Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಬೈಲುಕುಪ್ಪೆ : ವಿಶ್ವದ ಅತಿ ದೊಡ್ಡ ಚಿತ್ರಪರದೆ ಖ್ಯಾತಿಯ ಗುರು ಪದ್ಮ ಸಂಭವ ಅನಾವರಣ
ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ

ಬೈಲುಕುಪ್ಪೆ : ವಿಶ್ವದ ಅತಿ ದೊಡ್ಡ ಚಿತ್ರಪರದೆ ಖ್ಯಾತಿಯ ಗುರು ಪದ್ಮ ಸಂಭವ ಅನಾವರಣ

ಮಾರ್ಚ್ 9, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಕುಶಾಲನಗರ NEWS DESK ಮಾ.9 : ಕುಶಾಲನಗರ ಸಮೀಪದ ಬೈಲುಕುಪ್ಪೆ ಟಿಬೆಟಿಯನ್ ನಿರಾಶ್ರಿತ ಶಿಬಿರದ ಗೋಲ್ಡನ್ ಟೆಂಪಲ್ ಆವರಣದಲ್ಲಿ ವಿಶ್ವದ ಅತಿ ದೊಡ್ಡ ಚಿತ್ರಪರದೆ ಎಂದು ಖ್ಯಾತಿ ಹೊಂದಿರುವ ಗುರು ಪದ್ಮ ಸಂಭವ ಚಿತ್ರಪಟವನ್ನು ಭಾನುವಾರ ಬೆಳಗ್ಗೆ ಅನಾವರಣಗೊಳಿಸಲಾಯಿತು. ಟಿಬೆಟಿಯನ್ ನೂತನ ವರ್ಷ ಲೋಸಾರ್ ಅಂಗವಾಗಿ ವಾರ್ಷಿಕವಾಗಿ ಎರಡು ಚಿತ್ರಪಟಗಳನ್ನು ಅನಾವರಣ ಗೊಳಿಸುವ ಕಾರ್ಯಕ್ರಮ ನಡೆಯುತ್ತಿದೆ, ಗುರು ಪದ್ಮ ಸಂಭವ ಚಿತ್ರಪಟ ಕೇವಲ ಅರ್ಧ ಗಂಟೆಗಳ ಕಾಲ ಪ್ರದರ್ಶನ ಮಾಡಿ ಸಾಮೂಹಿಕವಾಗಿ ಪೂಜೆ ಸಲ್ಲಿಸಲಾಯಿತು. ಕೊಪ್ಪ ಸಮೀಪದ ಟಿಬೆಟಿಯನ್ ಶಿಬಿರದ ಗೋಲ್ಡನ್ ಟೆಂಪಲ್ ಆವರಣದಲ್ಲಿ ಏಳು ಅಂತಸ್ತಿನ ಕಟ್ಟಡದ ಮೇಲೆ ಬೃಹತ್ ಕಬ್ಬಿಣದ ಗೋಪುರ ಅಳವಡಿಸಲಾಗಿದ್ದು ಇದರಲ್ಲಿ 200 ಅಡಿ ಎತ್ತರ 180 ಅಡಿಗಳಷ್ಟು ಅಗಲವಿರುವ ಚಿತ್ರಪಟವನ್ನು ಮುಂಜಾನೆ 7.30 ರಿಂದ ಅರ್ಧ ಗಂಟೆ ಕಾಲ ಪ್ರದರ್ಶಿಸಿ ಟಿಬೆಟಿಯನ್ ಧರ್ಮ ಗುರುಗಳು ವಿಶೇಷ ಪೂಜೆ ಸಲ್ಲಿಸಿದರು. ಕಳೆದ 