Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ರಾಜ್ಯದ 87 ಗಾಂಧಿ ಹೆಜ್ಜೆಗುರುತಿನ ಸ್ಥಳಗಳಲ್ಲಿ ಸ್ಮಾರಕ ಸ್ತಂಭ ನಿರ್ಮಾಣ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಅನುಷ್ಠಾನ*
  • ರಾಜ್ಯದ 87 ಗಾಂಧಿ ಹೆಜ್ಜೆಗುರುತಿನ ಸ್ಥಳಗಳಲ್ಲಿ ಸ್ಮಾರಕ ಸ್ತಂಭ ನಿರ್ಮಾಣ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಅನುಷ್ಠಾನ
  • *ಗಾಂಧಿ ಜಯಂತಿ ಪ್ರಯುಕ್ತ ಬೇಟೋಳಿ ರಾಮನಗರದಲ್ಲಿ ಸ್ವಚ್ಛತಾ ಅಭಿಯಾನ*
  • *ಸಂತ ಅನ್ನಮ್ಮ ಪ್ರೌಢಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ*
  • *ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಂದ ಸ್ವಚ್ಛತಾ ಶ್ರಮದಾನ*
  • *ಬಕ್ಕದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ*
  • *ಮಡಿಕೇರಿಯಲ್ಲಿ 72ನೇ ವನ್ಯಜೀವಿ ಸಪ್ತಾಹ : ವನ್ಯಜೀವಿಗಳ ಸಂರಕ್ಷಣೆ ಜಾಗೃತಿಗಾಗಿ ಬೈಸಿಕಲ್, ಬೈಕ್ ಜಾಥಾ*
  • *ಭಾಗ್ಯವತಿ ಸಿ.ಜೆ. ಅವರಿಗೆ ರಾಷ್ಟ್ರಮಟ್ಟದ ‘ಕಾಯಕ ಕಣ್ಣಮಣಿ’ ಪ್ರಶಸ್ತಿ*
  • *ಸ್ವಸ್ಥ ಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಕಾಫಿ ದಿನಾಚರಣೆ*
  • *ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಗಾಂಧಿ ಜಯಂತಿ ಆಚರಣೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ನಾಪೋಕ್ಲು : ವೈವಿಧ್ಯಮಯ ಹಣ್ಣಿನ ಗಿಡಗಳನ್ನು ಬೆಳೆಸುವುದರಿಂದ ಕೃಷಿಕರು ಆರ್ಥಿಕವಾಗಿ ಸಬಲರಾಗಬಹುದು : ಮುರಳೀಧರ್ ಸಲಹೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ನಾಪೋಕ್ಲು : ವೈವಿಧ್ಯಮಯ ಹಣ್ಣಿನ ಗಿಡಗಳನ್ನು ಬೆಳೆಸುವುದರಿಂದ ಕೃಷಿಕರು ಆರ್ಥಿಕವಾಗಿ ಸಬಲರಾಗಬಹುದು : ಮುರಳೀಧರ್ ಸಲಹೆ*

