Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಹದೇವಪೇಟೆ ಮಹಿಳಾ ಸಹಕಾರ ಸಂಘದಲ್ಲಿ ಮಹಿಳಾ ದಿನಾಚರಣೆ : ಸಾಧಕರಿಗೆ ಸನ್ಮಾನ*
  • *ಸೋಮವಾರಪೇಟೆ : ಮಹಿಳೆಯರು ಶಿಕ್ಷಣ ಪಡೆಯಲು ಕೆ.ಹೆಚ್.ಧನಲಕ್ಷ್ಮೀ ಸಲಹೆ*
  • *ಅಖಿಲ ಅಮ್ಮ ಕೊಡವ ಸಮಾಜದ ಅಭಿವೃದ್ಧಿಗೆ ಶಾಸಕ ಎ.ಎಸ್.ಪೊನ್ನಣ್ಣರಿಂದ ಚೆಕ್ ವಿತರಣೆ*
  • *ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್‍ಎಸ್‍ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರ : ಆಧುನಿಕತೆಯ ಭರದಲ್ಲಿ ಸಂಸ್ಕಾರಗಳು ಕಣ್ಮರೆಯಾಗುತ್ತಿರುವುದು ವಿಷಾದನೀಯ : ವಿನೋದ್ ಮೂಡಗದ್ದೆ*
  • *ಗೋಣಿಕೊಪ್ಪ : ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸಿ : ಜಗದೀಶ್ ಜೋಡುಬೀಟಿ*
  • *ಗೋಣಿಕೊಪ್ಪ ಸೀನಿಯರ್ ಚೇಂಬರ್ “ಇಂಟರ್‌ನ್ಯಾಷನಲ್” ಸಂಸ್ಥೆಗೆ ಪ್ರಶಸ್ತಿಯ ಗರಿ*
  • *ವನ್ಯಜೀವಿಗಳ ಉಪಟಳ ತಡೆಗೆ ಆಗ್ರಹ : ಅರಣ್ಯ ಭವನಕ್ಕೆ ಬಿಜೆಪಿ ಮುತ್ತಿಗೆ ಯತ್ನ : ಹೆದ್ದಾರಿ ತಡೆದು ಪ್ರತಿಭಟನೆ*
  • *ಬಸವಣ್ಣ ಹಾಗೂ ಅಕ್ಕಮಹಾದೇವಿ ಕುರಿತು ಅವಹೇಳನ : ಕಿಡಿಗೇಡಿಯ ಬಂಧನಕ್ಕೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಆಗ್ರಹ*
  • *ಕಾಡಾನೆ ದಾಳಿ : ಸರಕಾರದ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ : ತೇಲಪಂಡ ಶಿವಕುಮಾರ್ ನಾಣಯ್ಯ ಅಸಮಾಧಾನ*
  • *ಕುಶಾಲನಗರ : ಜೀವನದಲ್ಲಿ ಕಲಿಕೆ ನಿರಂತರ ಪ್ರಕ್ರಿಯೆ : ವನಿತಾ ಚಂದ್ರಮೋಹನ್*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ 5208 ಹುದ್ದೆಗಳ ನೇಮಕಾತಿ ಪರ್ವ : ಐ.ಬಿ.ಪಿ.ಎಸ್ ನಿಂದ ಅರ್ಜಿ ಆಹ್ವಾನ*
ಇತ್ತೀಚಿನ ಸುದ್ದಿಗಳು ಉದ್ಯೋಗ ಭಾಗ್ಯ ಕೊಡಗು ಜಿಲ್ಲೆ

*ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ 5208 ಹುದ್ದೆಗಳ ನೇಮಕಾತಿ ಪರ್ವ : ಐ.ಬಿ.ಪಿ.ಎಸ್ ನಿಂದ ಅರ್ಜಿ ಆಹ್ವಾನ*

