
ಸುಂಟಿಕೊಪ್ಪ ಡಿ.26 NEWS DESK : ಸುಂಟಿಕೊಪ್ಪ ಶ್ರೀಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಮಂಡಲ ಪೂಜೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಗಣಪತಿ ಹೋಮ, ಕನ್ನಿಮೂಲ ಗಣಪತಿಗೆ ಎಳನೀರು ಅಭಿಷೇಕ, ಚಂಡೆಮೇಳ, ಶ್ರೀ ಅಯ್ಯಪ್ಪ ಸ್ವಾಮಿಗೆ ಪಂಚಾಮೃತ ಅಭಿಷೇಕ, ಲಕ್ಷಾರ್ಚನೆ, ಪಲ್ಲಪೂಜೆ, ಬಿಲ್ವಪತ್ರೆ ಅರ್ಚನೆ, ತುಳಸಿಅರ್ಚನೆ, ಪಂಚಾಮೃತ ಅಭಿಷೇಕ, ದೂರ್ವಾರ್ಚನೆ ನೆರವೇರಿತು. ನಂತರ ಭಕ್ತಾಧಿಗಳಿಗೆ ಅನ್ನಸಂಪರ್ತಣೆ ನೆರವೇರಿತು. ನೂರಾರು ಸಂಖ್ಯೆಯಲ್ಲಿ ಅಯ್ಯಪ್ಪಸ್ವಾಮಿ ವೃತ್ತಧಾರಿಗಳು ಹಾಗೂ ಭಕ್ತಾಧಿಗಳು ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಅರ್ಚಕರಾದ ಗಣೇಶ ಉಪಾಧ್ಯಾಯ ಅವರ ನೇತೃತ್ವದಲ್ಲಿ ಮಂಜುನಾಥ ಭಟ್, ರಾಘವೇಂದ್ರ ಭಟ್, ಮಹಾಭಲೇಶ್ವರ ಭಟ್, ಮನೋಜ್ ಭಟ್, ಎಲ್ಲಾ ವಿಶೇಷ ಪೂಜಾ ಕೈಂಕರ್ಯಗಳನ್ನು ನೇರವೇರಿಸಿದರು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಬಿ.ಎಂ.ಸುರೇಶ್ ಪುಟ್ಟ, ಉಪಾಧ್ಯಕ್ಷರುಗಳಾದ ಎಂ.ಮಂಜುನಾಥ್, ಬಿ.ಎ.ಪುನೀತ್, ಬಿ.ಕೆ.ಪ್ರಶಾಂತ್ ಕುಮಾರ್, ಬಿ.ಎಲ್.ಆನಂದ, ಪ್ರಧಾನ ಕಾರ್ಯದರ್ಶಿ ಎಂ.ಚಂದ್ರ, ಸಹ ಕಾರ್ಯದರ್ಶಿ ವಿ.ಕೆ.ರಾಜು, ಕೆ.ಕನಿಸ್, ಮಣಿಕಂಠ, ಖಜಾಂಚಿ ಎಂ.ಆರ್.ಶಶಿಕುಮಾರ್, ಸಂಘಟನಾ ಕಾರ್ಯದರ್ಶಿಗಳಾದ ಪಿ.ಆರ್.ಬಿಜುಕುಮಾರ್, ಪೃಥ್ವಿರಾಜ್, ಡಿ.ಕೆ.ರಾಕೇಶ್, ಶೇಖರ್(ಅಣ್ಣು), ಎಂ.ಉದಯ, ಕೆ.ರವಿ, ಬಿ.ಪಿ.ಸಜಿತ್, ಕೆ.ಕೆ.ವಾಸು, ಸಿ.ಸಿ.ಸುನಿಲ್, ಗೌರವಧ್ಯಕ್ಷರುಗಳಾದ ಕೆ.ಎ.ಬಾಲಕೃಷ್ಣ (ಗುರುಸ್ವಾಮಿ), ಮುತ್ತಯ್ಯ, ಸುರೇಶ್ ಗೋಪಿ, ಧನುಕಾವೇರಪ್ಪ, ಸಲಹಾ ಸಮಿತಿ ಸದಸ್ಯರುಗಳಾದ ವಿ.ಎ.ಸಂತೋಷ್, ದಿನು ದೇವಯ್ಯ, ಪಿ.ಲೋಕೇಶ್, ಕೆ.ಪಿ.ವಿನೋದ್, ಎ.ಶ್ರೀಧರ್, ಅನೂಪ್ ಕುಮಾರ್, ಎ.ಶ್ರೀಧರನ್, ಶಿವಮಣಿ, ಸಿ.ಬಿ.ಚಂದ್ರಶೇಖರ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಎಂ.ಸುಬ್ರಮಣಿ,ಕೆ.ರವಿ,ಉಮೇಶ್, ಬಿ.ಆರ್.ಸತೀಶ್,ಬಸವರಾಜ್,ದೊರೆ, ಆರ್ ವಿಜಯ, ಚಂದ್ರ, ಬಿ.ಕೆ.ದಿನೇಶ್, ಆರ್.ಪ್ರಶಾಂತ್, ಶಬರಿಮಲೈ ಆಡಳಿತ ಮಂಡಳಿಯವರಾದ ಗೋಕುಲ್‍ಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು. ಮಂಡಲ ಪೂಜೋತ್ಸವ ದ ಅಂಗವಾಗಿ ದೇವಾಲಯವನ್ನು ತಳಿರು ತೋರಣ, ವಿವಿಧ ಬಗೆಯ ಬಣ್ಣ ಬಣ್ಣದ ಹೂಗಳಿಂದ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.