ಡಿಸೆಂಬರ್ 23, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ನಾಪೋಕ್ಲು ಡಿ.23 NEWS DESK : ಕಾಫಿ ಕೃಷಿಯ ನಡುವೆ ವೈವಿಧ್ಯಮಯ ಹಣ್ಣಿನ ಗಿಡಗಳನ್ನು ಬೆಳೆಸುವುದರ ಮೂಲಕ ಕೃಷಿಕರು ಆರ್ಥಿಕವಾಗಿ ಸಬಲರಾಗಬಹುದು ಎಂದು ಚೆಟ್ಟಳ್ಳಿಯ ಹಣ್ಣಿನ ತಳಿಗಳ ವಿಜ್ಞಾನಿ ಮುರಳೀಧರ್ ಹೇಳಿದರು. ಎಲ್.ಡಿ.ಸಿ ಕಂಪನಿ ಕುಶಾಲನಗರ ಮತ್ತು ಜಯ ಕಾಫಿ ನೆಲಜಿ ಸಂಯುಕ್ತ ಆಶ್ರಯದಲ್ಲಿ ನಾಪೋಕ್ಲು ಕೊಡವ ಸಮಾಜದಲ್ಲಿ ನಡೆದ ಕಾಫಿಯಲ್ಲಿ ಉತ್ತಮ ಕೃಷಿ ಪದ್ಧತಿಗಳು ಮತ್ತು ಹಣ್ಣಿನ ಬೆಳೆಗಳ ವೈವಿಧ್ಯಕರಣ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಜಾಗತಿಕವಾಗಿ ಕಾಫಿಗೆ ಅಧಿಕ ಬೇಡಿಕೆ ಇದೆ. ಅದರಲ್ಲೂ ಕೊಡಗಿನ ಕಾಫಿ ಉತ್ಕೃಷ್ಟವಾದದ್ದು, ಕಾಫಿ ತೋಟದ ಒಳಗಡೆ ಹಣ್ಣಿನ ತಳಿಗಳನ್ನು ಬೆಳೆಸುವುದರಿಂದ ಕೃಷಿಕರು ಆರ್ಥಿಕವಾಗಿ ಸಬಲರಾಗಬಹುದು. ಬೆಣ್ಣೆ ಹಣ್ಣು, ರಾಂಬುಟನ್, ಲಿಚ್ಚಿ, ಮ್ಯಾಂಗೋ ಸ್ಟೀನ್, ಕಿತ್ತಳೆ ಮುಂತಾದ ವೈವಿಧ್ಯಮಯ ತಳಿಗಳು ಇಲ್ಲಿನ ಹವಾಮಾನಕ್ಕೆ ಸೂಕ್ತವಾಗಿವೆ. ಉತ್ತಮ ಮಾರುಕಟ್ಟೆಯೂ ಹಣ್ಣಿನ ಬೆಳೆಗಳಿಗೆ ಲಭಿಸುತ್ತಿದೆ. ಹಣ್ಣಿನ ಗಿಡಗಳನ್ನು ಬೆಳೆಸುವುದರ ಮೂಲಕ ಕೃಷಿಕರು ವೈವಿಧ್ಯತೆಯನ್ನು ಕಾಪಾಡಿಕೊಳ್ಳಬಹುದು ಎಂದರು. ಹಣ್ಣಿನ ಗಿಡಗಳ ಬೇಸಾಯ ಹಾಗೂ ಗಿಡಗಳ ಪೋಷಣೆ, ಗಿಡಗಳಿಗೆ ಬಾಧಿಸುವ ರೋಗಗಳ ನಿಯಂತ್ರಣ ಮತ್ತು ಹಣ್ಣಿನ ಗಿಡಗಳ ಬೆಳೆಸಲು ಸಿಗುವ ಸೌಲಭ್ಯಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿ ಬೆಳೆಗಾರರ ಪ್ರಶ್ನೆಗಳಿಗೆ ಉತ್ತರಿಸಿದರು. ಕಾಫಿ ಬೆಳೆಗಾರ ಮುಕ್ಕಾಟಿರ ವಿನಯ್ ಮಾತನಾಡಿ, ಕಾಫಿಗೆ ಇಂದು ಜಾಗತಿಕವಾಗಿ ಉತ್ತಮ ಧಾರಣೆ ಲಭಿಸುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಬೆಳೆಗಾರರು ಕಡಿಮೆ ಇಳುವರಿಯನ್ನು ಪಡೆಯುತ್ತಿದ್ದಾರೆ. ತಾಪಮಾನದ ವೈಪರಿತ್ಯದಿಂದಾಗಿ ಕಾಫಿ ಬೆಳೆಗೆ ತೊಡಕಾಗುತ್ತಿದೆ. ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ. ಉನ್ನತ ಮಟ್ಟದ ಸಂಶೋಧನೆ ಆಗಬೇಕಿದೆ, ಕಾಫಿ ತೋಟಗಳಲ್ಲಿ ತೇವಾಂಶ ಉಳಿಸಿಕೊಳ್ಳುವ ಬಗ್ಗೆ ರೈತರಿಗೆ ಮಾಹಿತಿ ನೀಡಿ ರೈತರು ಸಂಕಷ್ಟದಿಂದ ಹೊರಬರಲು ನೆರವಾಗಬೇಕು ಎಂದರು. ಕುಶಾಲನಗರ ಎಲ್‍ಡಿಸಿ ಕಂಪೆನಿಯ ತ್ರಿಭುವನ್ ಸಾತ್ವಿಕ್ ಮಾತನಾಡಿ, ಉತ್ತಮ ಗುಣಮಟ್ಟದ ಕಾಫಿಯನ್ನು ಬೆಳೆಯುವುದು ಇಂದಿನ ಆದ್ಯತೆ ಆಗಬೇಕು ಕೀಟನಾಶಗಳನ್ನು ಅತಿ ಹೆಚ್ಚಾಗಿ ಬಳಸಬಾರದು, ರೈತರು ಮಣ್ಣಿನ ಪರೀಕ್ಷೆಯನ್ನು ಮಾಡಿ ಅಗತ್ಯವಿರುವ ಗೊಬ್ಬರಗಳ ಪೂರೈಕೆ ಮಾಡಬೇಕು ಎಂದರು. ಜಯ ಕಾಫಿ ನೆಲಜಿ. ಕಾಫಿ ಬೆಳೆಗಾರರೊಂದಿಗೆ ಹಾಗೂ ಕಂಪನಿಯೊಂದಿಗೆ ಉತ್ತಮ ಬಾಂಧವ್ಯ, ವ್ಯವಹಾರ ಹೊಂದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲಜಿ ಗ್ರಾಮದ ಜಯ ಕಾಫಿ ಮಾಲೀಕ ಮಂಡಿರ ಜಯದೇವಯ್ಯ ವಹಿಸಿ ಮಾತನಾಡಿ, ನಮ್ಮೊಂದಿಗೆ ವ್ಯವಹರಿಸುವ ಕಾಫಿ ಬೆಳೆಗಾರರಿಗೆ ಉತ್ತಮ ಬೋನಸ್ ಅನ್ನು ನೀಡಿದ್ದು ಮುಂದೆಯೂ ಎಲ್ಲ ಬೆಳೆಗಾರರು ನಮ್ಮೊಂದಿಗೆ ವ್ಯವಹಾರಿಸುವಂತೆ ಮನವಿ ಮಾಡಿಕೊಂಡರು. ತರಬೇತಿ ಕಾರ್ಯಕ್ರಮದಲ್ಲಿ ಜಯ ಕಾಫಿ ವ್ಯವಸ್ಥಾಪಕ ಮಂಡೀರ ಕಿಶೋರ್ ಮತ್ತು ಕಾಫಿ ಬೆಳೆಗಾರರು ಭಾಗವಹಿಸಿದ್ದರು. ಮಮತ ಬಿದ್ದಪ್ಪ ಕಾರ್ಯಕ್ರಮ ನಿರೂಪಿಸಿದರು. ಯಕ್ಷಿತ್ ಸ್ವಾಗತಿಸಿ ವಂದಿಸಿದರು.