ಜುಲೈ 12, 20254 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಾಹಿತಿ ಭಾಗ 1

ದೇಶದ 11 ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಖಾಲಿಯಿರುವ 5208 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಪೂರ್ವ ಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ,ಮೊದಲ ಬಾರಿಗೆ ವ್ಯಕ್ತಿತ್ವ ಪರೀಕ್ಷೆಯ ಜೊತೆಯಲ್ಲಿ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಅರ್ಜಿ ಸಲ್ಲಿಕೆ ಮತ್ತಿತರ ವಿವರಗಳು ಇಲ್ಲಿವೆ. ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್), ಈ ವರ್ಷದಲ್ಲಿ ಇಲ್ಲಿಯವರೆಗೆ 11,516ಕ್ಕೂ ಹೆಚ್ಚಿನ ಬ್ಯಾಂಕ್ ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆದಂತಾಗಿದೆ.(ಎಸ್ ಬಿ ಆಯ್ ಹಾಗೂ ಲೋಕಲ್ ಬ್ಯಾಂಕ ಆಫೀಸರ್/ ಇಂಟರ್ನ ಷಿಪ್ ಹೊರತುಪಡಿಸಿ) ಪದವೀಧರ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿ ಕೊಳ್ಳಬೇಕಾಗಿದೆ.ಎಸ್ಬಿಐ, ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ವಿವಿಧ ಬ್ಯಾಂಕ್ಗಳು ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳಿಗೂ ನೇಮಕಾತಿ ನಡೆಸುತ್ತಿವೆ.ಈ ಮೂಲಕ ಒಟ್ಟಾರೆ, 50,000ಕ್ಕೂ ಅಧಿಕ ಸಿಬ್ಬಂದಿ ಬ್ಯಾಂಕ್ ನ್ನು 2025-26 ನೇ ವರ್ಷಕ್ಕೆ ಪ್ರವೇಶಿಸಲಿದ್ದಾರೆ.

ಬ್ಯಾಂಕ್‍ಗಳಲ್ಲಿ ಅಪ್ರೆಂಟಿಸ್ಷಿಪ್ : ಇತ್ತೀಚಿನ ವರ್ಷಗಳಲ್ಲಿ ಪಿಎಮ್ ಇಂಟರ್ನ ಷಿಪ್ ಯೋಜನೆಯಡಿ ಪದವೀಧರರಿಗೆ ತರಬೇತಿ ನೀಡಲು ಬ್ಯಾಂಕ್ಗಳು ಸ್ಟೈಪೆಂಡ್ ಸಹಿತ ಅಪ್ರೆಂಟಿಸ್ಷಿಪ್ ನೀಡಲು ಅರ್ಜಿ ಆಹ್ವಾನಿಸುತ್ತಿವೆ.

ಸ್ಥಳೀಯ ಪ್ರತಿಭೆಗಳಿಗೆ ಆದ್ಯತೆ: ಪ್ರಾದೇಶಿಕ ಭಾಷೆ ಬಲ್ಲವರನ್ನು ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವ ಮೂಲಕ ಆಯಾ ರಾಜ್ಯಗಳ ಸ್ಥಳೀಯ ಪ್ರತಿಭೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಇದು ಸ್ಥಳೀಯರಿಗೆ ಆದ್ಯತೆ ಜತೆಗೆ, ರಾಜ್ಯದ ಯುವ ಪದವೀಧರರಿಗೆ ರಾಜ್ಯದಲ್ಲಿಯೇ ಅವಕಾಶ ನೀಡಿದಂತಾಗುತ್ತದೆ.

ಎಂದಿನಂತೆ, ಪೂರ್ವ ಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ, ವ್ಯಕ್ತಿತ್ವ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಒಟ್ಟು ಹುದ್ದೆಗಳಲ್ಲಿ ಪರಿಶಿಷ್ಟ ಜಾತಿಗೆ 783, ಪರಿಶಿಷ್ಟ ಪಂಗಡಕ್ಕೆ 365, ಹಿಂದುಳಿದ ವರ್ಗದವರಿಗೆ 1337, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ 520 ಹಾಗೂ ಸಾಮಾನ್ಯ ವರ್ಗ ದವರಿಗೆ 2,204 ಹುದ್ದೆಗಳನ್ನು ಮೀಸಲಿಡಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಜುಲೈ 21, 2025 ಕೊನೆ ದಿನ.

