
ಮಡಿಕೇರಿ ಜ.23 NEWS DESK : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀನದಲ್ಲಿರುವ ಕಿರಿಯರ ಕ್ರೀಡಾ ವಸತಿ ನಿಲಯಕ್ಕೆ (5ನೇ ತರಗತಿಗೆ) ಅಥ್ಲೆಟಿಕ್ಸ್ ಮತ್ತು ಹಾಕಿ ಕ್ರೀಡೆಗೆ 2026-27ನೇ ಸಾಲಿಗೆ ಪ್ರತಿಭಾನ್ವಿತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯು ಮಡಿಕೇರಿ ತಾಲ್ಲೂಕಿಗೆ ಸಂಬಂಧಿಸಿದಂತೆ ಫೆಬ್ರವರಿ, 05 ರಂದು ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ, ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕಿಗೆ ಫೆಬ್ರವರಿ, 06 ರಂದು ಕೂಡಿಗೆ ಸರ್ಕಾರಿ ಕ್ರೀಡಾ ಶಾಲೆ ಹಾಗೂ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕಿಗೆ ಫೆಬ್ರವರಿ, 07 ರಂದು ಪೊನ್ನಂಪೇಟೆ ತಾಲ್ಲೂಕು ಮಿನಿ ಕ್ರೀಡಾಂಗಣದಲ್ಲಿ ನಡೆಯಲಿದೆ. ವಿದ್ಯಾರ್ಥಿಗಳು ಫೆಬ್ರವರಿ, 05, 06 ಮತ್ತು 07 ರಂದು ಬೆಳಗ್ಗೆ 9 ಗಂಟೆ ಒಳಗೆ ಇಲಾಖಾ ತರಬೇತುದಾರರಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಮಹಾಬಲ ಅಥ್ಲೆಟಿಕ್ಸ್ ತರಬೇತುದಾರರು ದೂ.ಸಂ.9980887499, ಬಿಂದ್ಯಾ ಹಾಕಿ ತರಬೇತುದಾರರು 9481058092 ನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ.ವಿಸ್ಮಯಿ ಅವರು ತಿಳಿಸಿದ್ದಾರೆ.








