
ಮಡಿಕೇರಿ ಜೂ.21 NEWS DESK : ತಮಿಳುನಾಡಿನ ಸೇಲಂ ಉಕ್ಕು ಸ್ಥಾವರದ ಆವರಣದಲ್ಲಿ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪಾಲ್ಗೊಂಡು ಯೋಗಾಭ್ಯಾಸ ಮಾಡಿದರು. ನಂತರ ಮಾತನಾಡಿದ ಅವರು, ರಾಷ್ಟ್ರದ ಬೆನ್ನೆಲುಬಾಗಿರುವ ಉಕ್ಕು ಕ್ಷೇತ್ರದ ಕುಟುಂಬದೊಂದಿಗೆ ಯೋಗದ ಅನನ್ಯತೆ, ಅವಿಸ್ಮರಣೆಯ ಕ್ಷಣಗಳನ್ನು ಅನುಭವಿಸುವ ಭಾಗ್ಯ ನನ್ನದಾಯಿತು. ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ. ಇದು ಮಾನಸಿಕ ಶಾಂತಿ, ಮಾನಸಿಕ ಸ್ಪಷ್ಟತೆ, ದೈಹಿಕ ಸ್ವಾಸ್ತ್ಯತೆ ಮತ್ತು ಸಾಮೂಹಿಕ ಯೋಗಕ್ಷೇಮಕ್ಕೆ ಪರಿಣಾಮಕಾರಿ ಮಾರ್ಗವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಯೋಗವು ಜಗತ್ತನ್ನೇ ಒಗ್ಗೂಡಿಸಿದೆ. ಜಗತ್ತಿನ ಯೋಗಕ್ಷೇಮಕ್ಕೆ ನಮ್ಮ ಪಾರಂಪರಿಕ ಯೋಗವು ಮಹೋನ್ನತ ಕೊಡುಗೆ ನೀಡುತ್ತಿದೆ ಎಂದು ಹೇಳಿದರು. ಸೇಲಂ ಟೌನ್‌ಶಿಪ್‌ನಲ್ಲಿರುವ ಹಿಲ್ ವ್ಯೂ ಕ್ರೀಡಾಂಗಣದಲ್ಲಿ ಸ್ಥಾವರದ ನೂರಾರು ಉದ್ಯೋಗಿಗಳು ಮತ್ತು ಅವರ ಕುಟುಂಬಗಳು ಯೋಗಾಭ್ಯಾಸ ಮಾಡಲು ಪಾಲ್ಗೊಂಡು ಯೋಗಾಭ್ಯಾಸ ಮಾಡಿದರು.