ಯಾವ ಬ್ಯಾಂಕ್, ಎಷ್ಟು ಹುದ್ದೆಗಳು : ಕೆನರಾ ಬ್ಯಾಂಕ್ 1000, ಪಂಜಾಬ್ ಆಂಡ್ ಸಿಂಧ್ ಬ್ಯಾಂಕ್ 358, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 500, ಬ್ಯಾಂಕ್ ಆಫ್ ಇಂಡಿಯಾ 700, ಪಂಜಾಬ್ ನ್ಯಾಷನಲ್ ಬ್ಯಾಂಕ್ 200, ಇಂಡಿಯನ್ ಒವರಸೀಸ್ ಬ್ಯಾಂಕ್ 450, ಬ್ಯಾಂಕ್ ಆಫ್ ಮಹಾರಾಷ್ಟ್ರ 1000,ಬ್ಯಾಂಕ್ ಆಫ್ ಬರೋಡಾ 1000,ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವುದಾಗಿ ಪ್ರಕಟಿಸಿವೆ.

ನೆನಪಿಡಿ: ಮುಖ್ಯವಾಗಿ ಯುಕೋ/ ಯೂನಿಯನ್ ಬ್ಯಾಂಕ್ ಹಾಗೂ ಇಂಡಿಯನ್ ಬ್ಯಾಂಕ್ ಈ ವರ್ಷದ ಖಾಲಿ ಹುದ್ದೆಗಳ ಸಂಖ್ಯೆಯನ್ನು ಇನ್ನು ತಿಳಿಸಿಲ್ಲ.ಹಾಗೂ ಇನ್ನು ಹಲವು ಬ್ಯಾಂಕ್ ಗಳು ಬ್ಯಾಕಲಾಗ್ ಹುದ್ದೆಗಳನ್ನು ನಂತರದ ದಿನದಲ್ಲಿ ಸೇರಿಸಬಹುದು.ಈ ಕಾರಣದಿಂದ ಅಪ್ಲಾಯ್ ಮಾಡದೇ ಇರಬೇಡಿ.

ಅರ್ಜಿ ಸಲ್ಲಿಸಲು ಹಾಗೂ ಮಾಹಿತಿಗೆ ಲಿಂಕ್ ಗಳು:
www.ibps.in   ಅಧೀಕೃತ ವೆಬ್ ಸೈಟ್
ibps.in/wp-content/uploads/Detailed-Notification_CRP-PO-XV.pdf  ಜಾಲ ತಾಣ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು https://ibpsreg.ibps.in/crppoxvjun25/

ಶೈಕ್ಷಣಿಕ ಅರ್ಹತೆ: (21.07.2025 ಕ್ಕೆ ಅನ್ವಯಿಸುವಂತೆ)
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ.

