
ಮಡಿಕೇರಿ ಮೇ 12 NEWS DESK : ರಾಷ್ಟ್ರೀಯ ಜನಗಣತಿಯ ಸಂದರ್ಭ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ನ್ನು ಸೇರಿಸಬೇಕು, ಸಂಸತ್ ಹಾಗೂ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಇಂದು ಪಾಡಿನಾಡ್ ನ ಕಕ್ಕಬೆಯಲ್ಲಿ ಮಾನವ ಸರಪಳಿ ನಿರ್ಮಿಸಿ ಜನಜಾಗೃತಿ ಮೂಡಿಸಿತು. ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಕಕ್ಕಬೆ ಜಂಕ್ಷನ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಕೊಡವ ಲ್ಯಾಂಡ್ ಪರ ಘೋಷಣೆಗಳನ್ನು ಕೂಗಿದ ಸದಸ್ಯರು ವಿವಿಧ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆದರು. ಈ ಸಂದರ್ಭ ಮಾತನಾಡಿದ ಎನ್.ಯು.ನಾಚಪ್ಪ ಅವರು 2025-26ರ ರಾಷ್ಟ್ರೀಯ ಜನಗಣತಿಯಲ್ಲಿ ಆದಿಮಸಂಜಾತ ಕೊಡವರಿಗೆ ಪ್ರತ್ಯೇಕ “ಕೋಡ್ ಮತ್ತು ಕಾಲಮ್” ಅನ್ನು ಸೇರಿಸಲು ಕೇಂದ್ರ ಗೃಹ ಮಂತ್ರಾಲಯ ರಿಜಿಸ್ಟ್ರಾರ್ ಜನರಲ್ ಮತ್ತು ಭಾರತದ ಜನಗಣತಿ ಆಯೋಗವನ್ನು ಒತ್ತಾಯಿಸುವುದಾಗಿ ತಿಳಿಸಿದರು. 1871-72 ರಿಂದ 1931 ರವರೆಗೆ ಜನಗಣತಿಯು ನಿಖರ ಮತ್ತು ವೈಜ್ಞಾನಿಕವಾಗಿತ್ತು. ಕೊಡವರನ್ನು ಕೊಡವಲ್ಯಾಂಡ್‍ನ ಏಕ-ಜನಾಂಗೀಯ, ಆನಿಮಿಸ್ಟಿಕ್, ಆದಿಮಸಂಜಾತ ಯೋಧ ಕುಲವೆಂದು ಗುರುತಿಸಿತು. ಈ ಮನ್ನಣೆ ಕೊಡವ ಸಮುದಾಯದ ಜನಾಂಗೀಯ ವಂಶಾವಳಿಯನ್ನು ದೃಢಪಡಿಸಿತು. ಪ್ರಸ್ತುತ ಜನಗಣತಿ ಸಂದರ್ಭ ಪ್ರತ್ಯೇಕ ಕೋಡ್ ಮತ್ತು ಕಾಲಮ್ ಸೇರಿಸಿದರೆ ಕೊಡವ ಸಮುದಾಯದ ನಿಖರವಾದ ಪ್ರಾತಿನಿಧ್ಯವನ್ನು ಖಚಿತಪಡಿಸಬಹುದು. ಸರ್ಕಾರ ಕೊಡವ ಸಮುದಾಯದ ನಿರ್ದಿಷ್ಟ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸೋಶಿಯಲ್ ಇಂಜಿನಿಯರಿಂಗ್ ಮೂಲಕ ಅವರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಉದ್ದೇಶಿತ ನೀತಿಗಳನ್ನು ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುತ್ತದೆ. ಕೊಡವ ಸಮುದಾಯದ ವಿಶಿಷ್ಟ ಗುರುತನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಸಿಕ್ಕಿಂನಲ್ಲಿ ಬೌದ್ಧ ಬಿಕ್ಷುಗಳಿಗಾಗಿ ನೀಡಿದ “ಸಂಘ” ಮತಕ್ಷೇತ್ರದಂತೆ 2026 ರ ಕ್ಷೇತ್ರ ಪುನರ್ವಿಂಗಡಣೆಯ ಸಮಯದಲ್ಲಿ ಕೊಡವರಿಗೂ ಸಂಸದೀಯ ಮತ್ತು ವಿಧಾನಸಭಾ ಕ್ಷೇತ್ರಗಳನ್ನು ರಚಿಸಬೇಕು. ಇದು ಕಡ್ಡಾಯ ಕುಟುಂಬ ಯೋಜನೆಯ ಪರಿಪಾಲನೆ, ರಾಷ್ಟ್ರದ ಭದ್ರತೆಗಾಗಿ ಸೇನಾಕ್ಷೇತ್ರದ ಸೇವೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡವ ಸಮುದಾಯ ನೀಡಿದ ಕೊಡುಗೆಗೆ ನೀಡುವ ಅಮೋಘ ಕೊಡುಗೆಯಾಗುತ್ತದೆ ಎಂದು ಎನ್.ಯು.ನಾಚಪ್ಪ ಅಭಿಪ್ರಾಯಪಟ್ಟರು. ಕೊಡವಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಗಾಗಿ ಕಳೆದ 35 ವರ್ಷಗಳಿಂದ ನಿರಂತರ ಮತ್ತು ಶಾಂತಿಯುತವಾಗಿ ಸಿಎನ್‍ಸಿ ಸಂಘಟನೆ ಹೋರಾಟ ನಡೆಸುತ್ತಾ ಬಂದಿದೆ. ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಈ ಬೇಡಿಕೆ ಪರ ಕರ್ನಾಟಕ ಹೈಕೋರ್ಟ್‍ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದು, ಅದರ ವಿಚಾರಣೆ ಮುಂದುವರೆಯುತ್ತಿದೆ ಎಂದರು. ಕೊಡವ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್‍ಟಿ) ಟ್ಯಾಗ್ ನೀಡಬೇಕು, ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಆದಿಮಸಂಜಾತ ಸಮಾವೇಶದ ಅಡಿಯಲ್ಲಿ ಮಾನ್ಯತೆಯನ್ನು ಕಲ್ಪಿಸಬೇಕು, ಹೊರಗಿನ ಆಡಳಿತಗಾರರು ವಶಪಡಿಸಿಕೊಂಡ, ಬಂಡವಾಳಶಾಹಿಗಳಿಗೆ ಅಡಮಾನವಿಟ್ಟ, ಭೋಗ್ಯಕ್ಕೆ ನೀಡಿದ ಮತ್ತು ಮಾರಾಟ ಮಾಡಿದ ಕೊಡವರ ಪೂರ್ವಾರ್ಜಿತ ಅನುವಂಶಿಕ ಭೂ ಹಕ್ಕುಗಳನ್ನು ಮರುಸ್ಥಾಪಿಸಬೇಕು, ಸಾಂಪ್ರದಾಯಿಕ ತಾಯ್ನಾಡಿನಲ್ಲಿ ಕೊಡವರ ಐತಿಹಾಸಿಕ ನಿರಂತರತೆಯ ಶಾಸನಬದ್ಧ ಅನುಮೋದನೆಯನ್ನು ಘೋಷಿಸಬೇಕು ಎಂದು ಒತ್ತಾಯಿಸಿದರು. ಕಲ್ಯಾಣ ರಾಜ್ಯ ಚೌಕಟ್ಟಿನೊಳಗೆ ಕೊಡವ ಸಮುದಾಯದ ಗುರುತು ಮತ್ತು ಅಸ್ತಿತ್ವವನ್ನು ದೃಢೀಕರಿಸಲು ಸರಿಯಾದ ಜನಗಣತಿ ನಿರ್ಣಾಯಕವಾಗಿದೆ. ಈ ಬೇಡಿಕೆಗಳ ಮೂಲಕ ಕೊಡವರ ಸಮಗ್ರ ಸಬಲೀಕರಣವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು.
*ಮೇ 26 ರಂದು ಟಿ.ಶೆಟ್ಟಿಗೇರಿಯಲ್ಲಿ*
