
ನಾಪೋಕ್ಲು ಡಿ.29 NEWS DESK : ಬಲ್ಲಮಾವಟಿ ಗ್ರಾಮದ ಕೃಷಿಕ ಚೀಯಕಪೂವಂಡ ಮಿಥುನ್ ಚಂಗಪ್ಪ ಅವರ ಕೃಷಿ ಚಟುವಟಿಕೆಯನ್ನುಗುರುತಿಸಿ ಕೃಷಿ ಜಾಗರಣ್ ವತಿಯಿಂದ ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಪ್ರಶಸ್ತಿ-2025ಅನ್ನು ನೀಡಿ ಗೌರವಿಸಲಾಯಿತು. ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಮಿಥುನ್ ಚಂಗಪ್ಪ ಅವರು ಈಪ್ರಶಸ್ತಿಯನ್ನು ಮಾಜಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ನಾಪೋಕ್ಲುವಿನ ಫಾರ್ಮರ್ ಪ್ರೊಡ್ಯೂಸರ್ ಆರ್ಗನೈಸೇಷನ್ ಮಿಥುನ್ ಅವರ ಹೆಸರನ್ನು ಪ್ರಶಸ್ತಿಗೆ ಶಿಫಾರಸ್ಸು ಮಾಡಿತ್ತು.
ವರದಿ : ದುಗ್ಗಳ ಸದಾನಂದ.









