Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಹೆಚ್ಚುವರಿ ಅನುದಾನಕ್ಕಾಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಕಾವೇರಮ್ಮೆ ಕೊಡವ ಅಮ್ಮ ಕೊಡವ ಚಾರಿಟೇಬಲ್ ಟ್ರಸ್ಟ್*
  • *ಲಿಟಲ್ ಸ್ಕಾಲರ್ಸ್ ಅಕಾಡೆಮಿಯಿಂದ ರೈನ್‌ಕೋಟ್, ಪುಸ್ತಕ ವಿತರಣೆ*
  • *ಆದರ್ಶ ಸೇವಾ ರತ್ನ ಪ್ರಶಸ್ತಿ ಪ್ರದಾನ : ಕಲೆ, ಸಂಸ್ಕೃತಿಯ ಅನಾವರಣಕ್ಕೆ ಸಾಹಿತ್ಯ ಪರಿಷತ್ತು ವೇದಿಕೆಯಾಗಿದೆ : ಡಾ.ರಘುನಾಥ್ ಬಿ.ಎನ್*
  • *ಸಮಾಜ ವಿಜ್ಞಾನ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ*
  • *ಕಾಡಾನೆ ಹಾವಳಿ ತಡೆಗೆ ಒತ್ತಾಯ : ಸುಂಟಿಕೊಪ್ಪ ರೈತ ಸಂಘದಿಂದ ಪ್ರತಿಭಟನೆ*
  • *ಪೊನ್ನಂಪೇಟೆಯಲ್ಲಿ ಮಿನಿ ಉದ್ಯೋಗ ಮೇಳ : ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ದುಡಿಮೆಯ ದಾರಿ : ಸಿ.ಎಸ್.ಸಂಜನಾ*
  • *ಮಾನವ–ಪ್ರಾಣಿ ಸಂಘರ್ಷ, ಜಮ್ಮಾಮಲೆ ಸಮಸ್ಯೆ : ಅರಣ್ಯ ಸಚಿವರೊಂದಿಗೆ ಶಾಸಕ ಎ.ಎಸ್.ಪೊನ್ನಣ್ಣ ಚರ್ಚೆ*
  • *ಅಪ್ರಾಪ್ತ ಮಕ್ಕಳನ್ನು ದುಡಿಮೆಗೆ ಕಳುಹಿಸುವುದು ಶಿಕ್ಷಾರ್ಹ ಅಪರಾಧ : ಮಧು*
  • *ಆ.22 ರಂದು “ಗದ್ದೆಹಳ್ಳ ಗದ್ದೆ ಆಟ”(ಜಿಜಿಎ) ವಿಶಿಷ್ಟ ಕಾರ್ಯಕ್ರಮ*
  • *ಭಾಗಮಂಡಲದಲ್ಲಿ ಆ.22 ರಂದು ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ : ಕನ್ನಡ ಭಾಷೆಯನ್ನು ಪ್ರತಿಯೊಬ್ಬರು ಉಳಿಸಿ ಬೆಳೆಸಬೇಕು : ಸಾಹಿತಿ ಹರಿನರಸಿಂಹ ಉಪಾಧ್ಯಾಯ*
ಇತ್ತೀಚಿನ ಸುದ್ದಿಗಳು ಕರ್ನಾಟಕ

*ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ : ಕನ್ನಡ ಭಾಷೆಯನ್ನು ಪ್ರತಿಯೊಬ್ಬರು ಉಳಿಸಿ ಬೆಳೆಸಬೇಕು : ಸಾಹಿತಿ ಹರಿನರಸಿಂಹ ಉಪಾಧ್ಯಾಯ*

