
ಮಡಿಕೇರಿ ಮೇ 10 NEWS DESK : ಅಮೃತ ಯುವ ಮೊಗೇರ ಸಿದ್ದಾಪುರ ಅಮ್ಮತಿ ಹೋಬಳಿ ವತಿಯಿಂದ ತೃತೀಯ ರಾಜ್ಯ ಮಟ್ಟದ ಮೊಗೇರ ಕ್ರಿಕೆಟ್ ಪಂದ್ಯವು ಮೇ 17 ಹಾಗೂ 18 ರಂದು ನಡೆಯಲಿದೆ. ನಗರದ ಜಿಲ್ಲಾ ಕ್ರೀಡಾಂಗಣ (ಮ್ಯಾನ್ಸ್ ಕಾಂಪೌಂಡ್) ನಡೆಯಲಿರುವ ಪಂದ್ಯಾವಳಿಯನ್ನು ಅಮೃತ ಯುವ ಮೊಗೇರ ಸೇವಾ ಸಮಾಜದ ಕ್ರೀಡಾ ಅಧ್ಯಕ್ಷರಾದ ಪಿ.ಸಿ.ಗಣೇಶ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಮೃತ ಯುವ ಮೊಗೇರ ಸೇವಾ ಸಮಾಜದ ಅಧ್ಯಕ್ಷ ಪಿ.ಎನ್.ರಾಮು, ಕೊಡಗು ಮೊಗೇರ ಜಿಲ್ಲಾ ಅಧ್ಯಕ್ಷ ಜನಾರ್ಧನ್, ತುಳು ಸಾಹಿತ್ಯ ಅಕಾಡಮಿಯ ಸದಸ್ಯ ಪಿ.ಎಂ.ರವಿ, ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಜಿಲ್ಲಾ ಕ್ರೀಡಾ ಅಧ್ಯಕ್ಷ ಎಂ.ಜಿ.ಚಂದ್ರ ಹಾಗೂ ಸಮಾಜದ ಗೌರವ ಅಧ್ಯಕ್ಷರಾದ ಗೌತಮ್, ಶಿವಪ್ಪ ಅಕ್ಕಮ್ಮ ಮೂರ್ತಿ, ಸದಾನಂದ ಮಾಸ್ಟರ್, ವಸಂತ್, ಪಿ.ಕೆ. ಚಂದ್ರು, ದಾಮೋದರ್ ಅನೇಕ ಗಣ್ಯವ್ಯಕಿಗಳು ಪಾಲ್ಗೊಳ್ಳಲಿದ್ದಾರೆ. ಪಂದ್ಯಾವಳಿಯಲ್ಲಿ ಮೊಗೇರ ಬಾಂಧವರಿಗೆ ಮಾತ್ರ ಅವಕಾಶ ಇದ್ದು, ಒಟ್ಟು 40 ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪಂದ್ಯದ ಶುಲ್ಕ 3,000 ನಿಗದಿ ಪಡಿಸಲಾಗಿದ್ದು, ಕ್ರೀಡಾ ಕೂಟದ ವಿನ್ನರ್ಸ್ ತಂಡಕ್ಕೆ 33,333 ನಗದು ಹಾಗೂ ಆಕರ್ಷಕ ಟ್ರೋಫಿ, ರನ್ನರ್ಸ್ ತಂಡಕ್ಕೆ 22,222 ನಗದು ಹಾಗೂ ಆಕರ್ಷಕ ಟ್ರೋಫಿ ಹಾಗೆಯೇ ವೈಯಕ್ತಿಕ ಟ್ರೋಫಿಗಳನ್ನು ನೀಡಲಾಗುವುದು. ಕ್ರೀಡಾ ಕೂಟದ ಪ್ರಮುಖವಾಗಿ ಆಯೋಜಕರು ಹಾಗೂ ಕೊಡಗು ಪತ್ರಕರ್ತರ ನಡುವೆ ಪ್ರದರ್ಶನ ಪಂದ್ಯವು ನಡೆಯಲಿದೆ. ಆಸಕ್ತ ತಂಡಗಳು ರಾಮು 8792100317, ಗಣೇಶ್ 9591822879, ಶಿವರಾಜ್, 9035821141, ವಿಶ್ವ 734906026 ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಅಶೋಕ್_ಮಡಿಕೇರಿ