ವಯೋಮಿತಿ: 01.07.2025 ಕ್ಕೆ ಕನಿಷ್ಠ 20 ವರ್ಷ ಹಾಗೂ ಗರಿಷ್ಡ 30 ವರ್ಷಗಳಿಗಿಂತ ಹೆಚ್ಚಿರಬಾರದು. ಅಂದರೆ ಅಭ್ಯರ್ಥಿಗಳು 02.07.1995 ಕ್ಕಿಂತ ಮುಂಚಿತವಾಗಿ ಮತ್ತು 01.07.2005 ರ ನಂತರ ಜನಿಸಿರಬಾರದು. ಸರ್ಕಾರದ ನಿಯಮಾನುಸಾರ ಎಸ್.ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳು, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳಷ್ಟು ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ಅರ್ಜಿ ಶುಲ್ಕ: ಸಾಮಾನ್ಯ, ಒಬಿಸಿ ಹಾಗೂ ಇತರೆ ಅಭ್ಯರ್ಥಿಗಳಿಗೆ: 850. ಪ.ಜಾ, ಪ.ಪಂ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಹಾಗೂ ಮಾಜಿ ಯೋಧರಿಗೆ-175. ನೋಂದಣಿ ನಂತರ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು.
ಶುಲ್ಕಪಾವತಿ: ನೋಂದಣಿ ನಂತರ ಅಭ್ಯರ್ಥಿಗಳು ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು.
ನೆನಪಿಡಿ: ಒಬಿಸಿ ವರ್ಗಕ್ಕೆ ಸೇರಿದ ಆದರೆ ಕೆನೆ ಪದರದ ಅಡಿಯಲ್ಲಿ ಬರುವ ಅಭ್ಯರ್ಥಿಗಳು ಒಬಿಸಿ ಮೀಸಲಾತಿಗೆ ಅರ್ಹರಾಗಿರುವುದಿಲ್ಲ. ಅವರು ಆನ್ಲೈನ್ ಅರ್ಜಿ ನಮೂನೆಯಲ್ಲಿ ತಮ್ಮ ವರ್ಗವನ್ನು ಸಾಮಾನ್ಯ ಎಂದು ಸೂಚಿಸಬೇಕು. ಅಭ್ಯರ್ಥಿಯು ಕಾಲಕಾಲಕ್ಕೆ ಭಾರತ ಸರ್ಕಾರದ ಮಾರ್ಗ ಸೂಚಿಗಳ ಪ್ರಕಾರ ಕೆನೆಪದರಹಿತ (ನಾನ್ ಕ್ರಿಮಿ ಲೇಯರ್) ಷರತ್ತಿನೊಂದಿಗೆ ಒಬಿಸಿ ಪ್ರಮಾಣಪತ್ರವನ್ನು ಹೊಂದಿರಬೇಕು.

ಆರ್ಥಿಕವಾಗಿ ದುರ್ಬಲವಾಗಿರುವ ವರ್ಗ(ಇ ಡಬ್ಲೂ ಎಸ್): ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಅಸ್ತಿತ್ವದಲ್ಲಿರುವ ಮೀಸಲಾತಿ ಯೋಜನೆಯಡಿಯಲ್ಲಿ ಒಳಗೊಳ್ಳದ ವ್ಯಕ್ತಿಗಳು ಅವರ ಕುಟುಂಬದ ಒಟ್ಟು ವಾರ್ಷಿಕ ಆದಾಯ ರೂ. 8.00 ಲಕ್ಷಕ್ಕಿಂತ ಕಡಿಮೆ (ಎಂಟು ಲಕ್ಷ ರೂಪಾಯಿಗಳು ಮಾತ್ರ) ಹೊಂದಿರುವವರು ಮೀಸಲಾತಿಯ ಪ್ರಯೋಜನಕ್ಕಾಗಿ ಇ ಡಬ್ಲೂ ಎಸ್ ಎಂದು ಗುರುತಿಸಬೇಕು.ಆದಾಯ ಎಂದರೆ ಎಲ್ಲಾ ಮೂಲಗಳಿಂದ ಬರುವ ಆದಾಯವನ್ನು ಒಳಗೊಂಡಿರುತ್ತದೆ ಅಂದರೆ ಸಂಬಳ, ಕೃಷಿ, ವ್ಯವಹಾರ, ವೃತ್ತಿ ಇತ್ಯಾದಿ ಮತ್ತು ಅದು ಅರ್ಜಿ ಸಲ್ಲಿಸುವ ವರ್ಷದ ಹಿಂದಿನ ಹಣಕಾಸು ವರ್ಷದ ಆದಾಯವಾಗಿರುತ್ತದೆ.

