Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಹೆಚ್ಚುತ್ತಿರುವ ಸೈಬರ್ ಕ್ರೈಂ : ಅನುಮಾನಾಸ್ಪದವಾದ ಯಾವುದೇ ಲಿಂಕ್‍ಗಳನ್ನು ತೆರೆಯಬೇಡಿ : ‘1930’ಗೆ ಕರೆ ಮಾಡಿ : ಕೊಡಗು ಎಸ್‍ಪಿ ಮನವಿ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ ಪೊಲೀಸ್ ನ್ಯೂಸ್

ಹೆಚ್ಚುತ್ತಿರುವ ಸೈಬರ್ ಕ್ರೈಂ : ಅನುಮಾನಾಸ್ಪದವಾದ ಯಾವುದೇ ಲಿಂಕ್‍ಗಳನ್ನು ತೆರೆಯಬೇಡಿ : ‘1930’ಗೆ ಕರೆ ಮಾಡಿ : ಕೊಡಗು ಎಸ್‍ಪಿ ಮನವಿ

ಜನವರಿ 16, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
SM Fitness Advertisement

ಮಡಿಕೇರಿ ಜ.16 NEWS DESK : ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅನುಮಾನಾಸ್ಪದವಾದ ಯಾವುದೇ ಲಿಂಕ್‍ಗಳು ತಮ್ಮ ಇ-ಮೇಲ್, ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಲ್ಲಿ ಅದನ್ನು ತೆರೆಯುವ ಪ್ರಯತ್ನ ಮಾಡಬೇಡಿ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಮನವಿ ಮಾಡಿದ್ದಾರೆ. ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರನ್ನು ವಂಚಿಸುವ, ಕೆಟ್ಟ ಸಂದೇಶಗಳನ್ನು ಪಸರಿಸುವ ‘ಸೈಬರ್ ಕ್ರೈಂ’ಗಳ ಕುರಿತು ಜನಸಾಮಾನ್ಯರು ಜಾಗೃತರಾಗಬೇಕು ಎಂದರು. ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕ ಅಶ್ಲೀಲ ಸಂದೇಶವನ್ನು ಹರಡಿರುವ ಬಗ್ಗೆ ಇದೇ ಜ.13 ರಂದು ಸೈಬರ್ ಕ್ರೈಂ ವಿಭಾಗದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಮಾಹಿತಿಗಳನ್ನು ಕಲೆ ಹಾಕಿ, ಪರಿಶೀಲಿಸುವ ಕಾರ್ಯ ನಡೆದಿರುವುದಾಗಿ ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚುತ್ತಿವೆ. ಸಾಮಾಜಿಕ ಜಾಲತಾಣದ ವಿವಿಧ ಮಾಧ್ಯಮಗಳ ಮೂಲಕ ವಂಚನೆಯ ಸಂಚನ್ನು ದುಷ್ಕರ್ಮಿಗಳು ರೂಪಿಸಿ, ಜನ ಸಾಮಾನ್ಯರನ್ನು ಆಮಿಷಗಳಿಗೆ ಒಳಪಡಿಸುತ್ತಿದ್ದಾರೆ. ಒಂದು ವೇಳೆ ಅರಿಯದೆ ಇಂತಹ ವಂಚಕರ ಜಾಲದಲ್ಲಿ ಸಿಲುಕಿದಲ್ಲಿ ಆದಷ್ಟು ಶೀಘ್ರ, ಪೊಲೀಸ್ ಇಲಾಖೆಗೆ ಸೈಬರ್ ಕ್ರೈಂ ಸಹಾಯವಾಣಿ ‘1930’ಗೆ ಕರೆ ಮಾಡಿ ದೂರು ದಾಖಲಿಸುವಂತೆ ಕೋರಿದರು. *ಬೆಳೆಗಾರರ ಸ್ಪಂದನ* ಕಾಫಿ ಕೊಯ್ಲಿನ ಈ ದಿನಗಳಲ್ಲಿ ಜಿಲ್ಲೆಗೆ ಹೊರ ರಾಜ್ಯದಿಂದ ಸಾಕಷ್ಟು ಕಾರ್ಮಿಕರು ಆಗಮಿಸುತ್ತಿದ್ದಾರೆ. ಯಾವುದೇ ತೋಟ ಮಾಲೀಕರು ತಮ್ಮ ತೋಟ ಕೆಲಸಕ್ಕೆಂದು ಕರೆ ತರುವ ಕಾರ್ಮಿಕರ ಮಾಹಿತಿಯನ್ನು ನೀಡುವಂತೆ ಜಿಲ್ಲಾ ಪೊಲೀಸ್ ಇಲಾಖೆ ಮಾಡಿಕೊಂಡ ಮನವಿಗೆ ಪೂರಕ ಸ್ಪಂದನ ದೊರಕಿದೆ ಎಂದರು. ಕಾಫಿ ತೋಟಗಳಲ್ಲಿ ಕೆಲಸಕ್ಕೆ ಬರುವ ಕಾರ್ಮಿಕರ ಬಗ್ಗೆ ಮಾಲೀಕರು ಮೊಟ್ಟ ಮೊದಲಿಗೆ ಮಾಹಿತಿಯನ್ನು ಕಲೆ ಹಾಕಬೇಕೆಂದು ಮನವಿ ಮಾಡಿದ ಎಸ್‍ಪಿ, ಪ್ರಸ್ತುತ ತಮಗೆ ಕಾರ್ಮಿಕರ ಬಗ್ಗೆ ದೊರಕಿರುವ ಮಾಹಿತಿಗಳನ್ನು ಪರಿಶೀಲನೆಗೆ ಒಳಪಡಿಸುತ್ತಿರುವುದಾಗಿ ತಿಳಿಸಿದರು. ಇಲ್ಲಿಯವರೆಗೆ ‘ಬಾಂಗ್ಲಾ ವಲಸಿಗ’ರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲವೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. *ಪ್ರಕರಣ ದಾಖಲು* ಕಳೆದ ಡಿಸೆಂಬರ್‍ನಲ್ಲಿ ಮಡಿಕೇರಿಯಲ್ಲಿ ಬೆಂಗಳೂರಿನ ಮಹದೇವ್ ಎಂಬುವವರ ಮೇಲೆ ನಡೆದ ಹಲ್ಲೆ, ಡಕಾಯಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯ ವಿರುದ್ಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಪ್ರವೀಣ್ ಮತ್ತು ಸುದರ್ಶನ್ ಸೇರಿದಂತೆ ಮಡಿಕೇರಿಯ ಸುಜಿತ್, ರಚನ, ಮಾಲತಿ, ರವಿ ಮತ್ತು ದರ್ಶನ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿರುವುದಾಗಿ ಎಸ್‍ಪಿ ಬಿಂದುಮಣಿ ಮಾಹಿತಿ ನೀಡಿದರು.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

