Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕರ್ನಾಟಕ ಅಂಡರ್-17 ಫುಟ್ಬಾಲ್ ತಂಡಕ್ಕೆ ಮಡಿಕೇರಿಯ ನಾಲ್ವರು ವಿದ್ಯಾರ್ಥಿಗಳು*
  • *ಶಿರಂಗಾಲ ಸರ್ಕಾರಿ ಪ್ರೌಢಶಾಲೆಗೆ ಉಚಿತ ಕಂಪ್ಯೂಟರ್ ಕೊಡುಗೆ* 
  • *ವಿರಾಜಪೇಟೆ : ನಶೆ ಮುಕ್ತ ಸಮಾಜ ನಿರ್ಮಾಣಕ್ಕೆ ಯುವಜನತೆ ಕೈಜೋಡಿಸಬೇಕು : ಕೋಮಲ*
  • *ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ಧೀಕರಣಕ್ಕೆ ಹೋಮ-ಹವನ : ದಸಂಸ ಖಂಡನೆ*
  • *ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಕಾಮಗಾರಿ ವೀಕ್ಷಣೆ*
  • *ವಿರಾಜಪೇಟೆಯಲ್ಲಿ ವಿಶ್ವಛಾಯಾಗ್ರಹಣ ದಿನಾಚರಣೆ : ಮನಸ್ಸು ಕೇಂದ್ರೀಕರಿಸಿ ಉತ್ತಮ ಛಾಯಾಚಿತ್ರ ತೆಗೆಯಿರಿ : ಡಾ.ಎಸ್.ವಿ.ನರಸಿಂಹನ್ ಕರೆ*
  • *ಆ.21 ರಂದು ರೋಟರಿ ಮಿಸ್ಟಿ ಹಿಲ್ಸ್ ನಿಂದ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಹಿರಿಯರ ಮಹತ್ವ ತಿಳಿಸುವ ಕಾಯ೯ಕ್ರಮ*
  • *ನಾಗರಪಂಚಮಿ ಬದಲು ಬಸವ ಪಂಚಮಿ ಆಚರಿಸಿದ ಮಾನವ ಬಂಧುತ್ವ ವೇದಿಕೆ*
  • *ಕಾಡಾನೆ ಉಪಟಳ ತಡೆಗೆ ಬಿಡುಗಡೆಗೊಂಡ ಅನುದಾನದ ಕುರಿತು ಶ್ವೇತಪತ್ರ ಹೊರಡಿಸಲಿ : ರೂ.500 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಲಿ : ತೇಲಪಂಡ ಶಿವಕುಮಾರ್ ನಾಣಯ್ಯ ಒತ್ತಾಯ*
  • *ವಿಧಾನಸೌಧದಲ್ಲಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಅಂತರ ರಾಷ್ಟ್ರೀಯ ಮಾದಕ ವಸ್ತು ದಂಧೆ ಪ್ರಕರಣ ಭೇದಿಸಿದ ಕೊಡಗು ಪೊಲೀಸರು : ಕೋಟ್ಯಾಂತರ ಮೌಲ್ಯದ ಹೈಡ್ರೋ ಗಾಂಜಾ ವಶ : 7 ಆರೋಪಿಗಳ ಬಂಧನ*
ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ ಪೊಲೀಸ್ ನ್ಯೂಸ್ ಭಾರತ

*ಅಂತರ ರಾಷ್ಟ್ರೀಯ ಮಾದಕ ವಸ್ತು ದಂಧೆ ಪ್ರಕರಣ ಭೇದಿಸಿದ ಕೊಡಗು ಪೊಲೀಸರು : ಕೋಟ್ಯಾಂತರ ಮೌಲ್ಯದ ಹೈಡ್ರೋ ಗಾಂಜಾ ವಶ : 7 ಆರೋಪಿಗಳ ಬಂಧನ*

