Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ವಿರಾಜಪೇಟೆಯ ಶಿವಕೇರಿಯಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ವರಮಹಾಲಕ್ಷ್ಮಿ ಪೂಜಾ ಮಹೋತ್ಸವ*
  • *ಕಾನೂನು ಸುವ್ಯವಸ್ಥೆ ನಿರ್ವಹಣೆಯಲ್ಲಿ ಉತ್ತಮ ಕರ್ತವ್ಯ : ಆರು ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ*
  • ಗೋಣಿಕೊಪ್ಪ ದಸರಾಕ್ಕೆ ₹1 ಕೋಟಿ ಅನುದಾನ : ದಶಮಂಟಪಗಳಿಗೆ ಹೆಚ್ಚಿನ ನೆರವಿನ ಭರವಸೆ
  • *ವಿರಾಜಪೇಟೆ ಬಿಲ್ಲವ ಸೇವಾ ಸಂಘದಿಂದ ನಾರಾಯಣ ಗುರು ಜಯಂತಿ*
  • *ಮಾನವ ವನ್ಯಜೀವಿ ಸಂಘರ್ಷ : ಸಾರ್ವಜನಿಕರ ಜತೆ ಸಮಾಲೋಚಿಸಿದ ಅರಣ್ಯ ಸಚಿವರು*
  • *ಕಸ್ತೂರಿ ರಂಗನ್ ವರದಿ : ರಾಜ್ಯ ಸರಕಾರ ರಾಜಕೀಯ ಮಾಡುವುದನ್ನು ಮೊದಲು ನಿಲ್ಲಿಸಲಿ : ಚೆಪ್ಪುಡಿರ ರಾಕೇಶ್ ದೇವಯ್ಯ ಒತ್ತಾಯ*
  • *ಮಡಿಕೇರಿಯಲ್ಲಿ ಬ್ರಹ್ಮರ್ಷಿ ಶ್ರೀ ನಾರಾಯಣ ಗುರು ಮತ್ತು ಕಾಯಕಯೋಗಿ ಶಿವಶರಣ ನುಲಿಯ ಚಂದಯ್ಯ ಜಯಂತಿ*
  • *ಶಾಸಕ ಪೊನ್ನಣ್ಣ ಅವರಿಗೆ ಮಹಿಳಾ ಕಾಂಗ್ರೆಸ್‌ನಿಂದ ಸನ್ಮಾನ*
  • *ಪೇಟೆ ಶ್ರೀ ರಾಮ ಮಂದಿರದಲ್ಲಿ ವಿಶೇಷ ಪೂಜೆ : ಮಡಿಕೇರಿ ದಸರಾ ಜನೋತ್ಸವದ ಪೂರ್ವಭಾವಿ ತಯಾರಿ ಆರಂಭ*
  • *ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ನಿರಾಕರಿಸಿರುವುದು ಸರಿಯಲ್ಲ : ಕರ್ನಲ್ ಸಿ.ಪಿ.ಮುತ್ತಣ್ಣ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ನಾಪೋಕ್ಲು : ಕಠಿಣ ಪರಿಶ್ರಮ, ಶಿಸ್ತು ಹಾಗೂ ಸಮಯ ನಿರ್ವಹಣೆಯಿಂದ ಯಶಸ್ಸು ಸಾಧ್ಯ : ವಿಕ್ರಂದತ್*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ನಾಪೋಕ್ಲು : ಕಠಿಣ ಪರಿಶ್ರಮ, ಶಿಸ್ತು ಹಾಗೂ ಸಮಯ ನಿರ್ವಹಣೆಯಿಂದ ಯಶಸ್ಸು ಸಾಧ್ಯ : ವಿಕ್ರಂದತ್*

