
ಮಡಿಕೇರಿ ಜ.27 NEWS DESK : ಮೈಸೂರಿನಲ್ಲಿ ನಡೆದ ಇಂಟರ್ ಡೋಜೊ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಚೇರಂಬಾಣೆಯ ತನುಶ್ರೀ ಪ್ರಥಮ ಸ್ಥಾನ ಪಡೆಯುವ ಮೂಲಕ ಚಿನ್ನದ ಪದಕ ಗೆದ್ದುಕೊಂಡಿದ್ದಾಳೆ. ತನುಶ್ರೀ ಚೇರಂಬಾಣೆಯ ಬೇಂಗೂರುವಿನ ಹೆಚ್.ಜಿ.ದಿನೇಶ್ ಹಾಗೂ ಹೆಚ್.ಡಿ.ಮೀನಾಕ್ಷಿ ದಂಪತಿಯ ಪುತ್ರಿ. ಮಡಿಕೇರಿಯ ಜೂನಿಯರ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ತರಬೇತುದಾರರಾದ ಡಾ.ದೀಲಿತ್ ಉತ್ತಪ್ಪ ಅವರಲ್ಲಿ ತರಬೇತಿ ಪಡೆಯುತ್ತಿದ್ದಾಳೆ.