ಅಕ್ಟೋಬರ್ 2, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ NEWS DESK ಅ.2 : ಅಂತರಾಷ್ಟ್ರೀಯ ಮಾದಕ ವಸ್ತು ದಂಧೆ ಪ್ರಕರಣವನ್ನು ಭೇದಿಸಿರುವ ಕೊಡಗು ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿ, ಕೋಟ್ಯಾಂತರ ಮೌಲ್ಯದ ಹೈಡ್ರೋ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಕೊಡಗು ಜಿಲ್ಲೆಯ ಹೆಗ್ಗಳ ಗ್ರಾಮದ ನಾಸಿರುದ್ದೀನ್ ಎಂ.ಯು(26), ಎಡಪಾಲ ಗ್ರಾಮದ ಯಾಹ್ಯಾ ಸಿ.ಹೆಚ್(28), ಕುಂಜಿಲ ಗ್ರಾಮದ ಅಕನಾಸ್(26), ಬೇಟೋಳಿ ಗ್ರಾಮದ ವಾಜಿದ್(26), ಕೇರಳದ ಕಣ್ಣೂರು ಗ್ರಾಮದ ರಿಯಾಜ್(44), ಕಾಸರಗೋಡಿನ ಮೆಹರೂಫ್(37) ಹಾಗೂ ರವೂಫ್(28) ಬಂಧಿತ ಆರೋಪಿಗಳು. ಇವರ ಬಳಿಯಿಂದ ಸುಮಾರು ರೂ.3 ಕೋಟಿ ಬೆಲೆ ಬಾಳುವ 3.31 ಕೆ.ಜಿ ಹೈಡ್ರೋ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆಯಲಾಗಿದೆ. ಹೈಡ್ರೋ ಗಾಂಜಾವನ್ನು ವಿಮಾನದ ಮೂಲಕ ಭಾರತ ಮತ್ತು ದುಬೈಗೆ ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದ ಅಂತರ ರಾಷ್ಟ್ರೀಯ ವ್ಯವಸ್ಥಿತ ಜಾಲವೊಂದನ್ನು ಕೊಡಗು ಪೊಲೀಸ್ ಅಧಿಕಾರಿಗಳು ಪತ್ತೆ ಹಚ್ಚಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಸುದ್ದಿಗೋಷ್ಠಿಯಲ್ಲಿ ಹೆಮ್ಮೆ ವ್ಯಕ್ತಪಡಿಸಿದರು. ಥೈಲ್ಯಾಂಡ್ ದೇಶದ ಬ್ಯಾಂಕಾಕ್ ನಗರದಲ್ಲಿ ಕೆಫೆ ಇಟ್ಟುಕೊಂಡಿರುವ ಕೇರಳ ಮೂಲದ ಮಹಮ್ಮದ್ ಅನೂಫ್ ಎಂಬಾತ ಕೇರಳದ ಕಾಸರಗೋಡಿನ ಮೆಹರೂಫ್, ರವೂಫ್ ಹಾಗೂ ಕೊಡಗಿನ ಬಂಧಿತ ಯುವಕರ ಮೂಲಕ ಭಾರತ ಮತ್ತು ದುಬೈಗೆ ಹೈಡ್ರೋ ಗಾಂಜಾವನ್ನು ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದ ಎಂದು ಎಸ್‌ಪಿ ತಿಳಿಸಿದರು. ಆರೋಪಿ ಯಾಹ್ಯಾ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೈಡ್ರೋ ಗಾಂಜಾವನ್ನು ತಂದು ನಂತರ ಅಲ್ಲಿಂದ ನಾಸೀರುದ್ದೀನ್, ಆಕನಾಸ್, ಅಜ್ಜಲ್, ರಿಯಾಜ್ ಹಾಗೂ ವಾಜೀದ್ ಅವರೊಂದಿಗೆ ಕಾರಿನಲ್ಲಿ ಗೋಣಿಕೊಪ್ಪದ ಬೆಳ್ಳಿಯಪ್ಪ ರೆಸಿಡೆನ್ಸಿಯೊಂದಕ್ಕೆ ಬಂದು ತಂಗುತ್ತಾರೆ. ಕೇರಳದ ಮೆಹರೂಫ್ ನ ಮುಂದಿನ ನಿರ್ದೇಶನಕ್ಕಾಗಿ ಕಾಯುತ್ತಿದ್ದ ತಂಡ ಒಂದೇ ಸ್ಥಳದಲ್ಲಿ ಇದ್ದರೆ ಯಾರಿಗಾದರೂ ಅನುಮಾನ ಬರುತ್ತದೆ ಎನ್ನುವ ಕಾರಣಕ್ಕೆ ಸ್ಥಳ ಬದಲಾವಣೆಗೆ ಮುಂದಾಗುತ್ತಾರೆ. ವಿರಾಜಪೇಟೆಯಿಂದ ಮಡಿಕೇರಿಗೆ ಬರುವಾಗ ಖಚಿತ ಮಾಹಿತಿ ದೊರೆತ ಹಿನ್ನೆಲೆ ಪೊಲೀಸ್ ಅಧಿಕಾರಿಗಳು ವಿರಾಜಪೇಟೆ ರಸ್ತೆಯಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದರು. ಕೃತ್ಯಕ್ಕೆ ಸಹಕರಿಸಿದ ಮತ್ತೊಬ್ಬ ಆರೋಪಿ ಆರ್ಜಿ ಗ್ರಾಮದ ರವೂಫ್ ನನ್ನು ಬೆಂಗಳೂರಿನ ಸಂಜಯನಗರ ಲೇಔಟ್ ನಿವಾಸದಲ್ಲಿ ಬಂಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿಯಾದ ಕಾಸರಗೋಡಿನ ಮೆಹರೂಫ್ ಥೈಲ್ಯಾಂಡ್ ದೇಶದ ಬ್ಯಾಂಕಾಕ್ ಗೆ ಪರಾರಿಯಾಗಲು ಯತ್ನಿಸಿದಾಗ ಕೇರಳದ ಎರ್ನಾಕುಲಂ ಜಿಲ್ಲೆಯ ಎಸ್.ಪಿ. ವೈಭವ್ ಸಕ್ಸೇನಾ ಹಾಗೂ ಕೊಚ್ಚಿನ್ ಏರ್ ಪೋರ್ಟ್ ಇಮಿಗ್ರೇಶನ್ ಅಧಿಕಾರಿಯಾದ ಕೃಷ್ಣರಾಜ್ ಅವರ ಸಹಕಾರದಿಂದ ಬಂಧಿಸಲಾಯಿತು ಎಂದು ಎಸ್‌ಪಿ ವಿವರಿಸಿದರು.
::: ಅಧಿಕ ನಶೆ :::
ಇದೊಂದು ಅಪರೂಪದ ಪ್ರಕರಣವಾಗಿದ್ದು, ಹೈಡ್ರೋ ಗಾಂಜಾ ಸಾಮಾನ್ಯ ಗಾಂಜಾಕ್ಕಿಂತ ಹೆಚ್ಚು ನಶೆಯನ್ನು ಕೊಡುವ ಮಾದಕ ದ್ರವ್ಯವಾಗಿದೆ ಮತ್ತು ದುಬಾರಿ ಬೆಲೆಯದ್ದಾಗಿದೆ. ಇದನ್ನು ವಿಭಿನ್ನ ರೀತಿಯ ಕೃತಕ ಬೆಳಕನ್ನು ಉಪಯೋಗಿಸಿ ಹವಾ ನಿಯಂತ್ರಿತ ಕೊಠಡಿಯಲ್ಲಿ ಬೆಳೆಸಲಾಗುತ್ತದೆ ಎಂದು ಎಸ್‌ಪಿ ಕೆ.ರಾಮರಾಜನ್ ಮಾಹಿತಿ ನೀಡಿದರು. ಈ ಪ್ರಕರಣವನ್ನು ಕೊಡಗು ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಂದರ್ ರಾಜ್ ಕೆ.ಎಸ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಉಪವಿಭಾಗದ ಡಿವೈಎಸ್‌ಪಿ ರವಿಕುಮಾರ್ ಎಸ್. ಹಾಗೂ ಮಡಿಕೇರಿ ನಗರ ವೃತ್ತ ನಿರೀಕ್ಷಕ ರಾಜು ಪಿ.ಕೆ. ಅವರ ನೇತೃತ್ವದ ತಂಡ ಸತತ 72 ಗಂಟೆಗಳ ಕಾಲ ತನಿಖೆಯಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿ ಭೇದಿಸಿದೆ. ಡಿ.ಸಿ.ಆರ್.ಬಿ ಘಟಕದ ಪೊಲೀಸ್ ನಿರೀಕ್ಷಕ ಮೇದಪ್ಪ ಐ.ಪಿ, ಡಿವೈಎಸ್‌ಪಿ ಮಹೇಶ್ ಕುಮಾರ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಯೋಗೇಶ್, ನಿರಂಜನ್, ಶರತ್ ರೈ, ರವಿಕುಮಾರ್, ನಾಪೋಕ್ಲು ಪೊಲೀಸ್ ಠಾಣೆಯ ಉಪನಿರೀಕ್ಷಕ ಮಂಜುನಾಥ್, ಸಿಬ್ಬಂದಿಗಳಾದ ಪ್ರದೀಪ್ ಕುಮಾರ್, ಮುರುಳಿ, ನವೀನ್ ಜಿಲ್ಲಾ ಪೊಲೀಸ್ ಘಟಕದ ತಾಂತ್ರಿಕ ಸಿಬ್ಬಂದಿಗಳಾದ ರಾಜೇಶ್ ಸಿ.ಕೆ ಹಾಗೂ ಪ್ರವೀಣ್ ಕುಮಾರ್ ಕಾರ್ಯಾಚರಣೆ ನಡೆಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕರ್ನಾಟಕ ಅಂಡರ್-17 ಫುಟ್ಬಾಲ್ ತಂಡಕ್ಕೆ ಮಡಿಕೇರಿಯ ನಾಲ್ವರು ವಿದ್ಯಾರ್ಥಿಗಳು*