25 ವರ್ಷಗಳಿಂದ ಟಿಬೆಟ್ ನೂತನ ವರ್ಷದ ಸಂಭ್ರಮಾಚರಣೆ ಅವಧಿಯ ನಡುವೆ ಈ ರೀತಿ ಚಿತ್ರಪಟಗಳನ್ನು ಅನಾವರಣಗೊಳಿಸಿ ಪೂಜೆ ಸಲ್ಲಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ.
ಈ ಸಂದರ್ಭ ಬೈಲುಕುಪ್ಪೆಯ ಶಿಬಿರ ಸೇರಿದಂತೆ ದೇಶ ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಿತ್ರಪಟವನ್ನು ವೀಕ್ಷಿಸಿ ಭಕ್ತಿಯಿಂದ ಪೂಜೆ ಸಲ್ಲಿಸಿದರು. ಸುಮಾರು 180 ಅಡಿ ಉದ್ದವಿರುವ ಈ ಚಿತ್ರಪಟವನ್ನು ನೂರಕ್ಕೂ ಅಧಿಕ ಬೌದ್ಧ ಭಿಕ್ಷುಗಳು ಗೋಲ್ಡನ್ ಟೆಂಪಲ್ ಕಟ್ಟಡದ ಬಳಿಯಿಂದ ಸಾಂಪ್ರದಾಯಿಕ ವಾಲಗದೊಂದಿಗೆ ಹೊತ್ತು ತಂದು ಕೇವಲ ಅರ್ಧ ಗಂಟೆಗಳ ಕಾಲದಲ್ಲಿ ಅದನ್ನು ಪ್ರದರ್ಶನ ಮಾಡಿ ಮತ್ತೆ ಮಂದಿರದ ಆವರಣಕ್ಕೆ ತಂದು ಇರಿಸಿದರು.
ಇದಕ್ಕೂ ಮುನ್ನ ಬೋಧ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಬೌದ್ಧ ಭಿಕ್ಷುಗಳು ವಿಶ್ವಶಾಂತಿ ಗಾಗಿ ಸಾಮೂಹಿಕ ಪೂಜೆ ಸಲ್ಲಿಸಿದರು. ವಿಶೇಷ ಕಾರ್ಯಕ್ರಮದಲ್ಲಿ ಬೌದ್ಧ ಬಿಕ್ಷುಗಳು ಟಿಬೆಟಿಯನ್ ನಾಗರಿಕರು ಸೇರಿದಂತೆ ಸುಮಾರು 5000ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಕುಶಾಲನಗರ ಸಮೀಪದ ಕೊಪ್ಪ ಬಳಿ ಇರುವ ಗೋಲ್ಡನ್ ಟೆಂಪಲ್ ಕಟ್ಟಡದಲ್ಲಿ ಕಳೆದ 25 ವರ್ಷಗಳಿಂದ ಈ ಚಿತ್ರಪಟವನ್ನು ಸಂರಕ್ಷಣೆ ಮಾಡಲಾಗಿದ್ದು ಇದೇ ರೀತಿ ಈ ತಿಂಗಳ 14ರಂದು ಇದೇ ರೀತಿಯ ಮತ್ತೊಂದು ಬೃಹತ್ ಬುದ್ಧ ಅಮಿತಾಯುಶ್ ಚಿತ್ರಪಟವನ್ನು ಅನಾವರಣಗೊಳಿಸಲಿದ್ದಾರೆ.