ಗಣೇಶೋತ್ಸವ ಸ್ವಾತಂತ್ರ್ಯ ಸಂಗ್ರಾಮದ ಪ್ರತೀಕ : ಸಂಸದ ಯದುವೀರ್ ಒಡೆಯರ್

ಅಕ್ಟೋಬರ್ 11, 2026

ಮಳೆ ಕೊರತೆ ನೀಗಿ ನಾಡಿನಲ್ಲಿ ಸಮೃದ್ಧಿ ನೆಲೆಸಲಿ : ಸಚಿವ ಪಿ.ಎಂ.ನರೇಂದ್ರ ಸ್ವಾಮಿ

ಅಕ್ಟೋಬರ್ 11, 2026

ಗೋಣಿಕೊಪ್ಪ ದಸರಾ ಜನೋತ್ಸವ ಉದ್ಘಾಟಿಸಿದ ಸಚಿವ ನರೇಂದ್ರ ಸ್ವಾಮಿ

ಅಕ್ಟೋಬರ್ 11, 2026

ಮಳೆ ಕೊರತೆ ನೀಗಿ ನಾಡಿನಲ್ಲಿ ಸಮೃದ್ಧಿ ನೆಲೆಸಲಿ : ಸಚಿವ ಪಿ.ಎಂ.ನರೇಂದ್ರ ಸ್ವಾಮಿ

ಅಕ್ಟೋಬರ್ 11, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಅ.11 NEWS DESK  : ಮಡಿಕೇರಿ ನಗರದಲ್ಲಿ ನಾಲ್ಕು ಶಕ್ತಿ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ದಸರಾ…

