Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಚೇರಂಬಾಣೆ : ಮಕರ ಸಂಕ್ರಾಂತಿ ಸಮೃದ್ಧಿಯ ಸಂಕೇತ : ಕೂಡಕಂಡಿ ಸೋನಿ ಸುದೀಪ್
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಚೇರಂಬಾಣೆ : ಮಕರ ಸಂಕ್ರಾಂತಿ ಸಮೃದ್ಧಿಯ ಸಂಕೇತ : ಕೂಡಕಂಡಿ ಸೋನಿ ಸುದೀಪ್

ಜನವರಿ 16, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ನಾಪೋಕ್ಲು ಜ.16 NEWS DESK : ಮಕರ ಸಂಕ್ರಾಂತಿ ಭೂಮಿಗೂ ರೈತನಿಗೂ ಗೋವಿಗೂ ಇರುವ ಅವಿನಾಭಾವ ಸಂಬಂಧವನ್ನು ಸೂಚಿಸುವ ಹಬ್ಬ ಎಂದು ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ನಿರ್ದೇಶಕಿ ಕೂಡಕಂಡಿ ಸೋನಿ ಸುದೀಪ್ ಅವರು ಹೇಳಿದರು. ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ವತಿಯಿಂದ ಚೇರಂಬಾಣೆ ಗೌಡ ಸಮಾಜದ ಆಯೋಜಿಸಿದ ಮಕರ ಸಂಕ್ರಾಂತಿ ಹಬ್ಬ ಹಾಗೂ ಒಕ್ಕೂಟದ 2026ನೇ ವರ್ಷದ ಮಾಸಿಕ ಸಭೆಯಲ್ಲಿ ಅವರು ಭಾಗವಹಿಸಿ ಸಂಕ್ರಮಣದ ಆಚರಣೆ ಮತ್ತು ಪದ್ಧತಿ ಪರಂಪರೆ ಬಗ್ಗೆ ಬೆಳಕು ಚೆಲ್ಲಿದರು. ರೈತರಿಗೆ ಇದು ಸುಗ್ಗಿ ಹಬ್ಬ. ದವಸ ಧಾನ್ಯಗಳು ಮನೆ ತುಂಬಿ ಸಂಭ್ರಮಿಸುವ ಕಾಲ. ಆದ್ದರಿಂದ ಮಾನವರಿಗೂ ಪ್ರಾಣಿಗಳಿಗೂ ಯಥೇಚ್ಛವಾಗಿ ದಾನ ನೀಡುತ್ತಾ ವರ್ಷವಿಡೀ ರೈತನಿಗೆ ಹೆಗಲುಕೊಟ್ಟ ಗೋವನ್ನು ಪೂಜಿಸುತ್ತಾ ಅವುಗಳ ದೇಹದಲ್ಲಿ ಕ್ರಿಮಿಕೀಟಗಳು ಬಾಧಿಸದಂತೆ ಅವುಗಳನ್ನು ಕಿಚ್ಚು ಹಾಯಿಸಿ ಸಂರಕ್ಷಣೆ ಮಾಡುವಂತಹ ಜಾನಪದ ಹಬ್ಬವೂ ಸಂಕ್ರಾಂತಿ ಎಂದರು. ಮಕರ ಸಂಕ್ರಾಂತಿಯನ್ನು ದೇಶದ ಎಲ್ಲೆಡೆಯಲ್ಲೂ ನಾನಾ ಹೆಸರುಗಳಿಂದ ಆಚರಿಸುತ್ತಾರೆ. ಒಟ್ಟಿನಲ್ಲಿ ಸಂಕ್ರಾಂತಿ ರೈತರ ಬಾಳಿನಲ್ಲಿ ಸಂಭ್ರಮದ ಸುಗ್ಗಿ ಹಬ್ಬ ಸಮೃದ್ಧಿಯ ಸಂಕೇತದ ಹಬ್ಬ ಎಂದು ಹೇಳಿದರು. ಮಹಿಳಾ ಒಕ್ಕೂಟದ ಕಾರ್ಯದರ್ಶಿ ಕೇಕಡ ಪೂಜಾ ನಾಗೇಂದ್ರ ಮಾತನಾಡಿ ಮಕರ ಸಂಕ್ರಾಂತಿ ಸೂರ್ಯನನ್ನು ಪೂಜಿಸುವ ಹಬ್ಬ ಸೂರ್ಯ ತನ್ನ ಪಥವನ್ನು