Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕಾವೇರಿ ಶಾಲೆಯಲ್ಲಿ ಅಚ್ಚುಕಟ್ಟಾಗಿ ನೆರವೇರಿದ ಬೀಳ್ಕೊಡುಗೆ ಹಾಗೂ ಪದವಿ ಪ್ರಧಾನ ಕಾರ್ಯಕ್ರಮ*
  • *ಮೊಣ್ಣಂಡ ಕೆ.ಚೆಂಗಪ್ಪ ಹಾಗೂ ಚೆರಿಯಮನೆ ಕೃಷ್ಣಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮ*
  • *ಬಸವೇಶ್ವರ ಸನ್ನಿಧಿಯಲ್ಲಿ ಮಳೆ ಪೂಜೆ*
  • *ಸವ೯ ಜನರ ಪಾಲಿನ ಕಲ್ಯಾಣದ ಬಜೆಟ್ : ಶಾಸಕ ಡಾ.ಮಂಥರ್ ಗೌಡ ಶ್ಲಾಘನೆ*  
  • *ಕೊಡಗು ಜಿಲ್ಲೆಯನ್ನು ಕಡೆಗಣಿಸಿದ ಬಜೆಟ್ : ತೇಲಪಂಡ ಶಿವಕುಮಾರ್ ಟೀಕೆ*
  • *ಕೊಡಗಿನ ಜನರ ನಿರೀಕ್ಷೆ ಹುಸಿಯಾಗಿದೆ*
  • *ಸಾಲದ ಶೂಲಕ್ಕೆ ತಳ್ಳಿದ ಬಜೆಟ್ : ವಿರಾಜಪೇಟೆ ಕ್ಷೇತ್ರದ ನಿರೀಕ್ಷೆಗಳು ಹುಸಿಯಾಗಿದೆ : ಬಿಜೆಪಿ ಟೀಕೆ*
  • *ಅಸ್ಸಾಂನಲ್ಲಿ ಸುಖೋಯ್-30 ಯುದ್ಧ ವಿಮಾನ ಪತನ: ಇಬ್ಬರು ಪೈಲಟ್‌ಗಳು ಹುತಾತ್ಮ*
  • *ಹಾರ್ಮುಜ್ ಬಂದ್ ಆದ್ರೂ ತೈಲಕ್ಕೆ ಬರಲ್ಲ ಕಂಟಕ!: ಭಾರತದ ಇಂಧನ ಸುರಕ್ಷತೆ ಬಗ್ಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಅಪ್ಡೇಟ್*
  • *ಸಿದ್ದರಾಮಯ್ಯ ಬಜೆಟ್‌ನಲ್ಲಿ ಯಾರಿಗೆ ಲಾಭ, ಯಾರಿಗೆ ನಷ್ಟ?*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಶ್ರದ್ಧಾಭಕ್ತಿಯಿಂದ ಜರುಗಿದ ಹೆಗ್ಗಳ ಎಡಮಕ್ಕಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಬ್ರಹ್ಮ ಕಲಶಾಭಿಷೇಕ ಹಾಗೂ ವಾರ್ಷಿಕ ಮಹೋತ್ಸವ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಶ್ರದ್ಧಾಭಕ್ತಿಯಿಂದ ಜರುಗಿದ ಹೆಗ್ಗಳ ಎಡಮಕ್ಕಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಬ್ರಹ್ಮ ಕಲಶಾಭಿಷೇಕ ಹಾಗೂ ವಾರ್ಷಿಕ ಮಹೋತ್ಸವ*

