Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಯುಪಿಎಸ್‌ಸಿ ಪರೀಕ್ಷೆಯಲ್ಲಿ ವಿರಾಜಪೇಟೆಯ ಕೆ.ಎಲ್.ಸೂರಜ್ ಗೆ 525ನೇ ರ‍್ಯಾಂಕ್*
  • *ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ : ಶಾಸಕ ಪೊನ್ನಣ್ಣರಿಗೆ ಸನ್ಮಾನ*
  • *ಐಟಿ ಹಬ್ ಆಗಲಿದೆಯೇ ಸಾಂಸ್ಕೃತಿಕ ನಗರಿ?: ಮೈಸೂರು ಇನ್ಮುಂದೆ ರಾಜ್ಯದ ಎರಡನೇ ಐಟಿ ಸಿಟಿ; ಮಂಗಳೂರಿಗೂ ಸಿಕ್ತು ಐಟಿ ಪಾರ್ಕ್ ಭಾಗ್ಯ!*
  • *ಬೆಂಗಳೂರು-ಕಲಬುರಗಿ ಸೇರಿ ಹಲವು ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ; ಮಾರ್ಚ್ 15ರಿಂದ ಹೊಸ ವೇಳಾಪಟ್ಟಿ ಜಾರಿ!*
  • *ಕಾವೇರಿ ಶಾಲೆಯಲ್ಲಿ ಅಚ್ಚುಕಟ್ಟಾಗಿ ನೆರವೇರಿದ ಬೀಳ್ಕೊಡುಗೆ ಹಾಗೂ ಪದವಿ ಪ್ರಧಾನ ಕಾರ್ಯಕ್ರಮ*
  • *ಮೊಣ್ಣಂಡ ಕೆ.ಚೆಂಗಪ್ಪ ಹಾಗೂ ಚೆರಿಯಮನೆ ಕೃಷ್ಣಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮ*
  • *ಬಸವೇಶ್ವರ ಸನ್ನಿಧಿಯಲ್ಲಿ ಮಳೆ ಪೂಜೆ*
  • *ಸವ೯ ಜನರ ಪಾಲಿನ ಕಲ್ಯಾಣದ ಬಜೆಟ್ : ಶಾಸಕ ಡಾ.ಮಂಥರ್ ಗೌಡ ಶ್ಲಾಘನೆ*  
  • *ಕೊಡಗು ಜಿಲ್ಲೆಯನ್ನು ಕಡೆಗಣಿಸಿದ ಬಜೆಟ್ : ತೇಲಪಂಡ ಶಿವಕುಮಾರ್ ಟೀಕೆ*
  • *ಕೊಡಗಿನ ಜನರ ನಿರೀಕ್ಷೆ ಹುಸಿಯಾಗಿದೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»ಕುಶಾಲನಗರದಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ : ರಾಷ್ಟ್ರೀಯ ದಿನಗಳು ಕೇವಲ ಭಾಷಣಕ್ಕೆ ಸೀಮಿತವಾಗಬಾರದು : ಕಿರಣ್ ಜಿ.ಗೌರಯ್ಯ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕುಶಾಲನಗರದಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ : ರಾಷ್ಟ್ರೀಯ ದಿನಗಳು ಕೇವಲ ಭಾಷಣಕ್ಕೆ ಸೀಮಿತವಾಗಬಾರದು : ಕಿರಣ್ ಜಿ.ಗೌರಯ್ಯ*

