
ಮಡಿಕೇರಿ ಮೇ 7 NEWS DESK : ಪಾಕ್ ಉಗ್ರವಾದಿಗಳ ದಾಳಿಗೆ ಪ್ರತಿರೋಧವಾಗಿ ಭಾರತೀಯ ಸೇನೆ ಉಗ್ರರ ಅಡಗು ತಾಣಗಳ ಮೇಲೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪ್ರತಿಕಾರ ಪಡೆದಿದ್ದು, ಭಾರತೀಯ ಸೇನೆಗೆ ವಿಶೇಷ ಮನೋಸ್ಥೈರ್ಯ ತುಂಬುವ ಸಲುವಾಗಿ ಮುಜರಾಯಿ ಇಲಾಖೆಗೆ ಸಂಬಂಧ ಪಟ್ಟ ದೇವಸ್ಥಾನಗಳಲ್ಲಿ ಪೂಜೆ ನಡೆಸಲು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಸೂಚನೆ ನೀಡಿದ್ದು, ಇದರನ್ವಯ ಓಂಕಾರೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿಯ ವತಿಯಿಂದ ಮೇ 8 ರಂದು ಓಂಕಾರೇಶ್ವರ ದೇವಾಲಯದಲ್ಲಿ ಬೆಳಿಗ್ಗೆ 9 ಗಂಟೆಗೆ ವಿಶೇಷ ಪೂಜೆ ನಡೆಯಲಿದೆ. ಮಡಿಕೇರಿಯ ಸರ್ವ ನಾಗರಿಕರು ಆಗಮಿಸಿ ಭಾರತೀಯ ಸೇನೆಗೆ ಆತ್ಮಸ್ಥೈರ್ಯ ತುಂಬುವುದರೊಂದಿಗೆ ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ ಎಂಬ ಸಂದೇಶವನ್ನು ಕಳುಹಿಸವ ಸಲುವಾಗಿ ಪೂಜೆಯಲ್ಲಿ ಭಾಗವಹಿಸಬೇಕೆಂದು ಅಧ್ಯಕ್ಷರು ಹಾಗೂ ಸದಸ್ಯರು ಕೋರಿದ್ದಾರೆ.