ಮುಂದಿನ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ಮೇ 26ರಂದು ಬೆಳಿಗ್ಗೆ 10.30 ಗಂಟೆಗೆ ತಾಳೇರಿ ನಾಡಿನ ಟಿ.ಶೆಟ್ಟಿಗೇರಿಯಲ್ಲಿ ನಡೆಯಲಿದೆ ಎಂದರು. ಸವಿತಾ, ಪಟ್ರಪಂಡ ಲೀಲಾ, ಮಚಂಡ ವನಿತಾ, ನಂಬಡಮಂಡ ಶೈಲಾ, ನಾಟೋಳಂಡ ಪುಷ್ಪಾ, ಅಯ್ಯನೆರವಂಡ ಗಂಗೆ, ಬಾಚಮಂಡ ರಾಜ ಪೂವಣ್ಣ, ನಾಪೋಕ್ ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ನಾಣಯ್ಯ, ಕಲಿಯಂಡ ಪ್ರಕಾಶ್, ಪಾಂಡಂಡ ನರೇಶ್, ಅಪ್ಪಾರಂಡ ಶ್ರೀನಿವಾಸ್, ಬೊಳಿಯಾಡಿರ ಸಂತು, ಕಲ್ಯಾಟಂಡ ರಘು, ಬಾಚಮಂಡ ಲವ, ಅಪ್ಪಾರಂಡ ವಿಜು, ಅಪ್ಪಾರಂಡ ಪ್ರಕಾಶ್, ಪೊನ್ನೊಳ್ತಂಡ ರಘು, ಅರೆಯಡ ಗಿರೀಶ್, ಅರೆಯಡ ಅಶೋಕ್, ಪುದಿಯೊಕ್ಕಡ ಪೃಥ್ವಿ, ಬಡಕಡ ಸುರೇಶ್, ಕರ್ತಂಡ ಸಾಬು, ಅಪ್ಪಾರಂಡ ಪ್ರಸಾದ್, ಕಲ್ಯಾಟಂಡ ಮುತ್ತಪ್ಪ, ಕೋಡಿಮಣಿಯಂಡ ತಮ್ಮುಣಿ, ಅಲ್ಲಾರಂಡ ಚೀಯಣ್ಣ, ಮಾದಂಡ ಉಮೇಶ್, ಕಲಿಯಂಡ ರಮೇಶ್, ಉದಿಯಂಡ ಸುಭಾಷ್, ಕಂಬೆಯಂಡ ಸುಬ್ರಮಣಿ, ನಾಟೋಳಂಡ ದಿಲೀಪ್, ಕಂಬೆಯಂಡ ಮಿಟ್ಟು, ಉದಿಯಂಡ ಕುಟ್ಟಪ್ಪ, ಕೋಚಮಂಡ ಸಂದೀಪ್, ಕೇಟೋಳಿರ ಅಪ್ಪಣ್ಣ, ಮಾದಂಡ ಮಿಲನ್, ಅಯ್ಯನೆರವಂಡ ಕಿಶು, ಅಲ್ಲಾರಂಡ ಕಿರಣ್, ಬೊಳಿಯಡಿರ ವಿಜಯ್, ಬೊಳಿಯಡಿರ ರಮ್ಮಿ, ಕೋಡಿಮಣಿಯಂಡ ಚುಬ್ರಾ, ಉದಿಯಂಡ ಪೂಕುಂಞ, ಬಾಚಮಂಡ ನವಲ್, ಮೇಚಂಡ ಜೋಯಪ್ಪ, ಬಟ್ಟೀರ ಪೊನ್ನಣಿ, ಪರದಂಡ ನಾಣಯ್ಯ, ಅಯ್ಯನೆರವಂಡ ರಾಧು, ಅಲ್ಲಾರಂಡ ಬೊಳ್ಯಪ್ಪ, ಕೋಡಿಮಣಿಯಂಡ ರಮೇಶ್, ಪರದಂಡ ಕಸ್ತೂರಿ, ಮಾದಂಡ ಜಗ, ಬಟ್ಟೀರ ರಮೇಶ್, ಮಾಳೆಯಂಡ ಪ್ರದೀಪ್, ಪರದಂಡ ನಾಚಪ್ಪ, ಬಟ್ಟೀರ ಜಾಲಿ, ಪೊನ್ನೊಳ್ತಂಡ ಬಬ್ಲು, ಬಟ್ಟೀರ ರಾಜಪ್ಪ, ಅಲ್ಲಾರಂಡ ಸನ್ನು, ಬಟ್ಟೀರ ಜೀವನ್, ಅಪ್ಪಾರಂಡ ವಿವೇಕ್, ಅಪ್ಪಾರಂಡ ರಿಶಿ ನಾಣಯ್ಯ, ಬಟ್ಟೀರ ಗೌತಮ್, ಕೋಟೆರ ಚಿಮ್ಮ, ಬಾಚಮಂಡ ಜಗು, ಪರದಂಡ ಮುದ್ದು, ಚೋಯಮದಂಡ ಚೆಂಗಪ್ಪ, ಬಾಚಮಂಡ ಭರತ್, ಉದಿಯಂಡ ಸೂರಜ್, ಅರೆಯಡ ಪ್ರಸನ್ನ, ಅಪ್ಪಾರಂಡ ಆರ್ಯ ಚೆಂಗಪ್ಪ, ಚೇನಂಡ ಬೋಪಣ್ಣ, ಮಾರ್ಚಂಡ ರಮೇಶ್, ಕಲ್ಯಾಟಂಡ ಸುಧಾ, ಕಾ0ಡಂಡ ಆಗಂ ಬೊಳ್ಳಿಪ್ಪ, ಮಾಳೆಯಂಡ ಅಶ್ವಿನಿ ಅಪ್ಪಣ್ಣ, ಪರದಂಡ ಅರ್ಜುನ, ಬಾಚಮಂಡ ದೇವಿ, ಕಂಬೆಯಂಡ ಅನು ಸುಬ್ಬಯ್ಯ ಪಾಲ್ಗೊಂಡು ಸೂರ್ಯ ಮತ್ತು ಚಂದ್ರ, ಗುರು-ಕಾರೋಣ, ಶ್ರೀ ಇಗ್ಗುತ್ತಪ್ಪ, ಜೀವನದಿ ಕಾವೇರಿ, ಭೂಮಿ ತಾಯಿ, ಪ್ರಕೃತಿ ದೇವಿ, ಪರ್ವತ ದೇವಿ ಮತ್ತು ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ಸಿಎನ್‍ಸಿ ಪರ ಬೆಂಬಲ ಸೂಚಿಸಿದರು.