ಜನವರಿ 17, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ನಾಪೋಕ್ಲು ಜ.17 NEWS DESK : ಕಠಿಣ ಪರಿಶ್ರಮ, ಶಿಸ್ತು ಹಾಗೂ ಸಮಯ ನಿರ್ವಹಣೆಯಿಂದ  ವಿದ್ಯಾರ್ಥಿಗಳು ಯಶಸ್ಸು ಪಡೆಯಲು ಸಾಧ್ಯ ಎಂದು  ಬದಿಯಡ್ಕದ ಕುನಿಲ್ ಎಜುಕೇಶನ್ ಇನ್ಸ್ಟಿಟ್ಯೂಟ್ ನ ಸಿಇಒ ವಿಕ್ರಂ ದತ್ ಹೇಳಿದರು. ರೋಟರಿ ಮಿಸ್ಟಿ ಹೀಲ್ಸ್ ಮಡಿಕೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಕರ್ನಾಟಕ ಪಬ್ಲಿಕ್ ಶಾಲೆ ನಾಪೋಕ್ಲು ಸಹಯೋಗದೊಂದಿಗೆ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಆತ್ಮಸ್ಥೈರ್ಯ ವೃದ್ಧಿಗಾಗಿ ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರೇರಣ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ವಿದ್ಯಾರ್ಥಿಗಳು ಉತ್ತೀರ್ಣರಾಗುವುದು ಮುಖ್ಯ ಅಲ್ಲ ಜ್ಞಾನ, ಅನುಭವ ಗಳಿಸಿಕೊಳ್ಳುವುದು ಅಗತ್ಯ ಎಂದರು. ಜೀವನದಲ್ಲಿ ನಾನೇನು ಆಗಬೇಕು, ಮುಂದಿನ ಭವಿಷ್ಯದ ಬಗ್ಗೆ ಈಗಾಗಲೇ ನಿರ್ಧರಿಸಕೊಳ್ಳಬೇಕಿದೆ ಎಂದರು.  ವಿದ್ಯಾರ್ಥಿಗಳು ಜೀವನದಲ್ಲಿ ಐದು ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಸಂವಹನ ಕಲೆ, ಡಿಜಿಟಲ್ ಸಾಕ್ಷರತೆ, ಆರ್ಥಿಕ ಸಾಕ್ಷರತೆ, ಭಾವನಾತ್ಮಕ ಬುದ್ಧಿವಂತಿಕೆ ಹಾಗೂ ವೇಗವಾಗಿ ಕಲಿಕೆ ಇದು ಇಂದಿನ ಅಗತ್ಯಗಳು ಎಂದರು. ಶಿಕ್ಷಕರಿಗಿಂತ ಉತ್ತಮ ಗೈಡ್ ಬೇರೆ ಇಲ್ಲ ಶಿಕ್ಷಕರೊಂದಿಗೆ ಸಂವಹನ ಮಾಡಿ ಕಲಿಕೆಯಲ್ಲಿ ತೊಡಗಿಸಿಕೊಂಡರೆ ಯಶಸ್ಸು ಗಳಿಸಲು ಸಾಧ್ಯ ಎಂದರು. ನಿವೃತ್ತ ಸೇನಾಧಿಕಾರಿ ಕರ್ನಲ್ ಎನ್. ಎಸ್ ಭಂಡಾರಿ ವೃತ್ತಿ ಮಾರ್ಗದರ್ಶನ ನೀಡಿ ಮಾತನಾಡಿ ಶಿಕ್ಷಣದ ಮುಖ್ಯ ಗುರಿ ಉದ್ಯೋಗ. ಉದ್ಯೋಗ ಪಡೆಯಲು ಕೆಲವೊಂದು ಅಂಶಗಳನ್ನು ಪರಿಗಣಿಸಬೇಕು. ಉತ್ತಮ ವೇತನ, ಸವಲತ್ತು, ಉದ್ಯೋಗದಲ್ಲಿ ತೃಪ್ತಿ, ಸೇವಾ ಭದ್ರತೆ, ಸ್ಥಿರತೆ, ನಿವೃತ್ತಿಯ ನಂತರ ಆರ್ಥಿ,ಕ ಆರೋಗ್ಯ ಸೌಲಭ್ಯ ಸಿಗುವಂತಿರುವ ಉದ್ಯೋಗಗಳ ಬಗ್ಗೆ ವಿದ್ಯಾರ್ಥಿಗಳು ಗುರಿ ಹೊಂದಿರಬೇಕು ಎಂದರು. ಕಾರ್ಯಕ್ರಮದಲ್ಲಿ ಇಂಟರಾಕ್ಟ್  ಸಮಿತಿಯ ಅಧ್ಯಕ್ಷ ಬಿ.ಜಿ.