
ನಾಪೋಕ್ಲು ಜ.27 NEWS DESK : ಚೆರಿಯಪರಂಬು ದರ್ಗಾದ ವಾರ್ಷಿಕ ಮಖಾಂ ಉರೂಸ್ ಸಮಾರಂಭದ ಪೋಸ್ಟರ್ ಅನ್ನು ಬಿಡುಗಡೆಗೊಳಸಲಾಯಿತು. ಪ್ರತಿ ವರ್ಷ ಜರುಗುವ ಉರೂಸ್ ಈ ವರ್ಷ ಫೆ.6 ರಿಂದ 10 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಇದರ ಪೋಸ್ಟರ್ ಅನ್ನು ಜುಮಾ ನಮಾಜಿನ ಬಳಿಕ ಜುಮಾ ಮಸೀದಿಯ ಆವರಣದಲ್ಲಿ ಆಯೋಜಿಸಲಾದ ಸರಳ ಸಮಾರಂಭದಲ್ಲಿ ಮಸೀದಿಯ ಸಹಾಯಕ ಖತೀಬರಾದ ರಫೀಕ್ ಸಖಾಫಿ ಅವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಚೆರಿಯಪರಂಬು ಜಮಾಯತಿನ ಹಾಲಿ ಹಾಗೂ ಮಾಜಿ ಅಧ್ಯಕ್ಷರು ಪದಾಧಿಕಾರಿಗಳು, ಸದಸ್ಯರು ಹಾಗೂ ಮತ ಬಾಂಧವರು ಹಾಜರಿದ್ದರು.
ವರದಿ : ದುಗ್ಗಳ ಸದಾನಂದ.









