
ಮಡಿಕೇರಿ ಜ.27 NEWS DESK : ಕಡಗದಳು ಗ್ರಾಮ ಪಂಚಾಯಿತಿಯ ನೂತನ ಕಟ್ಟಡವನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷರಾದ ನಂದಿನಿರವಂಡ ನಿರ್ಮಲ ವಹಿಸಿದ್ದರು, ವೇದಿಕೆಯಲ್ಲಿ ಉಪಾಧ್ಯಕ್ಷರಾದ ಯೋಗೇಶ್, ಶಕ್ತಿ ದಿನಪತ್ರಿಕೆ ಸಂಪಾದಕರಾದ ಅನಂತಶಯನ, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಮಂಡೀರ ಮೋಹನ್‍ದಾಸ್, ಮಡಿಕೇರಿ ತಾಲೂಕು ಕಾರ್ಯ ನಿರ್ವಹಣಾ ಅಧಿಕಾರಿ ಶೇಖರ್, ಹೊದ್ದೂರು ಗ್ರಾಮ ಪಂಚಾಯಿತಿ ಹಾಗೂ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಕಟ್ಟಡ ಗುತ್ತಿಗೆದಾರ ಎಂ.ಎನ್.ರವೂಫ್, ಗ್ರಾ.ಪಂ ಮಾಜಿ ಅಧ್ಯಕ್ಷ ಶಂಭಯ್ಯ, ಜಯಣ್ಣ ಹಾಗೂ ಭಾರತಿ, ಪಂಚಾಯಿತಿ ಸದಸ್ಯರಾದ ಪುಷ್ಪವತಿ ರೈ, ರೋಹಿಣಿ, ಗೀತಾ, ಆನಂದ, ಪ್ರಭಾ, ರಜಿನಾ ಕಾರ್ಯಪಾಲಕ ಇಂಜಿನಿಯರ್ ಜಯಣ್ಣ ಮತ್ತು ಕಿರಿಯ ಅಭಿಯಂತರರುಗಳಾದ ರಘುಕುಮಾರ್, ಯಶಸ್ವಿನಿ ಉಪಸ್ಥಿತರಿದ್ದರು. ಆಡಳಿತ ಅಧಿಕಾರಿ ಅನಿತಾ ಸ್ವಾಗತಿಸಿದರು.









