
ಮಡಿಕೇರಿ ಫೆ.18 NEWS DESK : ಮಕ್ಕಂದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆಮ್ಮೆತ್ತಾಳು ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಿಯ ಅಷ್ಟಬಂಧ ಬ್ರಹ್ಮ ಕಲಶ ಮುಹೂರ್ತ ಫೆ.21 ಮತ್ತು 22ರಂದು ನಡೆಯಲಿದೆ. ಫೆ.21 ರಂದು ಬೆಳಿಗ್ಗೆ 8.30ರಿಂದ ಸಾಮೂಹಿಕ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಆದ್ಯ ಗಣಪತಿ ಹೋಮ, ನವಗ್ರಹ ಹೋಮ, ಶಿಖರ ಪೂಜೆ ಮತ್ತು ಪ್ರತಿಷ್ಠೆ ಬಳಿಕ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನೆರವೇರಲಿದೆ. ಸಂಜೆ 4 ಗಂಟೆಯಿಂದ ಸಪ್ತ ಶುದ್ಧಿ, ಶಾಂತಿ ಪ್ರಾಯಶ್ಚಿತ ಹೋಮ, ತತ್ವ ಹೋಮ, ಅಧಿವಾಸ ಹೋನಗಳು, ಸುದರ್ಶನ ಹೋಮ, ರಾಕ್ಷೋಘ್ನ ಹೋಮ, ಚಾಮುಂಡೇಶ್ವರಿ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ಪ್ರಾಕಾರ ಬಲಿ, ಬ್ರಹ್ಮಕಲಶಾಧಿವಾಸ, ಕುಂಭೇಶಕಲಶಾಧಿವಾಸ, ಚಾಮುಂಡೇಶ್ವರಿ ದೇವಿಯ ಬಿಂಬ ಪ್ರತಿಷ್ಠೆ, ಅಷ್ಟ ಬಂಧ ಲೇಪನ, ನಿದ್ರಾ ಕುಂಬಾಭಿಷೇಕ, ಪ್ರಸನ್ನ ಪೂಜೆ ನೆರವೇರಲಿದೆ. ಫೆ.22 ರಂದು ಬೆಳಿಗ್ಗೆ 6 ಗಂಟೆಯಿಂದ ಸ್ವಸ್ತಿ ವಾಚನ, ಗಣಯಾಗ, ದುರ್ಗಾ ಹೋಮ, ನಾಗಹೋಮ, ತತ್ವ ಹೋಮ, ಕಲಶಾದಿ ಪೂಜೆಗಳು ನೆರವೇರಲಿವೆ. ನಂತರ 11.37ರ ವೃಷಭ ಲಗ್ನ ಸುಮೂರ್ತದಲ್ಲಿ ಬ್ರಹ್ಮ ಕಲಶಾಭಿಷೇಕ, ನ್ಯಾಸ ಪೂಜೆ, ಪ್ರತಿಜ್ಞಾವಿಧಿ, ಮಹಾಪೂಜೆ, ನಾಗ ಪ್ರತಿಷ್ಠೆ, ನಾಗ ಸನ್ನಿಧಿಯಲ್ಲಿ ಕಲಶಾಭಿಷೇಕ, ಮಹಾಪೂಜೆ, ಗುಳಿಗ ದೈವ ಪ್ರತಿಷ್ಠೆ, ಕಲಶಾಭಿಷೇಕ, ಪರ್ವಸೇವೆ ಮತ್ತು ಪರಿವಾರ ದೈವಗಳ ಪ್ರತಿಷ್ಠೆ, ಮಹಾ ಮಂತ್ರಾಕ್ಷತೆ ಬಳಿಕ ಪ್ರಸಾದ ವಿತರಣೆ ಹಾಗೂ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನೆರವೇರಲಿದೆ. ಈ ಎಲ್ಲ ದೈವಿಕ ಕೈಂಕರ್ಯಗಳು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಎಡಪದವು ನಿತೀಶ ತಂತ್ರಿಗಳ ನೇತ್ರತ್ವದಲ್ಲಿ ನಡೆಯಲಿವೆ ಎಂದು ಶ್ರೀ ಚಾಮುಂಡೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷ ಕಟ್ಟೆಮನೆ ಗಣೇಶ್ ಹಾಗೂ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.








