
ಮಡಿಕೇರಿ NEWS DESK ಏ.26 : ಮಡಿಕೇರಿ ತಾಲ್ಲೂಕು ಬಿಳಿಗೇರಿ ಗ್ರಾಮದ ಶ್ರೀ ಅರ್ಧನಾರೀಶ್ವರ ದೇವಾಲಯದ ವಾರ್ಷಿಕೋತ್ಸವವು ಏ.27ರಿಂದ ಮೇ1ರ ವರೆಗೆ ನಡೆಯಲಿದೆ. ಉತ್ಸವದ ಅಂಗವಾಗಿ ಏ.27ರ ಆದಿತ್ಯವಾರ ಬೆಳಿಗ್ಗೆ 6.30ಗಂಟೆಗೆ ಬೊಟ್ಲಪ್ಪ ದೇವಾಲಯದಿಂದ ತೀರ್ಥ ತರುವುದು, ಗಣಪತಿ ಹೋಮ, ದೇವರಿಗೆ ಅಭಿಷೆೆÃಕ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6ಗಂಟೆಗೆ ದೇವರ ಭಂಡಾರ ತರುವುದು, ದೇವರು ಬಲಿಬರುವುದು, ಬೆಳಕು, ಅನ್ನಸಂತರ್ಪಣೆ ನಡೆಯಲಿದೆ. ಏ.28ರ ಸೋಮವಾರ ಬೆಳಿಗ್ಗೆ 5 ಗಂಟೆಗೆ ದೇವರು ನೃತ್ಯ ಬಲಿ ಬರುವುದು, 10 ಗಂಟೆಗೆ ಹಬ್ಬದ ಕಟ್ಟು ಮುರಿಯುವುದು, ಮಹಾಪೂಜೆ, ದೇವರ ನೆರಪು ಬಲಿ ಬರುವುದು, ವಸಂತಪೂಜೆ, ದೇವರ ಶಯನ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4 ಗಂಟೆಗೆ ದೇವರ ಜಳಕ ಕಾರ್ಯ ನಡೆಯಲಿದೆ. ಬಳಿಕ ದೇವರ ನೃತ್ಯ ಬಲಿ ನಡೆಯಲಿದ್ದು, ನಂತರ ಅನ್ನಸಂತರ್ಪಣೆಯಾಗಲಿದೆ. ಏ.29ರ ಮಂಗಳವಾರ ಬೆಳಗ್ಗೆ 10ಗಂಟೆಗೆ ಶುದ್ಧ ಕಲಶ, ಮಹಾಪೂಜೆ, ಅನ್ನಸಂತರ್ಪಣೆ. ಏ.30ರÀ ಬುಧವಾರ ಸಂಜೆ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ತೋತಬರುವುದು, ಮೇಲೇರಿಗೆ ಅಗ್ನಿ ಸ್ಪರ್ಶ ನಡೆಯಲಿದೆ.
ಮೇ 1ರಂದು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬೆ.10 ಗಂಟೆಯಿAದ ಮೇಲೇರಿ ಹಾಗೂ ಅಜ್ಜಪ್ಪ ದೈವದ ಕೋಲ, ಮಧ್ಯಾಹ್ನ 2.30 ಗಂಟೆಗೆ ದೇವರಿಗೆ ಬೇಟೆಯ ಸಾಂಪ್ರದಾಯಿಕ ಆಚರಣೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.








