.