ನವೆಂಬರ್ 6, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಪುತ್ತೂರು ಸೆ.6 NEWS DESK : ಇತಿಹಾಸದ ಪುಟಗಳತ್ತ ಇಣುಕಿ ನೋಡಿದಾಗ 1903 ರಲ್ಲಿ ಆರಂಭವಾದ ಕನ್ನಡ ಏಕೀಕರಣ ಚಳುವಳಿಯು ಮುಂದಿನ ದಿನಗಳಲ್ಲಿ ತೀವ್ರಗೊಂಡು 1956ರ ನವೆಂಬರ್ ಒಂದರಂದು ಮೈಸೂರು ರಾಜ್ಯ ಉದಯವಾಯಿತು. 1973 ನವೆಂಬರ್ ಒಂದರಂದು ಕರ್ನಾಟಕ ರಾಜ್ಯವಾಗಿ ನಾಮಕರಣಗೊಂಡಿತು. ಇಲ್ಲಿನ ಸುಂದರವಾದ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಗುರುತರ ಜವಾಬ್ಧಾರಿ ನಮ್ಮ ಮೇಲಿದೆ ಎಂದು ಎಸ್.ಕೆ.ಎಫ್ ಇಂಡಿಯಾ ಲಿಮಿಟೆಡ್ ಇಲ್ಲಿನ ಅಧಿಕಾರಿ ಹಾಗೂ ಸಾಹಿತಿ ಹರಿನರಸಿಂಹ ಉಪಾಧ್ಯಾಯ ಹೇಳಿದರು. ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಲಹರಿ ಕನ್ನಡ ಸಂಘ, ರಾಷ್ಟ್ರೀಯ ಸೇವಾ ಯೊಜನಾ ಘಟಕ ಹಾಗೂ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್ ಸಂಯುಕ್ತ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಆಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತಾಡಿದರು. ಯಾವುದೇ ಭಾಷೆಯನ್ನಾಗಲಿ ನಿರಂತರವಾಗಿ ಬಳಸಿದರೆ ಮಾತ್ರ ಅದರ ಉಳಿವು ಸಾಧ್ಯವಾಗುತ್ತದೆ. ಹಾಗಾಗಿ ಕನ್ನಡ ಭಾಷೆಯನ್ನು ಬಳಸುವಲ್ಲಿ ಮತ್ತು ಉಳಿಸುವಲ್ಲಿ ನಾವು ಶಕ್ತಿವಂತರಾಗಬೇಕು ಎಂದರು. ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಪುತ್ತೂರು ತಾಲೂಕು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಜಯಗುರು ಆಚಾರ್ಯ ಹಿಂದಾರು ಮಾತನಾಡಿ ತಾನು ಕಲಿತ ಕಾಲೇಜಿನಲ್ಲಿ ವೇದಿಕೆಯನ್ನು ಹಂಚಿಕೊಳ್ಳುವುದು ಮತ್ತು ಗೌರವವನ್ನು ಸ್ವೀಕರಿಸುವುದು ಹೆಮ್ಮೆಯ ವಿಚಾರ ಎಂದರು. ಭಾಷಾಭಿಮಾನ ಒಂದು ದಿನಕ್ಕೆ ಸೀಮಿತವಾಗಬಾರದು ನಿರಂತರವಾಗಿ ಬಳಸುತ್ತಾ ಇನ್ನಷ್ಟು ಎತ್ತಕ್ಕೇರಿಸಬೇಕು ಎಂದರು. ಕಾಲೇಜಿನ ಪ್ರಾಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಮಾತನಾಡಿ ಬರೆಯುವುದನ್ನು ಓದುವ ಮತ್ತು ಓದುವಂತೆಯೇ ಬರೆಯುವ ಯಾವುದೇ ನಿಶಬ್ಧ ಶಬ್ಧವಿಲ್ಲದ ಸುಂದರ ಭಾಷೆ ಕನ್ನಡ. ಇದನ್ನು ನಿರಂತರವಾಗಿ ಓದಬೇಕು, ಬರೆಯಬೇಕು, ಬಳಸಬೇಕು ಮತ್ತು ಬೆಳೆಸಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಮುರಳೀಧರ ಭಟ್ ಮಾತನಾಡಿ ಪ್ರತಿಯೊಬ್ಬನಿಗೂ ಮಾತೃ ಭಾಷೆಯ ಮೇಲೆ ಅಪಾರ ಅಭಿಮಾನವಿರಬೇಕು. ಆಗ ಆಂತರ್ಯದಿಂದಲೇ ಉತ್ತಮ ಭಾವನೆಗಳು ಮೂಡುತ್ತವೆ. ಆಚಾರ ವಿಚಾರಗಳು, ನಡೆ-ನುಡಿಗಳು ಉತ್ತಮಗೊಂಡು ಪರಿಪೂರ್ಣತೆಯನ್ನು ಸಾಧಿಸಲು ಸಹಕಾರಿಯಾಗುತ್ತದೆ ಎಂದರು. ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಪುತ್ತೂರು ತಾಲೂಕು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಜಯಗುರು ಆಚಾರ್ಯ ಹಿಂದಾರು ಹಾಗೂ ಮುಖ್ಯ ಅತಿಥಿಗಳಾದ ಹರಿನರಸಿಂಹ ಉಪಾಧ್ಯಾಯ ಅವರನ್ನು ಗೌರವಿಸಲಾಯಿತು. ರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಲಹರಿ ಕನ್ನಡ ಸಂಘವು ಹೊರತಂದಿರುವ ಸಂಪಾದಿತ ಕೃತಿ ಅಕ್ಷರಧಾರೆಯನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಲಹರಿ ಕನ್ನಡ ಸಂಘದ ನೂತನ ಲಾಂಛನವನ್ನು ಸುಬ್ರಮಣ್ಯ ಭಟ್ ಟಿ.ಎಸ್ ಅನಾವರಣಗೊಳಿಸಿದರು. ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್ ಟಿ.ಎಸ್, ಐಎಸ್‍ಟಿಇ ಸಂಯೋಜಕ ಡಾ.ಮನುಜೇಶ್.ಬಿ.ಜೆ, ಲಹರಿ ಕನ್ನಡ ಸಂಘದ ಸಂಯೋಜಕ ಪ್ರೊ.ನವೀನ್.ಸಿ ಮತ್ತು ವಿದ್ಯಾರ್ಥಿ ಸಂಯೋಜಕ ಅನೀಶ್.ಎಸ್.ಮಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೊ.ನವೀನ್.ಸಿ ಪ್ರಸ್ತಾವನೆಗೈದರು. ಸುಪ್ರೀತ್ ಸ್ವಾಗತಿಸಿ ಕೃತಿ.ಡಿ ವಂದಿಸಿದರು. ಭುವನೇಶ್ವರಿ ಕಾರ್ಯಕ್ರಮ ನಿರ್ವಹಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಹೆಚ್ಚುವರಿ ಅನುದಾನಕ್ಕಾಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಕಾವೇರಮ್ಮೆ ಕೊಡವ ಅಮ್ಮ ಕೊಡವ ಚಾರಿಟೇಬಲ್ ಟ್ರಸ್ಟ್*

