
ನಾಪೋಕ್ಲು ಜ.21 NEWS DESK : ಎಮ್ಮೆಮಾಡು ಗ್ರಾಮದಲ್ಲಿ 35ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ ನೀಡಿದರು. ಎಮ್ಮೆಮಾಡು ಭಾಗದಲ್ಲಿ ಶಾಸಕರ ರೂ.35ಲಕ್ಷ ವೆಚ್ಚದ ಅನುದಾನದಲ್ಲಿ ಪ್ರಾರಂಭವಾಗಲಿರುವ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಿದ ಬಳಿಕ, ಈಗಾಗಲೇ ಈ ಭಾಗದಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸಿದರು. ಈ ಸಂದರ್ಭ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಐಸಮ್ಮ, ಸದಸ್ಯರಾದ ಗಪುರ್, ಯೂಸಫ್, ಜಮಾಯತ್ ಅಧ್ಯಕ್ಷ ಹುಸೇನ್ ಸಖಾಫಿ ಹಾಗೂ ಆಡಳಿತ ಮಂಡಳಿ, ಶಾದುಲಿ ಹಾಜಿ, ಹಂಸ ಪಡಿಯಾನಿ, ಅಶ್ರಫ್ ಬಿ.ಯು, ಕೆ.ಎ.ಇಸ್ಮಾಯಿಲ್, ಡಿಸಿಸಿ ಉಪಾಧ್ಯಕ್ಷ ಎಂ.ಎಚ್.ಅಬ್ದುಲ್ ರೆಹಮಾನ್, ಮಚ್ಚುರ ರವೀಂದ್ರ, ಮಾಚೇಟೀರ ಕುಶಾಲಪ್ಪ, ಮನವಟ್ಟಿರ ದಯಾ ಕುಟ್ಟಪ್ಪ ಅಪ್ಪಚೆಟ್ಟೋಳಂಡ ಮಿಥುನ್, ಐಸ, ಮಾಚಯ್ಯ ಪಡಿಯಾನಿ ಜಮಾತ್ ಪದಾಧಿಕಾರಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.