ಜನವರಿ 31, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ವಿರಾಜಪೇಟೆ ಜ.31 NEWS DESK :  ಹೆಗ್ಗಳ ಗ್ರಾಮದಲ್ಲಿರುವ ಎಡಮಕ್ಕಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಬ್ರಹ್ಮಕಲಶಾಭಿಷೇಕ ಹಾಗೂ ವಾರ್ಷಿಕ ಮಹೋತ್ಸವವು ಶ್ರದ್ಧಾ ಭಕ್ತಿಯಿಂದ ಜರುಗಿತು. ಮೂರು ದಿವಸಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಮಹೋತ್ಸವವು ತೆರೆ ಕಂಡಿತು. ಮೊದಲ ದಿವಸ ಮಹಾಪೂಜೆ, ಪ್ರಸಾದ ಶುದ್ದಿ ಕ್ರಿಯೆಗಳು, ಆಚಾರ್ಯವರಣಂ ಸೇವೆಗಳು ನಡೆದವು. ಎರಡನೆಯ ದಿನದಂದು ಮುಂಜಾನೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು. ಬೆಳಿಗ್ಗೆ ಮಹಾ ಗಣಪತಿ ಹೋಮ, ಉಷಾ ಪೂಜೆ, ಕಲಶಾಭಿಷೇಕ, ಉಷಾ ಪೂಜೆ, ಬ್ರಹ್ಮ ಕಳಸ ಪೂಜೆ, ಪರಿಕಳಸ ಸೇವೆಗಳನ್ನು ನೆರವೇರಿಸಿ ಧ್ವಜಾರೋಹಣವನ್ನು ಮಾಡಲಾಯಿತು. ಮಧ್ಯಾಹ್ನ ಮಹಾಪೂಜೆ ಜರುಗಿತು. ಸಂಜೆ ಆದಿವಾಸ ಹೋಮ, ದೀಪಾರಾಧನೆ, ಕಲಶಾದಿವಸಂ ಸೇವೆಯು ನಡೆಯಿತು. ರಾಮನಗರದ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಸಂಪ್ರದಾಯದಂತೆ ಆಡಳಿತ ಮಂಡಳಿಯವರು ತೆರಳಿ ಮಹಾಗಣಪತಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ನಂತರ ಎಡಮಕ್ಕಿ ಸಾರ್ವಜನಿಕ ಮೈದಾನದಿಂದ ತಾಲಪೊಲಿ ಮೆರವಣಿಗೆಯು ನಡೆಯಿತು. ಭಕ್ತಾದಿಗಳು ಹೂವುಗಳನ್ನು ತಟ್ಟೆಗಳಲ್ಲಿ ಹಿಡಿದುಕೊಂಡು ದೀಪಗಳನ್ನು ಬೆಳಗಿಸಿ ಮೆರವಣಿಗೆಯಲ್ಲಿ ಸಾಗಿದರು. ಸಂಜೆ ಮಹಾಪೂಜೆ, ತಾಯಂಭಗಂ ಸೇವೆಯು ಜರುಗಿತು. ಸಭಾ ಕಾರ್ಯಕ್ರಮ ಹಾಗೂ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಮಹೇಶ್, ಮಹೀ ಕೂರ್ಗ್ ಅವರಿಂದ ಆಕರ್ಷಕ ಸಿಡಿ ಮದ್ದಿನ ಪ್ರದರ್ಶನ ಜರುಗಿತು. ಮೂರನೆಯ ದಿವಸದಂದು ಬೆಳಿಗ್ಗೆ ಮಹಾಗಣಪತಿ ಹೋಮ, ಉಷಾ ಪೂಜೆ ನಡೆಯಿತು. ನಂತರ ಶಾಸ್ತ್ರೋಕ್ತವಾಗಿ ಬ್ರಹ್ಮ ಕಲಶಾಭಿಷೇಕ ಸೇವೆಯನ್ನು ನೆರವೇರಿಸಲಾಯಿತು. ಮಧ್ಯಾಹ್ನ ಮಹಾ ಪೂಜೆಯು ಜರುಗಿತು. ಸಂಜೆ ದೀಪಾರಾಧನೆ, ಮಹಾಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭ ಸಹಾಯಾರ್ಥ ದೇಣಿಗೆಯ ಫಲಿತಾಂಶವನ್ನು ಪ್ರಕಟಿಸಲಾಯಿತು. ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಕ್ಷೇತ್ರದ ಪ್ರಧಾನ ತಂತ್ರಿಗಳಾದ ಬ್ರಹ್ಮಶ್ರೀ ಮುಲ್ಲಪಳ್ಳಿ ಕೃಷ್ಣನ್ ನಂಬೂದಿರಿ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ವೇಣುಗೋಪಾಲ್ ಭಟ್  ನೆರವೇರಿಸಿದರು. ಕೇರಳ ರಾಜ್ಯದ ಚಂಡೆ ಬಳಗದವರಿಂದ ಪೂಜಾ ಕಾರ್ಯಕ್ರಮಗಳ ಸಂದರ್ಭದಲ್ಲಿ ಚಂಡೆ ಸೇವೆಯು ನಡೆಯಿತು. ಈ ಮೂರು ದಿವಸಗಳ ಕಾಲ ಜರುಗಿದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಧ್ಯಾಹ್ನ ಹಾಗೂ ಸಂಜೆ ಸಾರ್ವಜನಿಕರಿಗೆ ಅನ್ನ ಸಂತರ್ಪಣ ಸೇವೆಯನ್ನು ನಡೆಸಲಾಯಿತು. ದೇವಸ್ಥಾನವನ್ನು ಮಹೋತ್ಸವದ ಪ್ರಯುಕ್ತ ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕಾವೇರಿ ಶಾಲೆಯಲ್ಲಿ ಅಚ್ಚುಕಟ್ಟಾಗಿ ನೆರವೇರಿದ ಬೀಳ್ಕೊಡುಗೆ ಹಾಗೂ ಪದವಿ ಪ್ರಧಾನ ಕಾರ್ಯಕ್ರಮ*

ಮಾರ್ಚ್ 6, 2026

*ಮೊಣ್ಣಂಡ ಕೆ.ಚೆಂಗಪ್ಪ ಹಾಗೂ ಚೆರಿಯಮನೆ ಕೃಷ್ಣಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮ*

ಮಾರ್ಚ್ 6, 2026

*ಬಸವೇಶ್ವರ ಸನ್ನಿಧಿಯಲ್ಲಿ ಮಳೆ ಪೂಜೆ*

ಮಾರ್ಚ್ 6, 2026

*ಮೊಣ್ಣಂಡ ಕೆ.ಚೆಂಗಪ್ಪ ಹಾಗೂ ಚೆರಿಯಮನೆ ಕೃಷ್ಣಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮ*

ಮಾರ್ಚ್ 6, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಮಾ.೬ : ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾ, ವಿರಾಜಪೇಟೆ ತಾಲ್ಲೂಕು, ಅಮ್ಮತ್ತಿ ಹೋಬಳಿ ಘಟಕ…

*ಬಸವೇಶ್ವರ ಸನ್ನಿಧಿಯಲ್ಲಿ ಮಳೆ ಪೂಜೆ*

ಮಾರ್ಚ್ 6, 2026

*ಸವ೯ ಜನರ ಪಾಲಿನ ಕಲ್ಯಾಣದ ಬಜೆಟ್ : ಶಾಸಕ ಡಾ.ಮಂಥರ್ ಗೌಡ ಶ್ಲಾಘನೆ*  

ಮಾರ್ಚ್ 6, 2026

*ಕೊಡಗಿನ ಜನರ ನಿರೀಕ್ಷೆ ಹುಸಿಯಾಗಿದೆ*

ಮಾರ್ಚ್ 6, 2026

*ಸಾಲದ ಶೂಲಕ್ಕೆ ತಳ್ಳಿದ ಬಜೆಟ್ : ವಿರಾಜಪೇಟೆ ಕ್ಷೇತ್ರದ ನಿರೀಕ್ಷೆಗಳು ಹುಸಿಯಾಗಿದೆ : ಬಿಜೆಪಿ ಟೀಕೆ*

ಮಾರ್ಚ್ 6, 2026

*ಅಸ್ಸಾಂನಲ್ಲಿ ಸುಖೋಯ್-30 ಯುದ್ಧ ವಿಮಾನ ಪತನ: ಇಬ್ಬರು ಪೈಲಟ್‌ಗಳು ಹುತಾತ್ಮ*

ಮಾರ್ಚ್ 6, 2026

*ಹಾರ್ಮುಜ್ ಬಂದ್ ಆದ್ರೂ ತೈಲಕ್ಕೆ ಬರಲ್ಲ ಕಂಟಕ!: ಭಾರತದ ಇಂಧನ ಸುರಕ್ಷತೆ ಬಗ್ಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಅಪ್ಡೇಟ್*

ಮಾರ್ಚ್ 6, 2026

*ಸಿದ್ದರಾಮಯ್ಯ ಬಜೆಟ್‌ನಲ್ಲಿ ಯಾರಿಗೆ ಲಾಭ, ಯಾರಿಗೆ ನಷ್ಟ?*

ಮಾರ್ಚ್ 6, 2026

*ಕರ್ನಾಟಕದಲ್ಲಿ 16 ವರ್ಷದೊಳಗಿನವರಿಗೆ ಸಾಮಾಜಿಕ ಜಾಲತಾಣ ನಿಷೇಧ*

ಮಾರ್ಚ್ 6, 2026

*ಕೊಡಗು ವಿದ್ಯಾ ಇಲಾಖಾ ನೌಕರರ ಸೌಹಾಧ೯  ಸಹಕಾರಿ ಸಂಘದ ಅಧ್ಯಕ್ಷರಾಗಿ ಹೆಚ್.ಎಸ್.ಚೇತನ್, ಉಪಾಧ್ಯಕ್ಷರಾಗಿ ಬಿ.ಬಿ.ಸ್ವಾತಿ ಅವಿರೋಧ ಆಯ್ಕೆ*

ಮಾರ್ಚ್ 6, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.