ಜನವರಿ 26, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಕುಶಾಲನಗರ ಜ.26 NEWS DESK : ಕುಶಾಲನಗರ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಆಶ್ರಯದಲ್ಲಿ 77ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ತಾಲ್ಲೂಕು ತಹಸಿಲ್ದಾರ್ ಹಾಗೂ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರಾದ ಕಿರಣ್ ಜಿ.ಗೌರಯ್ಯ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ರಾಷ್ಟ್ರೀಯ ದಿನಗಳು ಕೇವಲ ಭಾಷಣಕ್ಕೆ ಸೀಮಿತವಾಗಬಾರದು. ಸಂವಿಧಾನದಲ್ಲಿ ಉಲ್ಲೇಖಿಸಿದಂತೆ ಕರ್ತವ್ಯ ನಿರ್ವಹಿಸಬೇಕು. ಯುವ ಪೀಳಿಗೆಗೆ ಸಂದೇಶ ನೀಡಿ ಜಾಗೃತಿ ಮೂಡಿಸಬೇಕು. ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವಂತಾಗಬೇಕು. ಸರ್ವಾಂಗೀಣ ಪ್ರಗತಿ ಕಂಡಿರುವ ನಮ್ಮ ದೇಶ ಆರ್ಥಿಕವಾಗಿ ಬಲಿಷ್ಠವಾಗಿದೆ ಎಂದ ಕಿರಣ್ ಗೌರಯ್ಯ ಅವರು, ಭವ್ಯ ಭಾರತದ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು. ಸ್ವಚ್ಛ ಪರಿಸರದೊಂದಿಗೆ ಮುಂದಿನ ಪೀಳಿಗೆಗೆ ಸಮೃದ್ಧ ನಾಡನ್ನು ಹಸ್ತಾಂತರಿಸುವುದು ಪ್ರತಿಯೊಬ್ಬರ ಆಧ್ಯ ಕರ್ತವ್ಯವಾಗಿದೆ ಎಂದರು.  ಮುಖ್ಯ ಭಾಷಣಕಾರರಾದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಹಂಡ್ರಂಗಿ ನಾಗರಾಜು ಮಾತನಾಡಿ, ಗಣರಾಜ್ಯೋತ್ಸವ ದಿನದ ಮಹತ್ವದ ಮತ್ತು ವಿಶೇಷತೆಗಳನ್ನು ತಿಳಿ ಹೇಳಿದರು. ಸಂವಿಧಾನದ ಆಶೋತ್ತರಗಳನ್ನು ಪಾಲಿಸುವುದು ಎಲ್ಲರ ಕರ್ತವ್ಯವಾಗಿದೆ. ಸತ್ಯದ ಅನ್ವೇಷಣೆ ಮೂಲಕ ದೇಶ ಕಟ್ಟುವ ಕೆಲಸ ಆಗಬೇಕಿದೆ. ಸಂವಿಧಾನ ಭಾರತೀಯರ ನಂಬಿಕೆಯ ಗ್ರಂಥವಾಗಿದ್ದು ಅದರಂತೆ ನಡೆಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ವಿಪಿ ಶಶಿಧರ್ ಮಾತನಾಡಿ ಪ್ರಜಾ ಪ್ರಭುತ್ವದ ಘನತೆಯನ್ನು ಕಾಪಾಡುವ ಹೊಣೆ ಎಲ್ಲರ ಮೇಲಿದೆ ದೇಶದ ಭವಿಷ್ಯ ರೂಪಿಸಬೇಕಾದ ಯುವ ಪೀಳಿಗೆ ಈ ವಿಷಯದಲ್ಲಿ ಮೌನ ತಾಳಿರುವುದು, ಪ್ರಜೆಗಳು ಮಾನಸಿಕವಾಗಿ ಭ್ರಷ್ಟಾಚಾರದತ್ತ ಮುಖ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು. ತಮ್ಮ ಪ್ರತಿನಿಧಿಗಳ ಆಯ್ಕೆ ಸಂದರ್ಭ ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳುವ ಕೆಲಸ ಆಗಬೇಕಾಗಿದೆ ಎಂದರು.  