ಅನಂತಶಯನ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಸ್ತುಬದ್ಧವಾಗಿ ಓದಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಭಯವಿಲ್ಲದೆ ಎದುರಿಸಬಹುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಮಿಸ್ಟಿ ಹಿಲ್ಸ್ ನ ಅಧ್ಯಕ್ಷ ರತ್ನಾಕರ್ ರೈ ಮಾತನಾಡಿ, 10ನೇ ತರಗತಿ ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖ ಘಟ್ಟ. ಆತ್ಮವಿಶ್ವಾಸ ಇರಿಸಿಕೊಂಡು ವಿದ್ಯಾರ್ಥಿಗಳು ಕನಸುಗಳನ್ನು ಸಾಕಾರ ಗೊಳಿಸಬೇಕು ಎಂದು ಹೇಳಿದರು.        ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಪಿ ಮಹೇಶ್ ಮಾತನಾಡಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಒಂದು ಹಬ್ಬವಾದ ಸಂಭ್ರಮಿಸಬೇಕು ಎಂದರು. ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಬಿ.ಕೆ.ಕಾರ್ಯಪ್ಪ, ಕೆ.ಎಂ.ಶರತ್, ಪಿ.ಎಸ್.ರವಿಕೃಷ್ಣ, ಕೆಪಿಎಸ್ ಶಾಲೆಯ ಉಪ ಪ್ರಾಂಶುಪಾಲರಾದ ಶಿವಣ್ಣ, ಇಸಿಒ ಜಾನೆಟ್, ಕೆಪಿಎಸ್ ಶಾಲೆಯ ಅಭಿವೃದ್ಧಿ ಸಮಿತಿಯ ಸದಸ್ಯರು  ಉಪಸ್ಥಿತರಿದ್ದರು. ಅತಿಥಿ ಗಣ್ಯರು ಗಿಡಕ್ಕೆ ನೀರು ಉಣಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಲಾಯಿತು. ಕೆಪಿಎಲ್‍ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕಿ ಉಷಾರಾಣಿ ಕಾರ್ಯಕ್ರಮ ನಿರೂಪಿಸಿದರು. ಬಿಇಒ   ಮಹೇಶ್ ಸ್ವಾಗತಿಸಿ ವಂದಿಸಿದರು. ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಪ್ರೇರಣಾ ಮತ್ತು ವೃತ್ತಿ ಮಾರ್ಗದರ್ಶನ ಶಿಬಿರ ವಿದ್ಯಾರ್ಥಿಗಳ ಪರೀಕ್ಷಾ ಭಯ ಹೋಗಲಾಡಿಸುವ ರೀತಿನಲ್ಲಿ ಸಫಲವಾಯಿತು.  ಕರ್ನಾಟಕ ಪಬ್ಲಿಕ್ ಶಾಲೆ, ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆ, ನೇತಾಜಿ ಪ್ರೌಢಶಾಲೆ, ಪ್ರೌಢಶಾಲೆ ಕಕ್ಕಬೆ, ಎಮ್ಮೆಮಾಡು ಸರಕಾರಿ ಪ್ರೌಢಶಾಲೆ ಸೇರಿದಂತೆ 15 ವಿವಿಧ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 10ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಿಬಿರದಲ್ಲಿ ಪಾಲ್ಗೊಂಡಿದ್ದರು.

