
ಮಡಿಕೇರಿ ಮೇ 7 NEWS DESK : ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು, ವಾಣಿಜ್ಯ ಹಾಗೂ ನಿರ್ವಹಣಾ ಶಾಸ್ತ್ರದ ಅಸೋಸಿಯೇಷನ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಸ್ಟೂಡೆಂಟ್ಸ್ ವತಿಯಿಂದ “ಉತ್ಕರ್ಷ್ 2025”ಎಂಬ ಫೆಸ್ಟ್ ನಡೆಯಿತು. ಕಾರ್ಯಕ್ರಮವನ್ನು ಮಡಿಕೇರಿ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ಧನಲಕ್ಷ್ಮಿ ಉದ್ಘಾಟಿಸಿ ಮಾತನಾಡಿ, ಎಲ್ಲರಲ್ಲೂ ಪ್ರತಿಭೆ ಇರುತ್ತದೆ ಅದನ್ನು ಗುರುತಿಸಿ ಹೊರ ತರುವ ಕೆಲಸ ಆಗಬೇಕಿದೆ. “ಪರಮಾತ್ಮ ಜೊತೆಗಿದ್ದಾರೆ” ಎಂಬ ಭಾವದಿಂದ ಮುನ್ನಡೆದರೆ ಭಯವು ಕಾಡುವುದಿಲ್ಲ ಎಂದರು. ಕೆ.ಜಿ.ನೀರಜ್ ಮಾತನಾಡಿ, ಸ್ವ ಉದ್ಯೋಗದಲ್ಲಿರುವ ವಿಪುಲ ಅವಕಾಶಗಳ ಬಗ್ಗೆ ವಿವರಿಸಿದರು. ಕಾರ್ಯಕ್ರಮದ ಸಂಘಟಕರಾದ ಡಾ.ದೀಕ್ಷಿತಾ ವರ್ಕಾಡಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಹಪ್ರಾಧ್ಯಾಪಕರಾದ ಪ್ರೊ.ವಸಂತಕುಮಾರಿ, ಡಾ.ನಿರ್ಮಲ ಕೆ.ಡಿ, ಡಾ.ಪ್ರಕಾಶ್ ಎಂ.ಎನ್ ಹಾಜರಿದ್ದರು. ಸುಫಾನ ಸ್ವಾಗತಿಸಿದರು. ವಿಷ್ಣುಪ್ರಿಯ ಪ್ರಾರ್ಥಿಸಿದರು. ಪ್ರಿಯಾಂಕ ವಂದಿಸಿದರು. ವಿನಿತ ಕಾರ್ಯಕ್ರಮವನ್ನು ನಿರ್ವಹಿಸಿದರು. ಮಾರುಕಟ್ಟೆ ಕೌಶಲ್ಯಗಳು, ಮಾನವ ಸಂಪನ್ಮೂಲ, ಹಣಕಾಸು, ಅತ್ಯುತ್ತಮ ಉದ್ಯಮಿ ಹಾಗೂ ವ್ಯವಹಾರಿಕ ರಸಪ್ರಶ್ನೆ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು. ಸಮಾರೋಪ ಭಾಷಣವನ್ನು ದೈಹಿಕ ಶಿಕ್ಷಣ ಸಂಚಾಲಕ ಎವರೆಸ್ಟ್ ರೋಡ್ರಿಗಸ್ ನಡೆಸಿಕೊಟ್ಟರು.









