ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು k ಕಲೋತ್ಸವ ಕಾರ್ಯಕ್ರಮದಲ್ಲಿ ವಿರಾಜಪೇಟೆಯ ಕಾವೇರಿ ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳಾದ ಹನಿಯ ಎ ಚಿತ್ರಕಲೆ ಸ್ಪರ್ಧೆಯಲ್ಲಿ ಹಾಗೂ ಬೋವ್ವೆರಿಯಂಡ ಹನ್ಸಿಕ ಪೊನ್ನಪ್ಪ ಭರತನಾಟ್ಯ ಸ್ಪರ್ಧೆಯಲ್ಲಿ ಉತ್ತಮ ರೀತಿಯ ಪ್ರದರ್ಶನವನ್ನು ನೀಡಿ ನಾಲ್ಕನೇ ಸ್ಥಾನ ಗಳಿಸಿರುತ್ತಾರೆ. ಇವರಿಗೆ ಸಮಾಧಾನಕರ ಬಹುಮಾನದೊಂದಿಗೆ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು.

ತಮ್ಮ ಅದ್ಭುತ ಪ್ರತಿಭೆಯಿಂದ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮಾನ್ ಸುಧೇಶ್ ಬಿ. ಎಸ್, ಕಾರ್ಯದರ್ಶಿಯರಾದ ಶ್ರೀಮಾನ್ ವಿನೋದ್ ಪಿ. ಎನ್, ಮುಖ್ಯ ಶಿಕ್ಷಕಿಯಾದ ಪಾರ್ವತಿ ಯು.ಪಿ, ಸಂಯೋಜಕಿ ಯಾದ ಅಮೃತ ಅರ್ಜುನ್, ಶಿಕ್ಷಕ ಶಿಕ್ಷಕೇತರ ವೃಂದದವರು ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.







