
ಮಡಿಕೇರಿ ಮೇ 8 NEWS DESK : ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಟ್ಟೋಳಿ ಗ್ರಾಮದ ಆಶ್ರಯ ಕಾಲೋನಿಯಿಂದ-ಮಂಜಮರ ಸಂಪರ್ಕಿಸುವ ರಸ್ತೆ ಹಾಗೂ ಕೊಟ್ಟೋಳಿ-ಮಂಜಮರ ಸಂಪರ್ಕ ರಸ್ತೆ, 2ನೇ ಆಶ್ರಯ ಕಾಲೋನಿ-ಗುಂಡಿಕೆರೆ ಸಂಪರ್ಕ ರಸ್ತೆಯು ಹಲವು ವರ್ಷಗಳಿಂದ ದುಸ್ಥಿತಿಯಲ್ಲಿದ್ದು, ಇದೀಗ ಕ್ಷೇತ್ರದ ನಿರಂತರ ಅಭಿವೃದ್ಧಿಯ ಭಾಗವಾಗಿ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಶಾಸಕರ ಅನುದಾನ 21 ಲಕ್ಷ ರೂಪಾಯಿಯ ವೆಚ್ಚದಲ್ಲಿ ಸುಸಜ್ಜಿತ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲಾಗಿದೆ. ಸುಸಜ್ಜಿತ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಸಹಕರಿಸಿದ ಶಾಸಕ ಪೊನ್ನಣ್ಣ ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ಕೆದಮುಳ್ಳೂರು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಡಿಕೇರಿಯಂಡ ಮಹೇಶ್, ಕೆಡಿಪಿ ಸದಸ್ಯರಾದ ಮಾಳೆಟ್ಟಿರ ಪ್ರಶಾಂತ್ ಉತ್ತಪ್ಪ, ಗ್ರಾ.ಪಂ ಅಧ್ಯಕ್ಷ ಮಾಳೆಟ್ಟಿರ ಜಫ್ರಿ ಉತ್ತಪ್ಪ, ಕೊಟ್ಟೋಳಿ ಬೂತ್ ಸಮಿತಿ ಅಧ್ಯಕ್ಷ ಎಂ.ವೈ.ಅಲಿ ಹಾಗೂ ವಿಶೇಷವಾಗಿ ಮುತುವರ್ಜಿ ವಹಿಸಿ ಕಾಮಗಾರಿ ಪೂರ್ಣಗೊಳಿಸಲು ಸಹಕರಿಸಿದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ಕೊಟ್ಟೋಳಿ ವಾರ್ಡ್ ಸದಸ್ಯ ಇಸ್ಮಾಯಿಲ್ ಎಂ.ಎಂ ಗ್ರಾಮ ಪಂಚಾಯತ್ ಸದಸ್ಯೆ ಪವಿತ್ರ ಎ.ಯು ಹಾಗೂ ಮುಖಂಡರಾದ ಗುಂಬಿರ ಶಾಂತ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.









