
ಮಡಿಕೇರಿ ಫೆ.18 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರೌಢಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮುಕ್ತ ನಾಟಕ ಸ್ಪರ್ಧೆ ಏರ್ಪಡಿಸಲಾಗಿದೆ. ಮಡಿಕೇರಿಯಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಸಾಹಿತಿ ನಾ.ಡಿಸೋಜ ಅವರ ದತ್ತಿ ಆಶಯದಂತೆ ಈ ನಾಟಕ ಸ್ಪರ್ಧೆ ನಡೆಯಲಿದೆ. ನಾಟಕ ತಂಡದಲ್ಲಿ ಆರು ಮಂದಿ ಕಲಾವಿದರು ಇರಬೇಕು. 20 ನಿಮಿಷಗಳ ನಾಟಕ ಪ್ರದರ್ಶಿಸಬೇಕು. ಸಾಮಾಜಿಕ ಐತಿಹಾಸಿಕ ಪೌರಾಣಿಕ ಜಾನಪದ ಯಾವುದೇ ಪ್ರಕಾರದ ನಾಟಕಗಳನ್ನು ಪ್ರದರ್ಶಿಸಬಹುದು. ಈ ಸ್ಪರ್ಧೆಯು ಮಡಿಕೇರಿಯಲ್ಲಿ ಮಾರ್ಚ್ ಮೊದಲ ವಾರದಲ್ಲಿ ನಡೆಯಲಿದೆ. ನಾಟಕ ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತರು ದಿನಾಂಕ 25.02.2026 ರ ಒಳಗಾಗಿ ಈ ಕೆಳಗೆ ಸೂಚಿಸಿದ ಮೊಬೈಲ್ ಸಂಖ್ಯೆ 9113892396 ಗೆ ವಾಟ್ಸಪ್ ಮೂಲಕ ಕಳುಹಿಸ ತಕ್ಕದ್ದು ಅಥವಾ ಅಧ್ಯಕ್ಷರು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುದರ್ಶನ ವೃತ್ತದ ಬಳಿ, ಮಡಿಕೇರಿ. ಈ ವಿಳಾಸಕ್ಕೆ ಪತ್ರ ಮುಖೇನ ತಿಳಿಸಬೇಕಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಪತ್ರಿಕಾ ಪ್ರಕಟಣೆಯಲ್ಲಿ ಕೋರಿರುತ್ತಾರೆ.








