
ಸುಂಟಿಕೊಪ್ಪ ಡಿ.26 NEWS DESK : ಸುಂಟಿಕೊಪ್ಪದ ಕೂರ್ಗ್ ಚೆಸ್ ಕ್ಲಬ್ ವತಿಯಿಂದ ಡಿ.31 ರಂದು ಸುಂಟಿಕೊಪ್ಪದಲ್ಲಿ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿ ನಡೆಯಲಿದೆ. ಅಂದು ಬೆಳಿಗ್ಗೆ 9.30 ಗಂಟೆಗೆ ಶ್ರೀ ಗುಂಡುಗುಟ್ಟಿ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಪಂದ್ಯಾವಳಿ ನಡೆಯಲಿದೆ. 7 ರಿಂದ 14 ವರ್ಷ ಪ್ರಾಯದ ಮಕ್ಕಳ ವಿಭಾಗದಲ್ಲಿ ಪ್ರಥಮ ಬಹುಮಾನ ರೂ. 3000, ದ್ವಿತೀಯ ಬಹುಮಾನ ರೂ. 2000, ತೃತೀಯ ಬಹುಮಾನ ರೂ.1000 ನಗದು ಬಹುಮಾನ ಹಾಗೂ ಐವರು ಸ್ಪರ್ಧೆಗಳಿಗೆ ಆಕರ್ಷಕ ಟ್ರೋಫಿ ನೀಡಲಾಗುವುದು. ಈ ವಿಭಾಗದ ನೋಂದಣಿ ಶುಲ್ಕ ರೂ. 300 ಆಗಿದೆ. 15 ವರ್ಷ ಮೇಲ್ಪಟ್ಟವರ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರೂ.5000, ದ್ವಿತೀಯ ಬಹುಮಾನ ರೂ.3000, ತೃತೀಯ ಬಹುಮಾನ ರೂ.1500 ನಗದು ಬಹುಮಾನ ಹಾಗೂ ಐವರು ಸ್ಪರ್ಧಿಗಳಿಗೆ ಆಕರ್ಷಕ ಟ್ರೋಫಿ ಸಿಗಲಿದೆ. ಈ ವಿಭಾಗದ ನೋಂದಣಿ ಶುಲ್ಕ ರೂ. 500 ಆಗಿದ್ದು, ಮೊದಲು ಹೆಸರು ನೋಂದಾಯಿಸಿಕೊಳ್ಳುವ 100 ಸ್ಪರ್ಧಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಡಿ.30 ರ ರಾತ್ರಿ 9 ಗಂಟೆ ಒಳಗೆ ಹೆಸರನ್ನು ನೋಂದಣಿ ಮಾಡಿಕ್ಕೊಳ್ಳಬಹುದಾಗಿದೆ ಎಂದು ಕ್ಲಬ್‍ನ ಯೋಜನಾ ನಿರ್ದೇಶಕರುಗಳಾದ ಎಸ್.ವೇಲು, ಒ.ಜಿ.ಮಣಿಕಂಠ (ಮಣಿ), ಪಂದ್ಯಾವಳಿಯ ನಿರ್ದೇಶಕರಾದ ತಿರುಮೂರ್ತಿ ಹಾಗೂ ಸಂಯೋಜಕರಾದ ಎಂ.ಭಾಸ್ಕರ್ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಹಾಗೂ ಹೆಸರು ಎಸ್. ವೇಲು 9008191021, ಮಣಿಕಂಠ (ಮಣಿ) 9481770658, ತಿರುಮೂರ್ತಿ 8762965120, ಎಂ.ಭಾಸ್ಕರ್ 9663583444, ಬಿ.ಬಿ.ಸ್ಮಿತಾ 8861059410, ನೊಂದಣಿಗೆ ಸಂಪರ್ಕಿಸುವಂತೆ ಕೋರಿಕೊಂಡಿದ್ದಾರೆ.