ಉತ್ತರಾಯಣಕ್ಕೆ ಬದಲಿಸುವ ಪುಣ್ಯಕಾಲ. ಸಂಕ್ರಾಂತಿ ಸಮಯದಲ್ಲಿ ಅತಿ ಹೆಚ್ಚು ಚಳಿ ಇರುವ ಕಾರಣ ನಮ್ಮ ದೇಹದಲ್ಲಿ ಎಣ್ಣೆಯ ಅಂಶ ಕಡಿಮೆಯಾಗಿ ಚರ್ಮ ಬಿಗಿ ಯಾಗಿರುತ್ತದೆ. ಈ ಸಂದರ್ಭದಲ್ಲಿ ನಾವು ಸೇವಿಸುವ ಎಳ್ಳು ಬೆಲ್ಲದಿಂದ ನಮ್ಮ ಚರ್ಮಕ್ಕೆ ಎಣ್ಣೆ ಅಂಶ ಕಬ್ಬಿಣಾಂಶ ಯಥೇಚ್ಛವಾಗಿ ದೊರಕಿ ಚರ್ಮ ಕಾಂತಿ ಗೊಳ್ಳುತ್ತದೆ ಆರೋಗ್ಯ ವೃದ್ಧಿಯಾಗುತ್ತದೆ ಎಂದರು. ಇದಲ್ಲದೆ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಸೂರ್ಯ ದೇವರಿಗೆ ಪ್ರಿಯವಾದ ಎಳ್ಳನ್ನು ಅರ್ಪಿಸಲಾಗುವುದು ಎಂದರು. ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್ ಅವರು ಅಧ್ಯಕ್ಷತೆ ವಹಿಸಿ ದಿನದ ಮಹತ್ವದ ಬಗ್ಗೆ ಮಾತನಾಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಕೂರನ ಸುಶೀಲ ಅಪ್ಪಾಜಿ ಕೋಶಾಧಿಕಾರಿ ಕೊಡಪಾಲು ತೀರ್ಥ ಗಣಪತಿ, ಬೈಮನ ಜ್ಯೋತಿ ತಿಮ್ಮಯ್ಯ, ನಿವೃತ್ತ ಶಿಕ್ಷಕಿ ಪಾಣ ತಲೆ ತಾರಾಮಣಿ ಸೇರಿದಂತೆ ಮುಖ್ಯ ಪಟ್ಟವರು ಭಾಗವಹಿಸಿದ್ದರು. ಜಾನಪದ ಕೃಷಿ ಪರಿಕರಗಳು ದವಸ ಧಾನ್ಯ ಕಬ್ಬು ಸೇರಿಸಿ ಹಾಲು ಉಕ್ಕಿಸುವ ಶುಭ ಸಂಕೇತ ವನ್ನು ಸೂಚಿಸುವ ಸಂಭ್ರಮದ ಹಬ್ಬದಂದು ದೀಪ ಬೆಳಗಿ ಧಾನ್ಯಲಕ್ಷ್ಮಿಗೆ ಪೂಜೆಸಲ್ಲಿಸಿ ಎಳ್ಳು ಬೆಲ್ಲವನ್ನು ಪರಸ್ಪರ ವಿನಿಮಯ ಮಾಡಿಕೊಂಡು ಒಕ್ಕೂಟದ ಸದಸ್ಯರು ಸಂಕ್ರಾಂತಿಯ ಸಂಭ್ರಮವನ್ನು ಆಚರಿಸಿದರು. ಸಮಿತಿ ಸದಸ್ಯರು ಸುಗ್ಗಿ ಹಾಡುಗಳನ್ನು ಹಾಡಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಒಕ್ಕೂಟದ ಸದಸ್ಯರಾದ ತಳೂರು ಮಮತಾ ಹಿತೇಶ್ ಮತ್ತು ಗುಡ್ಡೆಮನೆ ಲೀನಾ ಮಹೇಶ್ ಅವರು ಮಹಿಳಾ ಹಗ್ಗ ಜಗ್ಗಾಟದ ತಂಡಕ್ಕೆ ಸಮವಸ್ತ್ರವನ್ನು ಉಪಾಧ್ಯಕ್ಷರಾದ ಹೊಸೊಕ್ಲು ಲತಾ ಮೊಣ್ಣಪ್ಪ ಸಮವಸ್ತ್ರವನ್ನು ಹಗ್ಗ ಜಗ್ಗಾಟ ತಂಡದ ನಾಯಕಿ ಸಿರಕಜೆ ಹಿತಾ ತೀರ್ಥ ಕುಮಾರ್ ಅವರಿಗೆ ಹಸ್ತಾಂತರಿಸಿದರು.

ವರದಿ : ದುಗ್ಗಳ ಸದಾನಂದ.

