
ಬೆಂಗಳೂರು ಜೂ.16 NEWS DESK : ಕರ್ನಾಟಕ ರಾಜ್ಯದ ಯಶಸ್ವಿಯಾಗಿ ನೋಂದಾಯಿಸಿದ ಅಭ್ಯರ್ಥಿಗಳಿಗೆ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇ) ಅನ್ನು 2025ರ ಜೂನ್ 30 ರಿಂದ ಜುಲೈ 10 ರವರೆಗೆ ನಡೆಸಲಾಗುತ್ತಿದೆ. ಪರೀಕ್ಷೆಯ ಪ್ರವೇಶ ಪತ್ರಗಳು 2025ರ ಜೂನ್ 14 ರಿಂದ ಸೇನಾ ವೆಬ್ ಪೋರ್ಟಲ್ www.joinindianarmy.nic.in ನಲ್ಲಿ ಲಭ್ಯವಿದೆ. ಅಭ್ಯರ್ಥಿಗಳಿಗೆ ಸೂಚನೆಗಳು :: (ಎ).ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ ಈ ಬಗ್ಗೆ ಅವರ ಇ-ಮೇಲ್ ಮೂಲಕವೂ ಮಾಹಿತಿ ನೀಡಲಾಗುವುದು, (ಬಿ).ಪರೀಕ್ಷೆ ನಡೆಯುವ ದಿನಾಂಕವನ್ನು ಆಧರಿಸಿ ಕ್ರಮವಾಗಿ www.joinindianarmy.nic.in ವೆಬ್‌ಸೈಟ್‌ನಿಂದ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ, (ಸಿ).ಆನ್‌ಲೈನ್ ಪರೀಕ್ಷೆಯನ್ನು 202ರ ಜೂನ್ 30 ರಿಂದ ಜುಲೈ 10ರವರೆಗೆ ವಿವಿಧ ಕೇಂದ್ರಗಳಲ್ಲಿ ವಿವಿಧ ಸಮಯಗಳಲ್ಲಿ ನಡೆಸಲಾಗುವುದು, (ಡಿ).ನಿಗದಿಪಡಿಸಿರುವ ದಿನಾಂಕ ಮತ್ತು ಸಮಯದ ಸ್ಲಾಟ್‌ನಲ್ಲಿ ತಮ್ಮ ಪರೀಕ್ಷಾ ಕೇಂದ್ರಗಳನ್ನು ಸಮಯಕ್ಕೆ ಸರಿಯಾಗಿ ತಲುಪಿ, (ಇ).ಜೆಐಎ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಲಾದ ಮೂಲ ಪ್ರವೇಶ ಪತ್ರವನ್ನು (ಕಲರ್ ಪ್ರಿಂಟ್ ಔಟ್) ಕೊಂಡೊಯ್ಯಿರಿ, (ಎಫ್).ನಿಮ್ಮ ಆಧಾರ್ ಕಾರ್ಡ್ ಅನ್ನು ಮೂಲ ಪ್ರತಿ ಕೊಂಡೊಯ್ಯಿರಿ, (ಜಿ).ಸೇನೆಗೆ ನಡೆಯುವ ನೇಮಕಾತಿ ನ್ಯಾಯಯುತ ಮತ್ತು ಪಾರದರ್ಶಕವಾಗಿದೆ. ನೇಮಕಾತಿಯು ಸಂಪೂರ್ಣವಾಗಿ ಅರ್ಹತೆಯ ಆಧಾರದ ಮೇಲೆ ನಡೆಯುವುದರಿಂದ ಅಭ್ಯರ್ಥಿಗಳು ಯಾರಿಗೂ ಲಂಚ ನೀಡಬಾರದು ಎಂದು ಸೂಚಿಸಲಾಗಿದೆ.











