
ಮಡಿಕೇರಿ ಜ.7 NEWS DESK : ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ವತಿಯಿಂದ ಕೂಡಿಗೆಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಜಾಥಾ ಮತ್ತು ಜಾಗೃತಿ ಕಾರ್ಯ ನಡೆಯಿತು. ಈ ಸಂದರ್ಭ ಠಾಣೆಯ ಅಧಿಕಾರಿಗಳು ಅಂಜಲ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ಕೂಡಿಗೆ ಸರ್ಕಲ್ ನಲ್ಲಿ ಸಭೆ ನಡೆಸಿ ರಸ್ತೆ ಸುರಕ್ಷತೆ, ಸಂಚಾರಿ ನಿಯಮಗಳ ಪಾಲಿಸುವ ಕುರಿತು, ರಸ್ತೆ ಅಪಘಾತದ ಸಂದರ್ಭ ನಾಗರಿಕ ಜವಾಬ್ದಾರಿ ಮುಂತಾದ ವಿಷಯಗಳ ಕುರಿತು ಜಾಗೃತಿ ಮೂಡಿಸಿದರು.