Follow us Follow us
Share. WhatsApp Facebook Twitter Email Telegram Copy Link

Related Posts

ನ.11ರಂದು ಕಡಂಗದಲ್ಲಿ ಸಿಎನ್‌ಸಿಯಿಂದ 9ನೇ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ

ನವೆಂಬರ್ 7, 2026

ನ.11ರಿಂದ ಕೊಡಗು ಜಿಲ್ಲೆಯಲ್ಲಿ ಖಾಸಗಿ ಬಸ್ ಪ್ರಯಾಣ ದರ ಶೇ.15ರಿಂದ 20ರಷ್ಟು ಹೆಚ್ಚಳ

ನವೆಂಬರ್ 7, 2026

ನ.8ರಂದು ನಾಪೋಕ್ಲು ಕೊಡವ ಸಮಾಜದ 26ನೇ ವಾರ್ಷಿಕ ಮಹಾಸಭೆ

ನವೆಂಬರ್ 7, 2026

ನ.11ರಿಂದ ಕೊಡಗು ಜಿಲ್ಲೆಯಲ್ಲಿ ಖಾಸಗಿ ಬಸ್ ಪ್ರಯಾಣ ದರ ಶೇ.15ರಿಂದ 20ರಷ್ಟು ಹೆಚ್ಚಳ

ನವೆಂಬರ್ 7, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ನ.7: ಇಂಧನ ಹಾಗೂ ವಾಹನಗಳ ಬಿಡಿಭಾಗಗಳ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ವ್ಯಾಪ್ತಿಯ ಖಾಸಗಿ…

ನ.8ರಂದು ನಾಪೋಕ್ಲು ಕೊಡವ ಸಮಾಜದ 26ನೇ ವಾರ್ಷಿಕ ಮಹಾಸಭೆ

ನವೆಂಬರ್ 7, 2026

ನ.14ರಿಂದ ಶ್ರೀ ಕ್ಷೇತ್ರ ಕಬ್ಬಳ್ಳಿ ಬಸವೇಶ್ವರ ಸ್ವಾಮಿ ದೇವಸ್ಥಾನದ ಲೋಕಾರ್ಪಣೆ ಹಾಗೂ ಮಹಾಕುಂಭಾಭಿಷೇಕ ಮಹೋತ್ಸವ

ನವೆಂಬರ್ 7, 2026

ರಸ್ತೆ ಅಪಘಾತ ತಡೆಗೆ ಕಠಿಣ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್

ನವೆಂಬರ್ 7, 2026

ಸುಂಟಿಕೊಪ್ಪಕ್ಕೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧ: ಪಿ.ಎಫ್. ಸೆಬಾಸ್ಟಿನ್

ನವೆಂಬರ್ 7, 2026

ಸೋಮವಾರಪೇಟೆ ಮಾಸ್ಟರ್ ಪ್ಲಾನ್ ರಚನೆಗೆ ಸಾರ್ವಜನಿಕರಿಂದ ಸಲಹೆ ಆಹ್ವಾನ

ನವೆಂಬರ್ 7, 2026

ನಾಂಗಾಲ ಗ್ರಾಮದಲ್ಲಿ ಮಹಿಳಾ ಸಮಾಜದ ನೂತನ ಕಟ್ಟಡಕ್ಕೆ ಭೂಮಿಪೂಜೆ

ನವೆಂಬರ್ 7, 2026

ಕುಶಾಲನಗರದಲ್ಲಿ ಕರ್ಕಶ ಡಿಜೆ ಸೌಂಡ್: ಮೂರು ಪ್ರವಾಸಿ ಬಸ್‌ಗಳಿಗೆ ದಂಡ

ನವೆಂಬರ್ 7, 2026

ಕ.ಸಾ.ಪ.ವತಿಯಿಂದ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗಂಗಮ್ಮ ರಾಚಪ್ಪ ದತ್ತಿನಿಧಿ ಉಪನ್ಯಾಸ; ಕನ್ನಡ ಸಾಹಿತ್ಯಕ್ಕೆ ಕುವೆಂಪು ಅವರ ಕೊಡುಗೆ ಅನನ್ಯ: ಬಿ.ಬಿ.ಹೇಮಲತಾ ಬಣ್ಣನೆ

ನವೆಂಬರ್ 7, 2026

ಕೃಷಿ ಪದ್ಧತಿಗೆ ವಿರುದ್ಧವಾಗಿ ಕಟ್ಟಡಗಳ ನಿರ್ಮಾಣ: ಕೊಡಗಿನ ಭೌಗೋಳಿಕ ಚಿತ್ರಣವೇ ಬದಲು; ಕೃಷಿ ಭೂಮಿಗಳ ಮಾರಾಟದಿಂದ ಪರಿಸರಕ್ಕೆ ಧಕ್ಕೆ: ಅಮ್ಮತ್ತಿ ರೈತ ಸಂಘ ಆತಂಕ

ನವೆಂಬರ್ 7, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.