ಗೋಣಿಕೊಪ್ಪ ದಸರಾ ಜನೋತ್ಸವ ಉದ್ಘಾಟಿಸಿದ ಸಚಿವ ನರೇಂದ್ರ ಸ್ವಾಮಿ

ಅಕ್ಟೋಬರ್ 11, 2026

ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ರೂ.10 ಕೋಟಿ ವೆಚ್ಚದ ಅತ್ಯಾಧುನಿಕ ಹೃದ್ರೋಗ ಚಿಕಿತ್ಸಾ ಘಟಕ : ನವೆಂಬರ್‌ನಲ್ಲಿ ಸೇವೆ ಆರಂಭಿಸಲು ಸಿದ್ಧತೆ : ಶಾಸಕ ಡಾ. ಮಂತರ್ ಗೌಡ ಪರಿಶೀಲನೆ

ಅಕ್ಟೋಬರ್ 11, 2026

ಮಡಿಕೇರಿ ದಸರಾ ಕರಗೋತ್ಸವಕ್ಕೆ ಚಾಲನೆ: ನಾಲ್ಕು ಶಕ್ತಿ ದೇವತೆಗಳ ಕರಗಗಳ ನಗರ ಪ್ರದಕ್ಷಿಣೆ ಆರಂಭ

ಅಕ್ಟೋಬರ್ 11, 2026

ಸಾರಿಗೆ ಇಲಾಖೆಯಲ್ಲಿ ಮತ್ತೊಂದು ಸಂಕಷ್ಟ: ಟಿಕೆಟ್ ರೋಲ್ ಕೊರತೆ, 3–4 ಪ್ರಯಾಣಿಕರಿಗೆ ಒಂದೇ ಟಿಕೆಟ್!

ಅಕ್ಟೋಬರ್ 11, 2026

ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್‌ನ್ಯೂಸ್‌: ದಾಖಲೆ ಮರುಪರಿಶೀಲನೆಗೆ ಅ.31ರವರೆಗೆ ಗಡುವು ವಿಸ್ತರಣೆ

ಅಕ್ಟೋಬರ್ 11, 2026

ಹಿಂದೂ ಗೆಳೆಯರ ಬಳಗದ ಅಧ್ಯಕ್ಷರಾಗಿ ಟಿ.ವಿ. ಪ್ರಕಾಶ್ ನೇಮಕ

ಅಕ್ಟೋಬರ್ 11, 2026

ಕೊಡಗರಹಳ್ಳಿ, ಕಂಬಿಬಾಣೆ ಹಾಗೂ ಸುಂಟಿಕೊಪ್ಪದಲ್ಲಿ ನವರಾತ್ರಿ ಉತ್ಸವದ ಸಂಭ್ರಮ

ಅಕ್ಟೋಬರ್ 11, 2026

ಭಾಗಮಂಡಲ–ತಲಕಾವೇರಿ ಮಾರ್ಗದಲ್ಲಿ ಬಸ್ ಸೇವೆ ಆರಂಭ: ಶಾಸಕರಿಗೆ ಗ್ರಾಮಸ್ಥರ ಅಭಿನಂದನೆ; ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಲವು ವರ್ಷಗಳ ಬೇಡಿಕೆಗೆ ಸ್ಪಂದನೆ

ಅಕ್ಟೋಬರ್ 11, 2026

ಕೊಡಗು ಗೌಡ ವಿದ್ಯಾ ಸಂಘದಿಂದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ : ಯುವ ಸಮೂಹ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ರಾಯಭಾರಿಗಳಾಗಬೇಕು : ಆನಂದ ಕರಂದ್ಲಾಜೆ ಕರೆ

ಅಕ್ಟೋಬರ್ 11, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.