
ಸೋಮವಾರಪೇಟೆ ಜ.8 NEWS DESK : ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಪಿಗೆಕೊಲ್ಲಿ ಗ್ರಾಮದ ಕಾಫಿ ಬೆಳೆಗಾರರಾದ ಡಿ.ಎಸ್. ಪೊನ್ನಪ್ಪ(82) ಹೃದಯಾಘಾತದಿಂದ ನಿಧನರಾದರು. ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ, ಐಗೂರು ಗ್ರಾಮ ಪಂಚಾಯಿತಿ, ಆರ್‍ಎಂಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಸ್ವ ಗ್ರಾಮದಲ್ಲಿ ನಡೆಯಿತು.








