
ಮಡಿಕೇರಿ ಡಿ.20 NEWS DESK :ಮಗ್ಗುಲ 66/33/11ಕೆ.ವಿ ವಿದ್ಯುತ್ ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ನಿರ್ವಹಿಸುವುದರಿಂದ ಈ ವಿದ್ಯುತ್ ಉಪಕೇಂದ್ರದಿಂದ ಹೊರಹೊಮ್ಮುವ ಎಲ್ಲಾ ಮಾರ್ಗಗಳಲ್ಲಿ ಡಿ.21 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ವಿರಾಜಪೇಟೆ ಪಟ್ಟಣ, ಸಿದ್ದಾಪುರ, ಮೂರ್ನಾಡು, ಅಮ್ಮತ್ತಿ, ಗೋಣಿಕೊಪ್ಪ, ವಿರಾಜಪೇಟೆ, ಬೇತ್ರಿ, ಪಾಲಂಗಾಲ, ಚೆಂಬೆಬೆಳ್ಳೂರು, ಹೆಗ್ಗಳ, ಕೆ.ಎಸ್.ಬಿ. ಬಿ.ಶೆಟ್ಟಿಗೇರಿ, ಬಿಟ್ಟಂಗಾಲ, ಕೆದಮುಳ್ಳೂರು, ಕದನೂರು, ಕಾಕೋಟುಪರಂಬು, ಹೆಗ್ಗಳ, ಬೇಟೋಳಿ, ಆರ್ಜಿ, ಕರಡಿಗೋಡು, ಗುಹ್ಯ, ಕಡಂಗಮರೂರು, ಚೆಂಬೆಬೆಳ್ಳೂರು, ಕಣ್ಣಂಗಾಲ, ಕೊಂಡಂಗೇರಿ, ಹಾಲುಗುಂದ, ಮಾಲ್ದಾರೆ, ಇಂಜಿಲಗೇರಿ, ಹೊದ್ದೂರು, ನಾಪೋಕ್ಲು ಹಾಗೂ ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿವಾಹಕ ಎಂಜಿನಿಯರ್ ಕೋರಿದ್ದಾರೆ.









