

ಮಡಿಕೇರಿ ಏ.28 NEWS DESK : ಕೊಡಗು ಹೆಗ್ಗಡೆ ಸಮಾಜದ ಕ್ರೀಡೋತ್ಸವವು ಮೇ 1 ರಿಂದ 3 ರವರಗೆ ನಡೆಯಲಿದೆ. ಮೂರ್ನಾಡಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣ ನಡೆಯಲಿರುವ ಕ್ರೀಡೋತ್ಸವವದಲ್ಲಿ ಕ್ರಿಕೆಟ್, ಪುರಷರು ಮತ್ತು ಮಹಿಳಾ ವಿಭಾಗಕ್ಕೆ ಪ್ರತ್ಯೇಕ ಹಗ್ಗ ಜಗ್ಗಟ, ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾವಳಿ ನಡೆಯಲಿದೆ. ಕ್ರೀಡೋತ್ಸವಕ್ಕೆ ಮೇ 1 ರಂದು ಪೂರ್ವಹ್ನ 10.30 ಗಂಟೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ ನೀಡಿಲಿದ್ದು, ಮುಖ್ಯ ಅಥಿತಿಗಳಾಗಿ ವಿಶ್ರಾಂತ ಕುಲಪತಿ ಡಾ.ಪಡಿಞರಂಡ ಚಂಗಪ್ಪ ಪಾಲ್ಗೊಳ್ಳಲಿದ್ದಾರೆ. ಅಧ್ಯಕ್ಷತೆಯನ್ನು ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷರಾದ ಕೊರಕುಟ್ಟೀರ ಸರಾ ಚಂಗಪ್ಪ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ಮುಖ್ಯಮಂತ್ರಿಗಳ ಪದಕ ಪಡೆದ ಇಬ್ಬರು ಪೊಲೀಸ್ ಸಬ್ ಇನ್ಸಿಪೆಕ್ಟರ್ ತುದಿಮಾಡ ಸವಿ ಲೋಕೇಶ್ ಮತ್ತು ಚಂಗಚಂಡ ನಿತಿನ್ ಮಾಚಯ್ಯ ಹಾಗು ಅಗ್ನಿ ಶಾಮಾಕದಳದಲ್ಲಿ ವಿಪ್ಪತ್ತು ನಿರ್ವಾಹಣಾ ಸೇವೆಯಲ್ಲಿನ ಅಪ್ರತಿಮ ಶೌರ್ಯಕ್ಕೆ ಮುಖ್ಯಮಂತ್ರಿಗಳ ಪದಕ ಪಡೆದ ಮಚ್ಚಂಡ ನಂಜಪ್ಪ ಅವರನ್ನು ಸನ್ಮಾನಿಸಿ, ಗೌರವಿಸಲಾಗವುದು. ಕ್ರೀಡೋತ್ಸವದ ಫೖನಲ್ ಪಂದ್ಯಗಳು ಮೇ 3 ರಂದು ಅಪರಾಹ್ನ 2.30 ಕ್ಕೆ ನಡೆಯಲಿದೆ. ನಂತರ ನಡೆಯುವ ಸಮಾರೋಪ ಸಮಾರಂಭದಲ್ಲಿ ಕರಾಟೆಪಟು, ವಿಧಾನ ಪರಿಷತ್ ಮಾಜಿ ಸದಸ್ಯ ಚೆಪ್ಪುಡೀರ ಅರುಣ್ ಮಾಚಯ್ಯ, ಕೊಡಗು ಹೆಗ್ಗಡೆ ಸಮಾಜದ ಮಾಜಿ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ, ಕ್ರಿಕೆಟ್ ವಿಜೇತ ತಂಡಕ್ಕೆ ಟ್ರೋಫಿ ಪ್ರಯೋಜಕರಾದ ಕೊಪ್ಪಡ ಪಟ್ಟು ಪಳಂಗಪ್ಪ, ಕೊಡಗು ಹೆಗ್ಗಡೆ ಸಮಾಜದ ಕಾರ್ಯದರ್ಶಿ ಪಡಿಞರಂಡ ಪ್ರಭುಕುಮಾರ್ ಉಪಸ್ಥಿತರಿರಲಿದ್ದು, ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷ ಕೊರಕುಟ್ಟೀರ ಸರ ಚಂಗಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕ್ರೀಡಾಕೂಟ ತಾಂತ್ರಿಕ ಮುಖ್ಯಸ್ಥ ಪಂದಿಕಂಡ ನಾಗೇಶ್, ಸಮಾಜದ ಉಪಾದ್ಯಕ್ಷ ಚರ್ಮಂಡ ಪೂವಯ್ಯ, ಕೊಂಗೆಪ್ಪಂಡ ಕುಟ್ಟಪ್ಪ, ಪಂದಿಕಂಡ ಸುನಂದ, ತೊರೇರ ಉಮೇಶ್, ಚಂಗಚಂಡ ಶಮಿ, ಪಡಿಞರಂಡ ರಾಖೇಶ್, ಕೊಂಗೆಪಂಡ ಅರುಣ್, ಪಡಿಞರಂಡ ಗಿರೀಶ್, ಕಾಕೇರ ರವಿ ಕ್ರೀಡಾ ಸಮಿತಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಶೖಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳ ಆಯ್ಕೆ ಸಮಿತಿಯಲ್ಲಿ ಪಾನಿಕುಟ್ಟಿರ ರಾಧ ಕುಟ್ಟಪ್ಪ ಮತ್ತು ತೊರೇರ ರಾಜ ಪೂವಯ್ಯ ಕಾರ್ಯ ನಿರ್ವಹಿಸಲಿದ್ದಾರೆ. ಸಮಾಜದ ಗೌರವ ಕೋಶಾಧಿಕಾರಿ ಕೊರಂಡ ಪ್ರಕಾಶ್ ನಾಣಯ್ಯ, ನಿರ್ದೆಶಕರುಗಳಾದ ತೊರೇರ ಮುದ್ದಯ್ಯ, ತಂಬಂಡ ಮಂಜುನಾಥ್, ಪಂದಿಕಂಡ ದಿನೇಶ್, ಕೊಕ್ಕೇರ ಜಗನಾಥ್, ಚಳಿಯಂಡ ಕಮಲಾ ಉತ್ತಯ್ಯ, ಮೂರೀರ ಶಾಂತಿ ಬೆಳ್ಳಿಯಪ್ಪ, ಪೊಟ್ಟಂಡ ವಸಂತಿ ಗಣೇಶ್, ಕೊಂಗೆಪ್ಪಂಡ ರವಿ, ಮಳ್ಳಾಡ ಸುಥಾ,ಮೂರೀರ ಕುಶಾಲಪ್ಪ ಮತ್ತಿತರನ್ನು ಒಳಗೊಂಡಂತೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ.