ಆಗಷ್ಟ್ 19, 2026

*ಶಿರಂಗಾಲ ಸರ್ಕಾರಿ ಪ್ರೌಢಶಾಲೆಗೆ ಉಚಿತ ಕಂಪ್ಯೂಟರ್ ಕೊಡುಗೆ* 

ಆಗಷ್ಟ್ 19, 2026

*ವಿರಾಜಪೇಟೆ : ನಶೆ ಮುಕ್ತ ಸಮಾಜ ನಿರ್ಮಾಣಕ್ಕೆ ಯುವಜನತೆ ಕೈಜೋಡಿಸಬೇಕು : ಕೋಮಲ*

ಆಗಷ್ಟ್ 19, 2026

*ಶಿರಂಗಾಲ ಸರ್ಕಾರಿ ಪ್ರೌಢಶಾಲೆಗೆ ಉಚಿತ ಕಂಪ್ಯೂಟರ್ ಕೊಡುಗೆ* 

ಆಗಷ್ಟ್ 19, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕುಶಾಲನಗರ, ಆ.16 NEWS DESK : ಕುಶಾಲನಗರ ತಾಲ್ಲೂಕಿನ ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಬೆಂಗಳೂರಿನ…

*ವಿರಾಜಪೇಟೆ : ನಶೆ ಮುಕ್ತ ಸಮಾಜ ನಿರ್ಮಾಣಕ್ಕೆ ಯುವಜನತೆ ಕೈಜೋಡಿಸಬೇಕು : ಕೋಮಲ*

ಆಗಷ್ಟ್ 19, 2026

*ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ಧೀಕರಣಕ್ಕೆ ಹೋಮ-ಹವನ : ದಸಂಸ ಖಂಡನೆ*

ಆಗಷ್ಟ್ 19, 2026

*ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಕಾಮಗಾರಿ ವೀಕ್ಷಣೆ*

ಆಗಷ್ಟ್ 19, 2026

*ವಿರಾಜಪೇಟೆಯಲ್ಲಿ ವಿಶ್ವಛಾಯಾಗ್ರಹಣ ದಿನಾಚರಣೆ : ಮನಸ್ಸು ಕೇಂದ್ರೀಕರಿಸಿ ಉತ್ತಮ ಛಾಯಾಚಿತ್ರ ತೆಗೆಯಿರಿ : ಡಾ.ಎಸ್.ವಿ.ನರಸಿಂಹನ್ ಕರೆ*

ಆಗಷ್ಟ್ 19, 2026

*ಆ.21 ರಂದು ರೋಟರಿ ಮಿಸ್ಟಿ ಹಿಲ್ಸ್ ನಿಂದ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಹಿರಿಯರ ಮಹತ್ವ ತಿಳಿಸುವ ಕಾಯ೯ಕ್ರಮ*

ಆಗಷ್ಟ್ 19, 2026

*ನಾಗರಪಂಚಮಿ ಬದಲು ಬಸವ ಪಂಚಮಿ ಆಚರಿಸಿದ ಮಾನವ ಬಂಧುತ್ವ ವೇದಿಕೆ*

ಆಗಷ್ಟ್ 19, 2026

*ಕಾಡಾನೆ ಉಪಟಳ ತಡೆಗೆ ಬಿಡುಗಡೆಗೊಂಡ ಅನುದಾನದ ಕುರಿತು ಶ್ವೇತಪತ್ರ ಹೊರಡಿಸಲಿ : ರೂ.500 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಲಿ : ತೇಲಪಂಡ ಶಿವಕುಮಾರ್ ನಾಣಯ್ಯ ಒತ್ತಾಯ*

ಆಗಷ್ಟ್ 19, 2026

*ವಿಧಾನಸೌಧದಲ್ಲಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು*

ಆಗಷ್ಟ್ 19, 2026

*ಸಚಿವ ನಾಗೇಂದ್ರ ವಜಾಕ್ಕೆ ಒತ್ತಾಯ : ಸೋಮವಾರಪೇಟೆ ಬಿಜೆಪಿಯಿಂದ ಆ.20 ರಂದು ಮಡಿಕೇರಿಯಲ್ಲಿ ಪ್ರತಿಭಟನೆ*

ಆಗಷ್ಟ್ 19, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.