
ಮಡಿಕೇರಿ ಜ.10 NEWS DESK : ದೈವಜ್ಞ ಬ್ರಾಹ್ಮಣ ಸಮಾಜದ ವತಿಯಿಂದ ಮಡಿಕೇರಿಯಲ್ಲಿ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮೀಜಿ ಹಾಗೂ ಶ್ರೀಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿಗಳ ದೈವಜ್ಞ ದರ್ಶನ ಕಾರ್ಯಕ್ರಮ ನಡೆಯಿತು. ಶ್ರೀಗಳ ಪುರಪ್ರವೇಶದ ನಂತರ ಪೂರ್ಣ ಕುಂಭ ಮೆರವಣಿಗೆ ನಗರದ ಹಳೇ ಖಾಸಗಿ ಬಸ್ ನಿಲ್ದಾಣದಿಂದ ಚೌಡೇಶ್ವರಿ ದೇವಾಲಯದವರೆಗೆ ಸಾಗಿತು. ನಂತರ ಶ್ರೀಗಳ ಪಾದುಕಾ ಪೂಜೆ, ಶ್ರೀಗಳಿಂದ ಆಶೀರ್ವಚನ, ಫುಲಪುಷ್ಪ ಸಮರ್ಪಣೆ, ಫಲ ಮಂತ್ರಾಕ್ಷತೆ ನೆರವೇರಿತು. ಸ್ವಾಮೀಜಿಗಳ ಭವ್ಯ ಸ್ವಾಗತಕ್ಕಾಗಿ ನಗರದ ಮಹದೇವಪೇಟೆ ಹಾಗೂ ಶ್ರೀಚೌಡೇಶ್ವರಿ ದೇವಾಲಯವನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಆಕರ್ಷಣೀಯವಾಗಿ ಅಲಂಕಾರಗೊಳಿಸಲಾಗಿತ್ತು. ದೈವಜ್ಞ ಬ್ರಾಹ್ಮಣ ಸಮಾಜದ ಬಂಧುಗಳು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.









