
ಸೋಮವಾರಪೇಟೆ ಮೇ 8 NEWS DESK : ಗರಗಂದೂರು ಬಿ ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ ಬ್ರಹ್ಮಕಳಶೋತ್ಸವ ಮತ್ತು 15ನೇ ವಾರ್ಷಿಕ ಪೂಜೆ ಗ್ರಾಮಸ್ಥರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು. ಪಕ್ಕದ ಹಾರಂಗಿ ನದಿಯಿಂದ ಗಂಗೆಯನ್ನು ವಾದ್ಯಮೇಳದೊಂದಿಗೆ ಮೆರವಣಿಗೆಯಲ್ಲಿ ದೇವಾಲಯಕ್ಕೆ ತರಲಾಯಿತು. 21 ಮಹಿಳೆಯರು ಕಳಸವನ್ನು ಹೊತ್ತು ಮೆರವಣಿಗೆಯಲ್ಲಿ ತೆರಳಿದರು. ಬ್ರಹ್ಮಕಲಸದ ಪೂಜಾ ವಿಧಿವಿಧಾನಗಳನ್ನು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ನೆರವೇರಿಸಿದರು. ದೇವಾಲಯ ಸಮಿತಿ ಅಧ್ಯಕ್ಷ ಸಿ.ಕೆ.ರೋಹಿತ್, ಉಪಾಧ್ಯಕ್ಷ ಕೆ.ಡಿ.ವೀರಪ್ಪ, ಕಾರ್ಯದರ್ಶಿ ಲಿಖಿತ್ ದಾಮೋಧರ್, ಖಜಾಂಚಿ ಬಿ.ಇ.ಅಜಿತ್‍ಕುಮಾರ್ ಮತ್ತು ಗ್ರಾಮಸ್ಥರು ಇದ್ದರು.










