
ಮಡಿಕೇರಿ ಮೇ 1 NEWS DESK : ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿಯ ಯೋಜನೆ ಇದೇ ಏಪ್ರಿಲ್ ನಲ್ಲಿ ಆರಂಭವಾಗಿದ್ದು, ಕಾಮಗಾರಿ ಭರದಿಂದ ಸಾಗಿದೆ. ಒಟ್ಟು 92 ಕಿಮೀ ಹೆದ್ದಾರಿ ನಿರ್ಮಾಣ ಕಾಮಗಾರಿಯಲ್ಲಿ 4 ಪ್ಯಾಕೇಜ್ ಗಳಿದ್ದು, ಪ್ಯಾಕೇಜ್ -5 ಅಂದರೆ ಬಿ ಅಗ್ರಹಾರ( ಶ್ರೀರಂಗಪಟ್ಟಣ) ದಿಂದ ಯಲಚನಹಳ್ಳಿ (ಮೈಸೂರು ತಾಲೂಕು) 19 ಕಿಮೀ ಮತ್ತು ಪ್ಯಾಕೇಜ್-3 (ಹುಣಸೂರು ತಾಲೂಕಿನ ಬೆಳತ್ತೂರುನಿಂದ ಪಿರಿಯಾಪಟ್ಟಣ ತಾಲೂಕಿನ ಹರವೆಮಲ್ಲಿರಾಜಪಟ್ಟಣ ವರೆಗಿನ 24.10 ಕಿಮೀ) ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಪ್ಯಾಕೇಜ್-4 ಸದ್ಯದಲ್ಲೇ ಆರಂಭವಾಗಲಿದ್ದು, ಪ್ಯಾಕೇಜ್-2 ಅರಣ್ಯ ಇಲಾಖೆಯ ಕೃಪೆಗಾಗಿ ಕಾದಿದೆ. ಕುಶಾಲನಗರದಿಂದ ಮಡಿಕೇರಿ ಕಡೆಗೆ ಆರಂಭವಾಗಬೇಕಿರುವ 22 ಕಿಮೀ ಉದ್ಧದ ಪ್ಯಾಕೇಜ್-1 ಅನ್ನು ಪರಿಸರವಾದಿಗಳ ತಕರಾರು ಮತ್ತು ಹೈಕೋರ್ಟ್ ಕೇಸಿನಿಂದಾಗಿ ಕೈಬಿಟ್ಟು ಕುಶಾಲನಗರದವರೆಗೂ ಮಾತ್ರ ಯೋಜನೆ ಕೈಗೆತ್ತಿಕೊಂಡಿದ್ದೆವು. ನೀವೆಲ್ಲ ಯೆಸ್ ಎಂದರೆ ಪ್ಯಾಕೇಜ್-1 ಗೆ ಅನುಮೋದನೆ ಪಡೆಯುವ ಪ್ರಯತ್ನ ಆರಂಭಿಸುತ್ತೇನೆ. ಕೆಲವು ಕೆಲಸ ಮಾಡಲು ಅಧಿಕಾರವೇ ಬೇಕೆಂದಿಲ್ಲ, ನಿಮ್ಮ ಆಶೀರ್ವಾದವೂ ಸಾಕಾಗುತ್ತದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.