ಪರೀಕ್ಷಾ ಪ್ರಕ್ರಿಯೆ: ಇದೇ ಅಗಸ್ಟ್ ನಲ್ಲಿ ಪೂರ್ವ ಭಾವಿ ಪರೀಕ್ಷೆ, ಅಕ್ಟೋಬರ್ ನಲ್ಲಿ ಮುಖ್ಯ ಪರೀಕ್ಷೆ ನಡೆಯಲಿದೆ. ಎರಡೂ ಪರೀಕ್ಷೆಗಳು ಆನ್ ಲೈನ್ ನಲ್ಲಿ ನಡೆಯುಲಿವೆ. ವ್ಯಕ್ತಿತ್ವ ಪರೀಕ್ಷೆ (ಹೊಸದಾಗಿ ಸೇರ್ಪಡೆ) ನವೆಂಬರ/ಡಿಸೆಂಬರ್ ನಲ್ಲೂ, ಸಂದರ್ಶನ 2025 ರ ಡಿಸೆಂಬರ್ ಅಥವಾ ಜನವರಿಯಲ್ಲಿ ನಡೆಯುವ ಸಾಧ್ಯತೆ ಇದೆ.

ಪರೀಕ್ಷಾ ಕೇಂದ್ರಗಳು: ರಾಜ್ಯದ 9 ಜಿಲ್ಲಾ ಕೇಂದ್ರಗಳಲ್ಲಿ ಪೂರ್ವ ಭಾವಿ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆ ನಡೆಯಲಿದೆ.

ಪೂರ್ವಭಾವಿ ಪರೀಕ್ಷೆ ಹಾಗೂ ಮುಖ್ಯ ಪರೀಕ್ಷೆ ನಡೆಯುವ ಕೇಂದ್ರ: ಬೆಂಗಳೂರು,ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ- ಧಾರವಾಡ,ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ.

ಪರೀಕ್ಷಾ ಪೂರ್ವ ತರಬೇತಿ: ಐಬಿಪಿಎಸ್ ವತಿಯಿಂದ ಎಸ್.ಸಿ/ಎಸ್.ಟಿ/ಅಲ್ಪ ಸಂಖ್ಯಾತ ವರ್ಗದ ಅಭ್ಯರ್ಥಿಗಳು, ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ ಉಚಿತ ಪರೀಕ್ಷಾ ತರಬೇತಿ ಯನ್ನು ಆನ್ ಲೈನ್ ನಲ್ಲಿ ನೀಡಲಾಗುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸುವಾಗಲೇ ಅಭ್ಯರ್ಥಿಗಳು ಕೋರಿಕೆ ಸಲ್ಲಿಸಬೇಕು.

ಕ್ರೆಡಿಟ್ ಇತಿಹಾಸ:
(i) ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಆರೋಗ್ಯಕರ ಕ್ರೆಡಿಟ್ ಇತಿಹಾಸ ಹೊಂದಿರಬೇಕು. ಬ್ಯಾಂಕ್ ಗೆ ಸೇರುವ ಸಮಯದಲ್ಲಿ ಕನಿಷ್ಠ ಸಿಬಿಲ್ ಸ್ಕೋರ್ ಅಥವಾ ಅದಕ್ಕಿಂತ ಹೆಚ್ಚಿರುವುದನ್ನು ಖಚಿತ ಪಡಿಸಿಕೊಳ್ಳಬೇಕು. ಕನಿಷ್ಠ ಕ್ರೆಡಿಟ್ ಸ್ಕೋರ್ ಭಾಗವಹಿಸುವ ಬ್ಯಾಂಕ್ ಗಳ ನೀತಿಯ ಪ್ರಕಾರ ಇರುತ್ತದೆ. ಕಾಲಕಾಲಕ್ಕೆ ಅವುಗಳನ್ನ ತಿದ್ದುಪಡಿ ಮಾಡಲಾಗುತ್ತದೆ.
(ii)ಹುದ್ದೆಗೆ ಸೇರ್ಪಡೆಗೊಳ್ಳುವ ದಿನಾಂಕದ ಮೊದಲು ಸಿಬಿಲ್ ಸ್ಥಿತಿ ನವೀಕರಿಸಬೇಕು ಅಥವಾ ಸಿಬಿಲ್ ನಲ್ಲಿ ಪ್ರತಿಕೂಲವಾಗಿ ಪ್ರತಿಬಿಂಬಿತವಾಗಿರುವ ಖಾತೆಗಳಿಗೆ ಸಂಬಂಧಿಸಿದಂತೆ ಯಾವುದೇ ಬಾಕಿ ಉಳಿದಿಲ್ಲ ಎಂದು ಸಾಲದಾತರಿಂದ ನಿರಾಪೇಕ್ಷಣಾ ಪತ್ರ ವನ್ನು ಪಡೆಯಬೇಕು. ವಿಫಲವಾದರೆ ಆಫರ್ ಪತ್ರವನ್ನು ಹಿಂಪಡೆಯಲಾಗುತ್ತದೆ /ರದ್ದುಗೊಳಿಸಲಾಗುತ್ತದೆ.