ಆಗಷ್ಟ್ 18, 2026

*ಲಿಟಲ್ ಸ್ಕಾಲರ್ಸ್ ಅಕಾಡೆಮಿಯಿಂದ ರೈನ್‌ಕೋಟ್, ಪುಸ್ತಕ ವಿತರಣೆ*

ಆಗಷ್ಟ್ 18, 2026

*ಆದರ್ಶ ಸೇವಾ ರತ್ನ ಪ್ರಶಸ್ತಿ ಪ್ರದಾನ : ಕಲೆ, ಸಂಸ್ಕೃತಿಯ ಅನಾವರಣಕ್ಕೆ ಸಾಹಿತ್ಯ ಪರಿಷತ್ತು ವೇದಿಕೆಯಾಗಿದೆ : ಡಾ.ರಘುನಾಥ್ ಬಿ.ಎನ್*

ಆಗಷ್ಟ್ 18, 2026

*ಲಿಟಲ್ ಸ್ಕಾಲರ್ಸ್ ಅಕಾಡೆಮಿಯಿಂದ ರೈನ್‌ಕೋಟ್, ಪುಸ್ತಕ ವಿತರಣೆ*

ಆಗಷ್ಟ್ 18, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ, ಆ.18 NEWS DESK : ವಿರಾಜಪೇಟೆಯ ಮಗ್ಗುಲದಲ್ಲಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ‘ಎಲ್‌ಎಸ್‌ಎ ಕೇರ್ಸ್’…

*ಆದರ್ಶ ಸೇವಾ ರತ್ನ ಪ್ರಶಸ್ತಿ ಪ್ರದಾನ : ಕಲೆ, ಸಂಸ್ಕೃತಿಯ ಅನಾವರಣಕ್ಕೆ ಸಾಹಿತ್ಯ ಪರಿಷತ್ತು ವೇದಿಕೆಯಾಗಿದೆ : ಡಾ.ರಘುನಾಥ್ ಬಿ.ಎನ್*

ಆಗಷ್ಟ್ 18, 2026

*ಸಮಾಜ ವಿಜ್ಞಾನ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ*

ಆಗಷ್ಟ್ 18, 2026

*ಕಾಡಾನೆ ಹಾವಳಿ ತಡೆಗೆ ಒತ್ತಾಯ : ಸುಂಟಿಕೊಪ್ಪ ರೈತ ಸಂಘದಿಂದ ಪ್ರತಿಭಟನೆ*

ಆಗಷ್ಟ್ 18, 2026

*ಪೊನ್ನಂಪೇಟೆಯಲ್ಲಿ ಮಿನಿ ಉದ್ಯೋಗ ಮೇಳ : ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ದುಡಿಮೆಯ ದಾರಿ : ಸಿ.ಎಸ್.ಸಂಜನಾ*

ಆಗಷ್ಟ್ 18, 2026

*ಮಾನವ–ಪ್ರಾಣಿ ಸಂಘರ್ಷ, ಜಮ್ಮಾಮಲೆ ಸಮಸ್ಯೆ : ಅರಣ್ಯ ಸಚಿವರೊಂದಿಗೆ ಶಾಸಕ ಎ.ಎಸ್.ಪೊನ್ನಣ್ಣ ಚರ್ಚೆ*

ಆಗಷ್ಟ್ 18, 2026

*ಅಪ್ರಾಪ್ತ ಮಕ್ಕಳನ್ನು ದುಡಿಮೆಗೆ ಕಳುಹಿಸುವುದು ಶಿಕ್ಷಾರ್ಹ ಅಪರಾಧ : ಮಧು*

ಆಗಷ್ಟ್ 18, 2026

*ಆ.22 ರಂದು “ಗದ್ದೆಹಳ್ಳ ಗದ್ದೆ ಆಟ”(ಜಿಜಿಎ) ವಿಶಿಷ್ಟ ಕಾರ್ಯಕ್ರಮ*

ಆಗಷ್ಟ್ 18, 2026

*ಭಾಗಮಂಡಲದಲ್ಲಿ ಆ.22 ರಂದು ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟ*

ಆಗಷ್ಟ್ 18, 2026

*ಮಡಿಕೇರಿಯಲ್ಲಿ ಬಿಜೆಪಿ ಪ್ರತಿಭಟನೆ : ಬಿ.ನಾಗೇಂದ್ರ ವಜಾಕ್ಕೆ ಆಗ್ರಹ*

ಆಗಷ್ಟ್ 18, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.