ವೇದಿಕೆಯಲ್ಲಿ ಡಿವೈಎಸ್ಪಿ ಚಂದ್ರಶೇಖರ್, ಪುರಸಭೆ ಮುಖ್ಯ ಅಧಿಕಾರಿ ಟಿ.ಎಸ್.ಗಿರೀಶ್, ಪೊಲೀಸ್ ವೃತ್ತ ನಿರೀಕ್ಷಕ ಪ್ರದೀಪ್ ಬಿ.ಆರ್, ಕೊಡಗು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕೆ.ಪಿ.ಚಂದ್ರಕಲಾ, ಪುರಸಭೆ ಆರೋಗ್ಯ ಅಧಿಕಾರಿ ಉದಯ್ ಕುಮಾರ್ ಮತ್ತಿತರರು ಇದ್ದರು. ಮಾಜಿ ಸೈನಿಕರಾದ ಹಾನರಿ ಕ್ಯಾಪ್ಟನ್ ಪಿ ಈ ಮುತ್ತಣ್ಣ, ನಾಟಿ ವೈದ್ಯೆ ಅಯಿನಮಂಡ ಲೀಲಾವತಿ ಗಣಪತಿ, ಪೌರಕಾರ್ಮಿಕರಾದ ಗೌರಮ್ಮ ಮತ್ತು ರಾಷ್ಟ್ರೀಯ ಕ್ರೀಡಾಪಟುಗಳಾದ ಬ್ರಿಜೇಶ್, ಮುಕುಂದ್ ಹಾಗೂ ಕುಶಾಲನಗರದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರು ಹಾಗೂ ತಾಲೂಕು ತಹಸಿಲ್ದಾರ್ ಕಿರಣ್ ಜಿ ಗೌರಯ್ಯ ಅವರ ಅತ್ಯುತ್ತಮ ಕಾರ್ಯ ವೈಖರಿ ಗಮನಿಸಿ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ವತಿಯಿಂದ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಮುನ್ನ ಪೊಲೀಸ್ ಎನ್‌ ಸಿ ಸಿ ತಂಡಗಳು, ಶಾಲಾ ಕಾಲೇಜು ಮಕ್ಕಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಪೆರೇಡ್ ಕಮಾಂಡರ್ ಆಗಿ ಏಎಸ್ ಐಎಸ್ ಶ್ರೀನಿವಾಸ್ ಅವರು ಕಾರ್ಯನಿರ್ವಹಿಸಿದರು. ಪಥಸಂಚಲದಲ್ಲಿ ಪಾಲ್ಗೊಂಡ ತಂಡದ ನಾಯಕರುಗಳಿಗೆ ಪ್ರಸಂಶನಾ ಪತ್ರ ವಿತರಿಸಲಾಯಿತು. ಶಿಕ್ಷಕರು ವಿದ್ಯಾರ್ಥಿಗಳು ನಾಡಗೀತೆ ರೈತ ಗೀತೆ ಹಾಡಿದರು. ಮಹೇಶ್ ಅಮೀನ್ ಅವರು ವಂದೇ ಮಾತರಂ ಗೀತೆಯನ್ನು ಹಾಡಿದರು. ಲೋಕೇಶ್ ತಂಡದಿಂದ ಕ್ರಾಂತಿ ಗೀತೆ, ಶಿಕ್ಷಕಿಯರಾದ ತುಳಸಿ ಅವರು ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕರಾದ ನವೀನ್ ಕುಮಾರ್ ಸ್ವಾಗತಿಸಿ ವಂದಿಸಿದರು. ನಂತರ ಶಾಲಾ-ಕಾಲೇಜು ವಿದ್ಯಾರ್ಥಿಗಳ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಯುಪಿಎಸ್‌ಸಿ ಪರೀಕ್ಷೆಯಲ್ಲಿ ವಿರಾಜಪೇಟೆಯ ಕೆ.ಎಲ್.ಸೂರಜ್ ಗೆ 525ನೇ ರ‍್ಯಾಂಕ್*