ವರದಿ : ದುಗ್ಗಳ ಸದಾನಂದ. 

Follow us Follow us
Share. WhatsApp Facebook Twitter Email Telegram Copy Link

Related Posts

*ರಾಜ್ಯದ 87 ಗಾಂಧಿ ಹೆಜ್ಜೆಗುರುತಿನ ಸ್ಥಳಗಳಲ್ಲಿ ಸ್ಮಾರಕ ಸ್ತಂಭ ನಿರ್ಮಾಣ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಅನುಷ್ಠಾನ*

ಅಕ್ಟೋಬರ್ 2, 2026

ರಾಜ್ಯದ 87 ಗಾಂಧಿ ಹೆಜ್ಜೆಗುರುತಿನ ಸ್ಥಳಗಳಲ್ಲಿ ಸ್ಮಾರಕ ಸ್ತಂಭ ನಿರ್ಮಾಣ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಅನುಷ್ಠಾನ

ಅಕ್ಟೋಬರ್ 2, 2026

*ಗಾಂಧಿ ಜಯಂತಿ ಪ್ರಯುಕ್ತ ಬೇಟೋಳಿ ರಾಮನಗರದಲ್ಲಿ ಸ್ವಚ್ಛತಾ ಅಭಿಯಾನ*

ಅಕ್ಟೋಬರ್ 2, 2026

ರಾಜ್ಯದ 87 ಗಾಂಧಿ ಹೆಜ್ಜೆಗುರುತಿನ ಸ್ಥಳಗಳಲ್ಲಿ ಸ್ಮಾರಕ ಸ್ತಂಭ ನಿರ್ಮಾಣ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಅನುಷ್ಠಾನ

ಅಕ್ಟೋಬರ್ 2, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ

ಬೆಂಗಳೂರು, ಅ.2 NEWS DESK :: ಮಹಾತ್ಮ ಗಾಂಧೀಜಿಯವರು ಕರ್ನಾಟಕದಲ್ಲಿ ಭೇಟಿ ನೀಡಿದ್ದ ವಿವಿಧ 87 ಐತಿಹಾಸಿಕ ಸ್ಥಳಗಳಲ್ಲಿ ‘ಗಾಂಧಿ…

*ಗಾಂಧಿ ಜಯಂತಿ ಪ್ರಯುಕ್ತ ಬೇಟೋಳಿ ರಾಮನಗರದಲ್ಲಿ ಸ್ವಚ್ಛತಾ ಅಭಿಯಾನ*

ಅಕ್ಟೋಬರ್ 2, 2026

*ಸಂತ ಅನ್ನಮ್ಮ ಪ್ರೌಢಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ*

ಅಕ್ಟೋಬರ್ 2, 2026

*ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಂದ ಸ್ವಚ್ಛತಾ ಶ್ರಮದಾನ*

ಅಕ್ಟೋಬರ್ 2, 2026

*ಬಕ್ಕದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ*

ಅಕ್ಟೋಬರ್ 2, 2026

*ಮಡಿಕೇರಿಯಲ್ಲಿ 72ನೇ ವನ್ಯಜೀವಿ ಸಪ್ತಾಹ : ವನ್ಯಜೀವಿಗಳ ಸಂರಕ್ಷಣೆ ಜಾಗೃತಿಗಾಗಿ ಬೈಸಿಕಲ್, ಬೈಕ್ ಜಾಥಾ*

ಅಕ್ಟೋಬರ್ 2, 2026

*ಭಾಗ್ಯವತಿ ಸಿ.ಜೆ. ಅವರಿಗೆ ರಾಷ್ಟ್ರಮಟ್ಟದ ‘ಕಾಯಕ ಕಣ್ಣಮಣಿ’ ಪ್ರಶಸ್ತಿ*

ಅಕ್ಟೋಬರ್ 2, 2026

*ಸ್ವಸ್ಥ ಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಕಾಫಿ ದಿನಾಚರಣೆ*

ಅಕ್ಟೋಬರ್ 2, 2026

*ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಗಾಂಧಿ ಜಯಂತಿ ಆಚರಣೆ*

ಅಕ್ಟೋಬರ್ 2, 2026

*ಗೋಣಿಕೊಪ್ಪದಲ್ಲಿ ಗಾಂಧೀಜಿ, ಶಾಸ್ತ್ರಿ ಜಯಂತಿ ಆಚರಣೆ*

ಅಕ್ಟೋಬರ್ 2, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.