ಗಮನಿಸಿ: ಯಾವುದೇ ಬ್ಯಾಂಕ್ ಖಾತೆಯನ್ನು ಹೊಂದಿರದ ಅಭ್ಯರ್ಥಿಗಳು ಸಿಬಿಲ್ ಸ್ಥಿತಿಯನ್ನು ಒದಗಿಸುವ ಅಗತ್ಯವಿಲ್ಲ.

ಆಫೀಸರ್ ಆಯ್ಕೆಗೆ ನಾಲ್ಕು ಹಂತಗಳ ಪರೀಕ್ಷೆ: ಪೂರ್ವ ಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ,ಮೊದಲ ಬಾರಿಗೆ ವ್ಯಕ್ತಿತ್ವ ಪರೀಕ್ಷೆಯ ಜೊತೆಯಲ್ಲಿ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ.

ಬ್ಯಾಂಕಿನ ಅಧೀಕೃತ ವೆಬ್ ಸೈಟನ್ನೆ ಬಳಸಿ ಅಪ್ಲಾಯ್ ಮಾಡಿ.ಸೈಬರ್ ವಂಚಕರಿಂದ ದೂರವಿರಿ.ಸಾಧ್ಯವಾದಷ್ಟು ಮಾಹಿತಿ ಕ್ರೋಢೀಕರಿಸಿ ನೀಡಲು ಪ್ರಯತ್ನಿಸಿದ್ದೇವೆ.ಆದಾಗ್ಯೂ ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆ ಗಮನಿಸಿ.

ಮಾಹಿತಿ : ಆರ್.ಕೆ.ಬಾಲಚಂದ್ರ. ಲೇಖಕರು, ಬ್ಯಾಂಕಿಂಗ್ ಮತ್ತು ವ್ಯಕ್ತಿತ್ವ ವಿಕಸನ ಹಾಗೂ ಸಾಪ್ಟ್‍ಸ್ಕಿಲ್ ತರಬೇತುದಾರರು ಹಾಗೂ ವೃತ್ತಿ ಮಾರ್ಗದರ್ಶಕರು, ಬೆಂಗಳೂರು. 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮಹದೇವಪೇಟೆ ಮಹಿಳಾ ಸಹಕಾರ ಸಂಘದಲ್ಲಿ ಮಹಿಳಾ ದಿನಾಚರಣೆ : ಸಾಧಕರಿಗೆ ಸನ್ಮಾನ*