ಮಾರ್ಚ್ 7, 2026

*ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ : ಶಾಸಕ ಪೊನ್ನಣ್ಣರಿಗೆ ಸನ್ಮಾನ*

ಮಾರ್ಚ್ 7, 2026

*ಐಟಿ ಹಬ್ ಆಗಲಿದೆಯೇ ಸಾಂಸ್ಕೃತಿಕ ನಗರಿ?: ಮೈಸೂರು ಇನ್ಮುಂದೆ ರಾಜ್ಯದ ಎರಡನೇ ಐಟಿ ಸಿಟಿ; ಮಂಗಳೂರಿಗೂ ಸಿಕ್ತು ಐಟಿ ಪಾರ್ಕ್ ಭಾಗ್ಯ!*

ಮಾರ್ಚ್ 7, 2026

*ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ : ಶಾಸಕ ಪೊನ್ನಣ್ಣರಿಗೆ ಸನ್ಮಾನ*

ಮಾರ್ಚ್ 7, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಗೋಣಿಕೊಪ್ಪ, NEWS DESK ಮಾ.7 : ಈ ಸಾಲಿನ ಬಜೆಟ್ ಅಧಿವೇಶನದ ಮೊದಲ ದಿನವೇ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ…

*ಐಟಿ ಹಬ್ ಆಗಲಿದೆಯೇ ಸಾಂಸ್ಕೃತಿಕ ನಗರಿ?: ಮೈಸೂರು ಇನ್ಮುಂದೆ ರಾಜ್ಯದ ಎರಡನೇ ಐಟಿ ಸಿಟಿ; ಮಂಗಳೂರಿಗೂ ಸಿಕ್ತು ಐಟಿ ಪಾರ್ಕ್ ಭಾಗ್ಯ!*

ಮಾರ್ಚ್ 7, 2026

*ಬೆಂಗಳೂರು-ಕಲಬುರಗಿ ಸೇರಿ ಹಲವು ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ; ಮಾರ್ಚ್ 15ರಿಂದ ಹೊಸ ವೇಳಾಪಟ್ಟಿ ಜಾರಿ!*

ಮಾರ್ಚ್ 7, 2026

*ಕಾವೇರಿ ಶಾಲೆಯಲ್ಲಿ ಅಚ್ಚುಕಟ್ಟಾಗಿ ನೆರವೇರಿದ ಬೀಳ್ಕೊಡುಗೆ ಹಾಗೂ ಪದವಿ ಪ್ರಧಾನ ಕಾರ್ಯಕ್ರಮ*

ಮಾರ್ಚ್ 6, 2026

*ಮೊಣ್ಣಂಡ ಕೆ.ಚೆಂಗಪ್ಪ ಹಾಗೂ ಚೆರಿಯಮನೆ ಕೃಷ್ಣಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮ*

ಮಾರ್ಚ್ 6, 2026

*ಬಸವೇಶ್ವರ ಸನ್ನಿಧಿಯಲ್ಲಿ ಮಳೆ ಪೂಜೆ*

ಮಾರ್ಚ್ 6, 2026

*ಸವ೯ ಜನರ ಪಾಲಿನ ಕಲ್ಯಾಣದ ಬಜೆಟ್ : ಶಾಸಕ ಡಾ.ಮಂಥರ್ ಗೌಡ ಶ್ಲಾಘನೆ*  

ಮಾರ್ಚ್ 6, 2026

*ಕೊಡಗಿನ ಜನರ ನಿರೀಕ್ಷೆ ಹುಸಿಯಾಗಿದೆ*

ಮಾರ್ಚ್ 6, 2026

*ಸಾಲದ ಶೂಲಕ್ಕೆ ತಳ್ಳಿದ ಬಜೆಟ್ : ವಿರಾಜಪೇಟೆ ಕ್ಷೇತ್ರದ ನಿರೀಕ್ಷೆಗಳು ಹುಸಿಯಾಗಿದೆ : ಬಿಜೆಪಿ ಟೀಕೆ*

ಮಾರ್ಚ್ 6, 2026

*ಅಸ್ಸಾಂನಲ್ಲಿ ಸುಖೋಯ್-30 ಯುದ್ಧ ವಿಮಾನ ಪತನ: ಇಬ್ಬರು ಪೈಲಟ್‌ಗಳು ಹುತಾತ್ಮ*

ಮಾರ್ಚ್ 6, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.