Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಬಾಳೆಲೆ-ನಲ್ಲೂರು : ಮೇ 5 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
  • *ಉಳ್ಳಿಯಡ ಎಂ. ಪೂವಯ್ಯ ಅವರಿಗೆ ಸನ್ಮಾನ*
  • *ನಾಪೋಕ್ಲು : ಮಹಿಳೆಯರು ಸ್ವಾವಲಂಬಿಗಳಾಗಿ : ವನಜಾಕ್ಷಿ ರೇಣುಕೇಶ್*
  • *ವಿರಾಜಪೇಟೆಯಲ್ಲಿ ಸಂಭ್ರಮದಿಂದ ನಡೆದ ವಿಶು ಕಣಿ ಪೂಜೆ ಹಾಗೂ ಗ್ರಾಮೀಣ ಕ್ರೀಡಾಕೂಟ*
  • *ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ* 
  • *ಕೊಡಗು : ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸಭೆ : ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಶ್ರಮಿಸಿ, ಜೊತೆಗೆ ಅಧಿಕಾರ ನಡೆಸಿ : ಗಣ್ಯರ ಅಭಿಮತ*
  • *ಗೋಣಿಕೊಪ್ಪ : ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಧ್ಯಕ್ಷರಾಗಿ ಡಾ.ಮಂಡೆಪಂಡ ಆಶಿಕ್ ಚಂಗಪ್ಪ ಆಯ್ಕೆ* 
  • *ಕಾವೇರಿ ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು*
  • *ಗೋಣಿಕೊಪ್ಪಲುವಿನಲ್ಲಿ ನಗರ ಬಿಜೆಪಿ, ಶಕ್ತಿ ಕೇಂದ್ರದಿಂದ ಸಂಭ್ರಮಾಚರಣೆ*
  • *ಹಣ ಮರಳಿಸಿ ಪ್ರಾಮಾಣಿಕತೆ ಮೆರೆದ ಷಂಶುದ್ದೀನ್*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಆ.27 ರಿಂದ ನೆಲ್ಲಿಹುದಿಕೇರಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಆ.27 ರಿಂದ ನೆಲ್ಲಿಹುದಿಕೇರಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ*

ಆಗಷ್ಟ್ 23, 20241 Min ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link


ಮಡಿಕೇರಿ ಆ.23 NEWS DESK  : ನೆಲ್ಲಿಹುದಿಕೇರಿಯ ನೈಮ ಎಜುಕೇಷನಲ್ ಮತ್ತು ವೆಲ್ಫೇರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆ.27 ರಿಂದ ನೆಲ್ಲಿಹುದಿಕೇರಿಯಲ್ಲಿ ‘ಸ್ವಾಭಿಮಾನದ ಬದುಕಿಗೆ ಶಿಕ್ಷಣ’ ಎಂಬ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನಡೆಯಲಿದೆ ಎಂದು ಟ್ರಸ್ಟ್‍ನ ಅಧ್ಯಕ್ಷ ಒ.ಎಂ.ನೌಷದ್ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಅಕ್ಟೋಬರ್ ಕೊನೆಯ ವಾರದಲ್ಲಿ ಬರಲಿರುವ ಕಂದಾಯ ಪರಿವೀಕ್ಷಕರ ಹುದ್ದೆ, ಎಎಸ್‍ಐ ಮತ್ತು ಪಿಡಿಒ ಆಯ್ಕೆಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತಯಾರಿ ನಡೆಸುವ ಅಭ್ಯರ್ಥಿಗಳಿಗೆ ಅಗತ್ಯ ತರಬೇತಿಯಲ್ಲಿ ನೀಡುವ ಉದ್ದೇಶದಿಂದ ನೆಲ್ಲಿಹುದಿಕೇರಿಯ ಶಾದಿ ಮಹಲ್‍ನಲ್ಲಿ ತರಬೇತಿ ಆಯೋಜಿಸಲಾಗಿದೆ. ಈಗಾಗಲೆ ಸುಮಾರು 64 ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ತರಬೇತಿ ನೀಡುತ್ತಿದ್ದು, ಆ.27ರ ಬಳಿಕ ಪ್ರತಿ ಭಾನುವಾರ ನುರಿತ ವಿಷಯ ತಜ್ಞರಿಂದ ತರಬೇತಿಯನ್ನು ನೀಡಲಾಗುತ್ತದೆಂದು ತಿಳಿಸಿದರು. ತರಬೇತಿ ಶಿಬಿರವನ್ನು ಅಂದು ಬೆಳಿಗ್ಗೆ 10.30 ಗಂಟೆಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಜಿಲ್ಲೆಯ ಶೈಕ್ಷಣಿಕ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಕಳೆದ ಎರಡು ವರ್ಷದ ಹಿಂದೆ ಸಮಾನ ಮನಸ್ಕ ಯುವಕರು ಸೇರಿ ಸ್ಥಾಪಿಸಿದ ಎಜುಕೇಷನಲ್ ಮತ್ತು ವೆಲ್ಫೇರ್ ಚಾರಿಟೇಬಲ್ ಟ್ರಸ್ಟ್ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಮುಂದಿನ ತಲೆಮಾರು ಶಿಕ್ಷಣದಿಂದ ವಂಚಿತವಾಗದೆ ಸ್ಪರ್ಧಾತ್ಮಕ ಸನ್ನಿವೇಶಕ್ಕೆ ತಕ್ಕಂತೆ ಸಜ್ಜುಗೊಳಿಸಲು ವಿವಿಧ ತರಬೇತಿ, ಕೋಚಿಂಗ್, ಗೈಡೆನ್ಸ್ ಮುಂತಾದ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತ ಬರುತ್ತಿದೆಯೆಂದು ತಿಳಿಸಿದರು. ಜಿಲ್ಲೆಯ ಸ್ಪರ್ಧಾ ಆಕಾಂಕ್ಷಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಂದಿನ ತರಗತಿಗಳಿಗೆ ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ 7022355089, 9108374361 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ತರಬೇತಿ ಕೇಂದ್ರಕ್ಕೆ ಚಿಂತನೆ : ನೆಲ್ಲಿಹುದಿಕೇರಿಯಲ್ಲಿ ವಿವಿಧ ತರಬೇತಿಗಳನ್ನು ನೀಡುವ ಒಂದು ಸಂಸ್ಥೆಯನ್ನು ಸ್ಥಾಪಿಸುವ ಉದ್ದೇಶ ನೈಮ ಎಜುಕೇಷನಲ್ ಮತ್ತು ವೆಲ್ಫೇರ್ ಚಾರಿಟಬಲ್ ಟ್ರಸ್ಟ್‍ಗೆ ಇದೆ. ಈಗಾಗಲೇ ತರಬೇತಿ ಕೇಂದ್ರ ಸ್ಥಾಪನೆಗೆ ಜಾಗವನ್ನು ಗುರುತಿಸಲಾಗಿದೆಯೆಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‍ನ ಕಾರ್ಯದರ್ಶಿ ಪಿ.ಕೆ.ಮುಸ್ತಫ, ಉಪಾಧ್ಯಕ್ಷ ಷಂಶುದ್ದೀನ್, ಖಜಾಂಚಿ ಅನಾಸ್ ಅಬ್ದುಲ್ಲ ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಬಾಳೆಲೆ-ನಲ್ಲೂರು : ಮೇ 5 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*