ವರದಿ : ದುಗ್ಗಳ ಸದಾನಂದ. 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ವಿರಾಜಪೇಟೆಯ ಶಿವಕೇರಿಯಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ವರಮಹಾಲಕ್ಷ್ಮಿ ಪೂಜಾ ಮಹೋತ್ಸವ*

ಆಗಷ್ಟ್ 28, 2026

*ಕಾನೂನು ಸುವ್ಯವಸ್ಥೆ ನಿರ್ವಹಣೆಯಲ್ಲಿ ಉತ್ತಮ ಕರ್ತವ್ಯ : ಆರು ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ*

ಆಗಷ್ಟ್ 28, 2026

ಗೋಣಿಕೊಪ್ಪ ದಸರಾಕ್ಕೆ ₹1 ಕೋಟಿ ಅನುದಾನ : ದಶಮಂಟಪಗಳಿಗೆ ಹೆಚ್ಚಿನ ನೆರವಿನ ಭರವಸೆ

ಆಗಷ್ಟ್ 28, 2026

*ಕಾನೂನು ಸುವ್ಯವಸ್ಥೆ ನಿರ್ವಹಣೆಯಲ್ಲಿ ಉತ್ತಮ ಕರ್ತವ್ಯ : ಆರು ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ*

ಆಗಷ್ಟ್ 28, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ ಪೊಲೀಸ್ ನ್ಯೂಸ್

ಮಡಿಕೇರಿ ಆ.28 NEWS DESK : ಕೊಡಗು ಜಿಲ್ಲೆಯಲ್ಲಿ ಉತ್ತಮ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ ಮೂವರು…

ಗೋಣಿಕೊಪ್ಪ ದಸರಾಕ್ಕೆ ₹1 ಕೋಟಿ ಅನುದಾನ : ದಶಮಂಟಪಗಳಿಗೆ ಹೆಚ್ಚಿನ ನೆರವಿನ ಭರವಸೆ

ಆಗಷ್ಟ್ 28, 2026

*ವಿರಾಜಪೇಟೆ ಬಿಲ್ಲವ ಸೇವಾ ಸಂಘದಿಂದ ನಾರಾಯಣ ಗುರು ಜಯಂತಿ*

ಆಗಷ್ಟ್ 28, 2026

*ಮಾನವ ವನ್ಯಜೀವಿ ಸಂಘರ್ಷ : ಸಾರ್ವಜನಿಕರ ಜತೆ ಸಮಾಲೋಚಿಸಿದ ಅರಣ್ಯ ಸಚಿವರು*

ಆಗಷ್ಟ್ 28, 2026

*ಮಡಿಕೇರಿಯಲ್ಲಿ ಬ್ರಹ್ಮರ್ಷಿ ಶ್ರೀ ನಾರಾಯಣ ಗುರು ಮತ್ತು ಕಾಯಕಯೋಗಿ ಶಿವಶರಣ ನುಲಿಯ ಚಂದಯ್ಯ ಜಯಂತಿ*

ಆಗಷ್ಟ್ 28, 2026

*ಶಾಸಕ ಪೊನ್ನಣ್ಣ ಅವರಿಗೆ ಮಹಿಳಾ ಕಾಂಗ್ರೆಸ್‌ನಿಂದ ಸನ್ಮಾನ*

ಆಗಷ್ಟ್ 28, 2026

*ಪೇಟೆ ಶ್ರೀ ರಾಮ ಮಂದಿರದಲ್ಲಿ ವಿಶೇಷ ಪೂಜೆ : ಮಡಿಕೇರಿ ದಸರಾ ಜನೋತ್ಸವದ ಪೂರ್ವಭಾವಿ ತಯಾರಿ ಆರಂಭ*

ಆಗಷ್ಟ್ 28, 2026

*ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ನಿರಾಕರಿಸಿರುವುದು ಸರಿಯಲ್ಲ : ಕರ್ನಲ್ ಸಿ.ಪಿ.ಮುತ್ತಣ್ಣ*

ಆಗಷ್ಟ್ 28, 2026

*ಆ.29ರಂದು ಕೊಡಗು ಜಿಲ್ಲಾ ಮಟ್ಟದ ಎಸ್‌ಸಿ/ಎಸ್‌ಟಿ ಕುಂದುಕೊರತೆ ಸಭೆ*

ಆಗಷ್ಟ್ 28, 2026

*ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜ್ ನಲ್ಲಿ ಸರ್ಕಾರಿ ವಲಯ, ನಾಗರಿಕ ಸೇವೆಗಳಲ್ಲಿ ವೃತ್ತಿ ಅವಕಾಶಗಳ ಕುರಿತು ಕಾರ್ಯಾಗಾರ : ಸಾಮರ್ಥ್ಯ, ಆಸಕ್ತಿ ಹಾಗೂ ಗುರಿಗಳನ್ನು ಗುರುತಿಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಲು ಮೇಜರ್ ಪ್ರೊ. ರಾಘವ ಬಿ. ಕರೆ *

ಆಗಷ್ಟ್ 28, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.