ಮಾರ್ಚ್ 13, 2026

*ಸೋಮವಾರಪೇಟೆ : ಮಹಿಳೆಯರು ಶಿಕ್ಷಣ ಪಡೆಯಲು ಕೆ.ಹೆಚ್.ಧನಲಕ್ಷ್ಮೀ ಸಲಹೆ*

ಮಾರ್ಚ್ 13, 2026

*ಅಖಿಲ ಅಮ್ಮ ಕೊಡವ ಸಮಾಜದ ಅಭಿವೃದ್ಧಿಗೆ ಶಾಸಕ ಎ.ಎಸ್.ಪೊನ್ನಣ್ಣರಿಂದ ಚೆಕ್ ವಿತರಣೆ*

ಮಾರ್ಚ್ 13, 2026

*ಸೋಮವಾರಪೇಟೆ : ಮಹಿಳೆಯರು ಶಿಕ್ಷಣ ಪಡೆಯಲು ಕೆ.ಹೆಚ್.ಧನಲಕ್ಷ್ಮೀ ಸಲಹೆ*

ಮಾರ್ಚ್ 13, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಸೋಮವಾರಪೇಟೆ ಮಾ.13 NEWS DESK : ಶಿಕ್ಷಣವೇ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುತ್ತದೆ. ಶಿಕ್ಷಣ ಪಡೆದ ಮಹಿಳೆ ಕುಟುಂಬದ ಅಭಿವೃದ್ಧಿಗೆ…

*ಅಖಿಲ ಅಮ್ಮ ಕೊಡವ ಸಮಾಜದ ಅಭಿವೃದ್ಧಿಗೆ ಶಾಸಕ ಎ.ಎಸ್.ಪೊನ್ನಣ್ಣರಿಂದ ಚೆಕ್ ವಿತರಣೆ*

ಮಾರ್ಚ್ 13, 2026

*ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್‍ಎಸ್‍ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರ : ಆಧುನಿಕತೆಯ ಭರದಲ್ಲಿ ಸಂಸ್ಕಾರಗಳು ಕಣ್ಮರೆಯಾಗುತ್ತಿರುವುದು ವಿಷಾದನೀಯ : ವಿನೋದ್ ಮೂಡಗದ್ದೆ*

ಮಾರ್ಚ್ 13, 2026

*ಗೋಣಿಕೊಪ್ಪ : ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸಿ : ಜಗದೀಶ್ ಜೋಡುಬೀಟಿ*

ಮಾರ್ಚ್ 13, 2026

*ಗೋಣಿಕೊಪ್ಪ ಸೀನಿಯರ್ ಚೇಂಬರ್ “ಇಂಟರ್‌ನ್ಯಾಷನಲ್” ಸಂಸ್ಥೆಗೆ ಪ್ರಶಸ್ತಿಯ ಗರಿ*

ಮಾರ್ಚ್ 13, 2026

*ವನ್ಯಜೀವಿಗಳ ಉಪಟಳ ತಡೆಗೆ ಆಗ್ರಹ : ಅರಣ್ಯ ಭವನಕ್ಕೆ ಬಿಜೆಪಿ ಮುತ್ತಿಗೆ ಯತ್ನ : ಹೆದ್ದಾರಿ ತಡೆದು ಪ್ರತಿಭಟನೆ*

ಮಾರ್ಚ್ 13, 2026

*ಬಸವಣ್ಣ ಹಾಗೂ ಅಕ್ಕಮಹಾದೇವಿ ಕುರಿತು ಅವಹೇಳನ : ಕಿಡಿಗೇಡಿಯ ಬಂಧನಕ್ಕೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಆಗ್ರಹ*

ಮಾರ್ಚ್ 13, 2026

*ಕಾಡಾನೆ ದಾಳಿ : ಸರಕಾರದ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ : ತೇಲಪಂಡ ಶಿವಕುಮಾರ್ ನಾಣಯ್ಯ ಅಸಮಾಧಾನ*

ಮಾರ್ಚ್ 13, 2026

*ಕುಶಾಲನಗರ : ಜೀವನದಲ್ಲಿ ಕಲಿಕೆ ನಿರಂತರ ಪ್ರಕ್ರಿಯೆ : ವನಿತಾ ಚಂದ್ರಮೋಹನ್*

ಮಾರ್ಚ್ 11, 2026

*ಕುಶಾಲನಗರ : ರಾಜಿ ಪ್ರಕರಣಗಳ ಮೂಲಕ ನ್ಯಾಯಾಧೀಶರ ಒತ್ತಡ ಕಡಿಮೆಯಾಗಲಿದೆ : ಹಿರಿಯ ಸಿವಿಲ್ ನ್ಯಾಯಾಧೀಶೆ : ಶುಭ*

ಮಾರ್ಚ್ 11, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.