ಮೇ 4, 2026

*ಉಳ್ಳಿಯಡ ಎಂ. ಪೂವಯ್ಯ ಅವರಿಗೆ ಸನ್ಮಾನ*

ಮೇ 4, 2026

*ನಾಪೋಕ್ಲು : ಮಹಿಳೆಯರು ಸ್ವಾವಲಂಬಿಗಳಾಗಿ : ವನಜಾಕ್ಷಿ ರೇಣುಕೇಶ್*

ಮೇ 4, 2026

*ಉಳ್ಳಿಯಡ ಎಂ. ಪೂವಯ್ಯ ಅವರಿಗೆ ಸನ್ಮಾನ*

ಮೇ 4, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಮೇ 4 NEWS DESK : ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮನೆಯಂಗಳದಲ್ಲಿ ಮನದುಂಬಿ ಕಾರ್ಯಕ್ರಮದಡಿ…

*ನಾಪೋಕ್ಲು : ಮಹಿಳೆಯರು ಸ್ವಾವಲಂಬಿಗಳಾಗಿ : ವನಜಾಕ್ಷಿ ರೇಣುಕೇಶ್*

ಮೇ 4, 2026

*ವಿರಾಜಪೇಟೆಯಲ್ಲಿ ಸಂಭ್ರಮದಿಂದ ನಡೆದ ವಿಶು ಕಣಿ ಪೂಜೆ ಹಾಗೂ ಗ್ರಾಮೀಣ ಕ್ರೀಡಾಕೂಟ*

ಮೇ 4, 2026

*ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ* 

ಮೇ 4, 2026

*ಕೊಡಗು : ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸಭೆ : ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಶ್ರಮಿಸಿ, ಜೊತೆಗೆ ಅಧಿಕಾರ ನಡೆಸಿ : ಗಣ್ಯರ ಅಭಿಮತ*

ಮೇ 4, 2026

*ಗೋಣಿಕೊಪ್ಪ : ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಧ್ಯಕ್ಷರಾಗಿ ಡಾ.ಮಂಡೆಪಂಡ ಆಶಿಕ್ ಚಂಗಪ್ಪ ಆಯ್ಕೆ* 

ಮೇ 4, 2026

*ಕಾವೇರಿ ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು*

ಮೇ 4, 2026

*ಗೋಣಿಕೊಪ್ಪಲುವಿನಲ್ಲಿ ನಗರ ಬಿಜೆಪಿ, ಶಕ್ತಿ ಕೇಂದ್ರದಿಂದ ಸಂಭ್ರಮಾಚರಣೆ*

ಮೇ 4, 2026

*ಹಣ ಮರಳಿಸಿ ಪ್ರಾಮಾಣಿಕತೆ ಮೆರೆದ ಷಂಶುದ್ದೀನ್*

ಮೇ 4, 2026

*ಗೋಣಿಕೊಪ್ಪ ನಗರ ಕಾಂಗ್ರೆಸ್‍ನಿಂದ ಸಂಭ್ರಮಾಚರಣೆ*

ಮೇ 4, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.