Follow us Follow us
Share. WhatsApp Facebook Twitter Email Telegram Copy Link

Related Posts

ಅ.17 ರಂದು ಕೊಡಗು ಜಿಲ್ಲೆಯಲ್ಲಿ ಕಾವೇರಿ ತುಲಾ ಸಂಕ್ರಮಣದ ರಜೆ

ಅಕ್ಟೋಬರ್ 16, 2026

ಅ.17ಕ್ಕೆ ಕೊಡಗು ಜಿಲ್ಲೆಯಲ್ಲಿ ತುಲಾ ಸಂಕ್ರಮಣದ ರಜೆ

ಅಕ್ಟೋಬರ್ 16, 2026

ಕಡಗದಾಳಿನಲ್ಲಿ ಎನ್‌ಎಸ್‌ಎಸ್ ಶಿಬಿರದ ಸಮಾರೋಪ : ಸಮಾಜದ ಅಭಿವೃದ್ಧಿಗೆ ವಿದ್ಯಾರ್ಥಿಗಳು ಕೊಡುಗೆ ನೀಡಲಿ : ಮೇಜರ್ ಪ್ರೊ. ರಾಘವ ಬಿ.

ಅಕ್ಟೋಬರ್ 15, 2026

ಅ.17ಕ್ಕೆ ಕೊಡಗು ಜಿಲ್ಲೆಯಲ್ಲಿ ತುಲಾ ಸಂಕ್ರಮಣದ ರಜೆ

ಅಕ್ಟೋಬರ್ 16, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ

ಮಡಿಕೇರಿ NEWS DESK ಅ.16: ಕೊಡಗು ಜಿಲ್ಲೆಯಲ್ಲಿ ಕಾವೇರಿ ತುಲಾ ಸಂಕ್ರಮಣದ ಪ್ರಯುಕ್ತ ಅಕ್ಟೋಬರ್ 18ರ ಭಾನುವಾರದಂದು ಘೋಷಿಸಲಾಗಿದ್ದ ಸ್ಥಳೀಯ…

ಕಡಗದಾಳಿನಲ್ಲಿ ಎನ್‌ಎಸ್‌ಎಸ್ ಶಿಬಿರದ ಸಮಾರೋಪ : ಸಮಾಜದ ಅಭಿವೃದ್ಧಿಗೆ ವಿದ್ಯಾರ್ಥಿಗಳು ಕೊಡುಗೆ ನೀಡಲಿ : ಮೇಜರ್ ಪ್ರೊ. ರಾಘವ ಬಿ.

ಅಕ್ಟೋಬರ್ 15, 2026

ಅ.17 ರಂದು ಉಸ್ತುವಾರಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಕೊಡಗಿಗೆ ಭೇಟಿ

ಅಕ್ಟೋಬರ್ 15, 2026

ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5860 ಪ್ರಕರಣಗಳು ಇತ್ಯರ್ಥ

ಅಕ್ಟೋಬರ್ 15, 2026

ಅ.16 ರಂದು ಮಕ್ಕಳ ದಸರಾ ಸಂಭ್ರಮ: ಮಕ್ಕಳಿಂದ ವೈವಿದ್ಯಮಯ ಸ್ಪರ್ಧೆಗಳು

ಅಕ್ಟೋಬರ್ 15, 2026

ಗೋಣಿಕೊಪ್ಪಲು : ಅ.16 ರಂದು ವಿದ್ಯುತ್ ವ್ಯತ್ಯಯ

ಅಕ್ಟೋಬರ್ 15, 2026

ಮಡಿಕೇರಿ ನಗರ ದಸರಾ ಬಹುಭಾಷಾ ಕವಿಗೋಷ್ಠಿ : ಭಾವನೆ ಕಟ್ಟಿಕೊಡುವಲ್ಲಿ ಕಥೆ, ಕವನ, ಕವಿತೆ ಸಹಕಾರಿ : ಡಾ.ಎನ್.ಕೆ.ಲೋಲಾಕ್ಷಿ

ಅಕ್ಟೋಬರ್ 15, 2026

ಕುಶಾಲನಗರದಲ್ಲಿ ಮಾಜಿ ಸೈನಿಕರ 84ನೇ ಇಎಂಇ ಕಾರ್ಪ್ಸ್ ದಿನಾಚರಣೆ ಸಂಭ್ರಮ

ಅಕ್ಟೋಬರ್ 15, 2026

ಕೊಡವಲ್ಯಾಂಡ್ ಸ್ವಾಯತ್ತತೆಗಾಗಿ 100 ವರ್ಷಗಳಾದರೂ ಹೋರಾಟ ನಿಲ್ಲದು: ಎನ್.ಯು. ನಾಚಪ್ಪ

ಅಕ್ಟೋಬರ್ 15, 2026

ಗೋಣಿಕೊಪ್ಪಲು ದಸರಾ ಜನೋತ್ಸವದಲ್ಲಿ ಅ.16ರಂದು ರಾಜ್ಯಮಟ್ಟದ ಬಹುಭಾಷಾ ಕವಿಗೋಷ್ಠಿ; 118 ಕವಿಗಳಿಂದ ಕವನ ವಾಚನ; ಜೆನ್ ಜಿ ಹಾಗೂ ಮಕ್ಕಳ ಕವಿಗೋಷ್ಠಿ ವಿಶೇಷ ಆಕರ್ಷಣೆ

ಅಕ್ಟೋಬರ್ 15, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.