
ಮಡಿಕೇರಿ ಏ.25 NEWS DESK : ಎಸ್‌ಎನ್‌ಆರ್ ಗ್ರಾಮೀಣ ಶಿಕ್ಷಣ ಟ್ರಸ್ಟ್ ಪುತ್ತೂರಿನ ಸವಣೂರು ವಿದ್ಯಾರಶ್ಮಿ ವಿದ್ಯಾಲಯ ಸಂಸ್ಥೆಯಲ್ಲಿ 2025-26ನೇ ಸಾಲಿನ ಪ್ರವೇಶಾತಿ ಪ್ರಾರಂಭಗೊಂಡಿದೆ. ಈ ಶಿಕ್ಷಣ ಸಂಸ್ಥೆಯು ಶಾಂತ, ಮಾಲಿನ್ಯ ಮುಕ್ತ, ಹಸಿರು ಮತ್ತು ವಿಶಾಲವಾದ ಕ್ಯಾಂಪಸ್‌ನಲ್ಲಿ ಎಲ್ಲಾ ರೀತಿಯ ಆಧುನಿಕ ಶೈಕ್ಷಣಿಕ ಸೌಲಭ್ಯಗಳನ್ನು ಹೊಂದಿದೆ ಎಂದು ವಿದ್ಯಾಸಂಸ್ಥೆಯ ಸಂಚಾಲಕರಾಗಿರುವ ಸಹಕಾರ ರತ್ನ ಸವಣೂರು ಸೀತಾರಾಮ ರೈ ಕಲ್ಕರ್ ಹಾಗೂ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಪಠ್ಯಕ್ರಮದ ಇಂಗ್ಲಿಷ್ ಮಾಧ್ಯಮ ಶಿಕ್ಷಣವನ್ನು ಕಿಂಡರ್‌ಗಾರ್ಟನ್ ಪ್ರಿ ಕೆಜಿ, ಎಲ್‌ಕೆಜಿ ಮತ್ತು ಯುಕೆಜಿ ಹೊಂದಿದ್ದು, ಶಾಲಾ ಶಿಕ್ಷಣ 1 ರಿಂದ 10 ನೇ ತರಗತಿಗಳು, ಪಿಯುಸಿ ವಿಭಾಗದಲ್ಲಿವಿಜ್ಞಾನ (ಪಿಸಿಎಂಬಿ/ಪಿಸಿಎಂಸಿಎಸ್) ಮತ್ತು ವಾಣಿಜ್ಯ (ಇಬಿಎಎಸ್ / ಇಬಿಎಸಿ) ಕೋರ್ಸುಗಳು ಲಭ್ಯವಿದ್ದು, -(ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಸಿ.ಎ., ಬಿ.ಕಾಂ. ಮತ್ತು ಬಿ.ಎ. ಕೋರ್ಸ್ ಗಳನ್ನು ಸಹ ನಾವು ಹೊಂದಿದ್ದೇವೆ) ಸಂಸ್ಥೆಯ ಯಶಸ್ಸಿಗೆ ಸಂಸ್ಥೆಯು ಹೊಂದಿರುವ ಶಿಕ್ಷಣ ವ್ಯವಸ್ಥೆಯೇ ಪ್ರಮುಖ ಕಾರಣ. .35 ಶೇಕಡಾ ಅಂಕ ಪಡೆದುಕೊಂಡ ವಿದ್ಯಾರ್ಥಿಗಳನ್ನು ನಮ್ಮ ಸಂಸ್ಥೆಯಲ್ಲಿ ದಾಖಲಾತಿ ಮಾಡಿಕೊಂಡು ,ಆ ವಿದ್ಯಾರ್ಥಿಗಳು 10ನೇ ತರಗತಿಯಲ್ಲಿ ಅಥವಾ ದ್ವಿತೀಯ ಪಿಯುಸಿ ವಿಭಾಗದಲ್ಲಿ ಅತ್ಯಧಿಕ ಅಂಕ ಪಡೆದು ಉತ್ತೀರ್ಣರಾಗುತ್ತಾರೆ. ನವಂಬರ್ ತಿಂಗಳಲ್ಲಿ ಎಲ್ಲಾ ಪಾಠಗಳನ್ನು ಮುಗಿಸಿ ವಿದ್ಯಾರ್ಥಿಗಳನ್ನು ಗುಂಪುಗಳನ್ನಾಗಿ ಮಾಡಿ ಪರೀಕ್ಷೆಗಿಂತ ಮುಂಚೆ ಹಲವು ಬಾರಿ ರಿವಿಷನ್ ಮಾಡಿಸಿ, ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯುವಂತೆ ನಮ್ಮ ಶಿಕ್ಷಕರು, ಉಪನ್ಯಾಸಕರು ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕೆಯ ಪ್ರಗತಿಯ ಕಡೆಗೆ ವೈಯುಕ್ತಿಕ ಕಾಳಜಿ ವಹಿಸುತ್ತಾರೆ. ಭವಿಷ್ಯದಲ್ಲಿ ನಿರ್ಭೀತಿಯಿಂದ ಬದುಕಲು ಜೀವನ ಪಾಠವನ್ನು ಈ ಸಂಸ್ಥೆಯು ಕಲ್ಪಿಸಿ ಕೊಡುತ್ತದೆ. ಹೀಗೆ ಸಾವಿರಾರು ಪ್ರತಿಭಾವಂತರನ್ನು ಸಮಾಜಕ್ಕೆ ಸಮರ್ಪಿಸಿದ ಹೆಗ್ಗಳಿಕೆ ಈ ಸಂಸ್ಥೆಯದು. ವಿದ್ಯಾರ್ಥಿಗಳ ಶೈಕ್ಷಣಿಕ, ಭಾವನಾತ್ಮಕ ಯೋಗಕ್ಷೇಮವನ್ನು ನೋಡಿಕೊಳ್ಳಲು ನಮ್ಮ ಸಂಸ್ಥೆಯಲ್ಲಿ ಕೌನ್ಸಿಲರ್ ವ್ಯವಸ್ಥೆಯು ಇದೆ. ನಮ್ಮಲ್ಲಿರುವ ಕೌಶಲ್ಯಗಳು : ಡ್ರೋನ್ ನಿರ್ಮಾಣ ತರಬೇತಿ,ವಿದ್ಯಾ ಸಂಸ್ಥೆಯಲ್ಲಿ ಅಟಲ್ ಟಿಂಕರಿಂಗ್ ಪ್ರಯೋಗಾಲಯ, ಒಲಿಂಪಿಯಾಡ್ಸ್ ಪರೀಕ್ಷೆ, ಪಾಶ್ಚಾತ್ಯ ನೃತ್ಯ, ಭಜನೆ, ಕರಾಟೆ, ಸಂಗೀತ, ಸಂಸ್ಕೃತ, ಡ್ರಾಯಿಂಗ್, ವೈಟ್ ಲಿಫ್ಟಿಂಗ್, ಜಿಮ್, ಲಗೋರಿ ಗೇಮ್, ಸ್ಮಾರ್ಟ್ ಬೋರ್ಡ್, ಇನ್ ಸ್ಪೈರ್ ಪ್ರಶಸ್ತಿಗಾಗಿ ಪರಿಣಾಮಕಾರಿ ಮಾರ್ಗದರ್ಶನ, ಸಿ.ಸಿ. ಕ್ಯಾಮೆರಾ, ಕ್ಯಾಂಟೀನ್ ಮತ್ತು ಹೀಗೆ ಹಲವು ಸೌಭಲಭ್ಯಗಳನ್ನು ಒಳಗೊಂಡಿದೆ. ಕೌಶಲ್ಯಗಳು :: ಇಲ್ಲಿ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಸಾರ್ವಜನಿಕ ಭಾಷಣ, ಸ್ಪಷ್ಟ ಮತ್ತು ಆಕರ್ಷಕ ಕೈಬರಹ ಇತ್ಯಾದಿಗಳಲ್ಲಿ ತರಬೇತಿ. ಅಗತ್ಯ ವ್ಯವಸ್ಥೆ :: ಕಾಲೇಜಿನಿಂದ 30 ಕಿ.ಮೀ ವ್ಯಾಪ್ತಿಯಲ್ಲಿ ಶಾಲಾ ಬಸ್ಸುಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ 8197240475, 9686364475, 8105853806 ಸಂಪರ್ಕಿಸಬಹುದಾಗಿದೆ.










