
ಮಡಿಕೇರಿ ಜೂ.24 NEWS DESK : ಕೊಡಗು ಜಿಲ್ಲೆ ಕೃಷಿ ಇಲಾಖೆಯ ಕೃಷೋನ್ನತಿ ಕೃಷಿ ವಿಸ್ತರಣೆ ಉಪ ಅಭಿಯಾನ(ಆತ್ಮ) ಯೋಜನೆಯಡಿ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರ 1 ಹುದ್ದೆಯನ್ನು ಒಪ್ಪಂದದ ಆಧಾರದ ಮೇಲೆ 2025-26 ನೇ ಸಾಲಿನ ಸೀಮಿತ ಅವಧಿಗೆ ವಿರಾಜಪೇಟೆ ತಾಲ್ಲೂಕಿನಲ್ಲಿ ಖಾಲಿ ಇರುವ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಎಂಎಸ್ಸಿ(ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಅರಣ್ಯ, ರೇಷ್ಮೆ) ವಿದ್ಯಾರ್ಹತೆ ಹೊಂದಿರಬೇಕು. ಕನಿಷ್ಟ 2 ವರ್ಷ ಕೃಷಿ ವಿಸ್ತರಣಾ ಮತ್ತು ಸಂಬಂಧಿತ ಚಟುವಟಿಕೆಯಲ್ಲಿ ಅನುಭವ ಹಾಗೂ ಎಂಎಸ್ ಆಫೀಸ್‍ನಲ್ಲಿ ಪರಿಣತಿ ಹೊಂದಿರಬೇಕು. ಗರಿಷ್ಠ 45 ವರ್ಷದೊಳಗಿರಬೇಕು. ಮಾಸಿಕ ರೂ.30 ಸಾವಿರ ಗೌರವ ಧನ ನೀಡಲಾಗುವುದು. ಈ ಹುದ್ದೆಗೆ ಅರ್ಹರಿರುವ ಆಭ್ಯರ್ಥಿಗಳು ಜುಲೈ, 05 ರೊಳಗೆ ಕಚೇರಿ ವೇಳೆಯಲ್ಲಿ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಕೊಡಗು ಜಿಲ್ಲೆ, ಮಡಿಕೇರಿ ಇಲ್ಲಿ ಅರ್ಜಿಯನ್ನು ಸಲ್ಲಿಸುವಂತೆ ತಿಳಿಸಿದೆ, ಹೆಚ್ಚಿನ ಮಾಹಿತಿಗೆ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಆತ್ಮ ವಿಭಾಗ, ಕೊಡಗು ಜಿಲ್ಲೆ, ಮಡಿಕೇರಿ ಇವರನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.









