
ನಾಪೋಕ್ಲು ಜ.7 NEWS DESK : ನಾಪೋಕ್ಲು ಪೊಲೀಸ್ ಠಾಣೆಯ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಪಟ್ಟಣದ ಮುಖ್ಯ ಬೀದಿಯಲ್ಲಿ ಜಾಥಾ ಮತ್ತು ಜಾಗೃತಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಬಸ್ ನಿಲ್ದಾಣದಲ್ಲಿ ಠಾಣೆಯ ಅಧಿಕಾರಿ ರಾಘವೇಂದ್ರ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ರಸ್ತೆ ಸುರಕ್ಷತೆ, ಸಂಚಾರ ಕಾನೂನು, ರಸ್ತೆ ಅಫಘಾತದ ಸಂದರ್ಭ ನಾಗರಿಕ ಜವಾಬ್ದಾರಿ ಮುಂತಾದ ವಿಷಯಗಳ ಕುರಿತು ಜಾಗೃತಿ ಮೂಡಿಸಿದರು. ಇಲ್ಲಿಯ ಸಂತ ಮೈದಾನದಿಂದ ಪ್ರಾರಂಭಗೊಂಡು ಜಾಥಾದಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಶಿಕ್ಷಕರು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.









